Monday, 5th December 2022

ಯುವಕರಲ್ಲೂ ಹೃದಯಾಘಾತ ಪ್ರಕರಣ ಹೆಚ್ಚಳ

ಕಳೆದ ಐದು ವರ್ಷದಲ್ಲಿ ಶೇ.೫೪ಕ್ಕೂ ಹೆಚ್ಚು ಹೃದಯಾಘಾತದ ಸಾವು 

ನಿಯಮಿತ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಸಹಕಾರಿ

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ವಿವಿಧ ಕಾರಣಕ್ಕೆ ತೀವ್ರ ಒತ್ತಡಕ್ಕೆ ಒಳಗಾಗುತ್ತಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಗೆ ಪ್ರಮುಖ ಕಾರಣವಾಗುತ್ತಿರುವುದು ಆತಂಕದ ಸಂಗತಿ. ಹೃದಯಾಘಾತಕ್ಕೆ ಒಳಗಾಗುತ್ತಿರುವವರಲ್ಲಿ ಯುವ ಸಮೂಹ ಹೆಚ್ಚು. ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಕಾಡಿರುವುದು ಯುವ ಸಮುದಾಯದ ಸಂರಕ್ಷಣೆ. ದಿನದಿಂದ ದಿನಕ್ಕೆ ಯುವ ಹಾಗೂ ಮಧ್ಯಮ ವರ್ಗದ ನಾಗರಿಕರು ನಾನಾ ವಿಧದ ಒತ್ತಡ ದಿಂದಾಗಿ ಅಧೀಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗು ತ್ತಿದ್ದಾರೆ. ಇದರ ಪರಿಣಾಮ ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯು, ಕಿಡ್ನಿ ವೈಫಲ್ಯದಂತಹ ಜೀವಹಾನಿಕಾರಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಇದಕ್ಕೆ ಸೂಕ್ತ ಪರಿಹಾರ ಹುಡುಕಲು ವೈದ್ಯಕೀಯ ಕ್ಷೇತ್ರ ಶ್ರಮಿಸುತ್ತಿದೆ. ಆದರೆ ಬದಲಾದ ಜೀವನ ಶೈಲಿ, ಶಾರೀರಿಕ ಸದೃಢತೆಗೆ ಜನತೆ ಅನುಸರಿಸುತ್ತಿರುವ ಮಾರ್ಗ, ಉತ್ತಮ ಆಹಾರ ಸೇವನೆಯಲ್ಲಿ ಆಗುತ್ತಿರುವ ಲೋಪ, ಕಾರ್ಯಕ್ಷೇತ್ರದಲ್ಲಿನ ವಿಪರೀತ ಒತ್ತಡ ಸಮಸ್ಯೆಯನ್ನು ನಿವಾರಿಸಲಾಗದೇ, ಸೂಕ್ತ ಪರಿಹಾರವನ್ನೂ ಹುಡುಕ ಲಾಗದೇ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.

ಹೃದಯದ ಮೇಲೆ ಒತ್ತಡ ಹೆಚ್ಚಾಗುವುದರಿಂದ ಕಾರ್ಡಿ ಯಾಕ್ ಅರೆಸ್ಟ್ ಆಗುತ್ತಿದ್ದು, ಜನಪ್ರಿಯ ವ್ಯಕ್ತಿಗಳ ಸಾವು ಮಾತ್ರ ಜನರಿಗೆ ತಿಳಿಯುತ್ತಿದೆ. ಆದರೆ ಮಧ್ಯಮ ಹಾಗೂ ಯುವ ಸಮುದಾಯದ ಸಾಕಷ್ಟು ದೊಡ್ಡ ಸಂಖ್ಯೆಯ ಯುವಕ ಯುವತಿಯರು ಈ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ವಿಪರ್ಯಾಸ ವೆಂದರೆ ಹೃದಯ ನಾಳಗಳಲ್ಲಿ ಶೇ ೫೦ರಷ್ಟು ಬ್ಲಾಕೇಜ್ ಇದ್ದವರು ಸಹ ಹೆಚ್ಚು ರಕ್ತದೊತ್ತಡದಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಚಿಕ್ಕ ವಯಸ್ಸಿನವರಿಗೂ ಹೃದಯಾಘಾತ: ಭಾರತೀಯರಲ್ಲಿ ಆಯುಸ್ಸಿನ ನಿರೀಕ್ಷೆ ಹೆಚ್ಚುತ್ತಿರುವ ನಡುವೆಯೇ ಜನ ಎಳೆಯ ವಯಸ್ಸಿನಲ್ಲೆ ದಿಢೀರ್ ಹೃದಯಾಘಾತ ಕ್ಕೊಳಗಾಗುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಶೇ.೫೦ರಷ್ಟು ಭಾರತೀಯರು ೫೫ ವಯೋಮಿತಿಯೊಳಗೆ ಹೃದಯಾಘಾತ ಕ್ಕಿಡಾಗುತ್ತಿದ್ದರೆ, ಶೇಕಡ ೨೫ರಷ್ಟು (ಎಲ್ಲಾ ರೀತಿಯ) ಹೃದಯಾಘಾತಗಳು ೪೦ರ ಆಸುಪಾಸಿನಲ್ಲಿ ಸಂಭವಿಸುತ್ತಿವೆ. ಆದ್ದರಿಂದ ಈ ವಿಷಯ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಹಾಗೂ ಜೀವನ ಶೈಲಿ ಬದಲಾಯಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ.

ಸಮಯ ಪ್ರಜ್ಞೆ ಹೃದ್ರೋಗಿಯ ಪ್ರಾಣ ಉಳಿಸಬಲ್ಲದು
ಹೃದಯಾಘಾತವಾದ ವ್ಯಕ್ತಿಯ ಬಳಿಯಿರುವವರು ಮತ್ತು ಅವರನ್ನು ಮೊದಲು ಪರೀಕ್ಷಿಸುವ ವೈದ್ಯರ ಸಮಯಪ್ರಜ್ಞೆ ಎಷ್ಟೋ ಹೃದ್ರೋಗಿಗಳ ಪ್ರಾಣವನ್ನು ಉಳಿಸಬಲ್ಲದು ಎಂದು ಸಾಗರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕೆ.ಎಸ್.ಕಿಶೋರ್ ತಿಳಿಸಿದ್ದಾರೆ. ನಿಯಮಿತ ವ್ಯಾಯಾಮ ಮಾಡದಿರು ವುದು, ಶಿಸ್ತಿನ ಜೀವನ ಕ್ರಮವನ್ನು ಅನುಸರಿಸದಿರುವುದು ಮತ್ತು ಆಹಾರ ಕ್ರಮದಲ್ಲಿ ಸರಿಯಾದ ನಿಯಮವಿಲ್ಲದಿರುವುದು ಮತ್ತು ಒತ್ತಡದಲ್ಲಿ ಕೆಲಸ ಮಾಡುವುದು ಇಂತಹ ಸಮಸ್ಯೆಗಳಿಗೆ ಕಾರಣ ಎನ್ನಬಹುದು. ಹೀಗಾಗಿ, ಪ್ರತಿ ವ್ಯಕ್ತಿ ದಿನನಿತ್ಯ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಲೇಬೇಕು. ಜಂಕ್ ಫುಡ್ ಬಳಕೆ ಮಾಡುವ ಹವ್ಯಾಸವನ್ನು ಬಿಟ್ಟುಬಿಡಬೇಕು. ಓದುವ, ಸಂಗೀತ ಕೇಳುವ, ಹಾಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆಗ ಆರೋಗ್ಯ ವಂತರಾಗಿರಲು ಸಾಧ್ಯವಾಗುತ್ತದೆ ಎಂದರು.

ಹೃದಯಾಘಾತವಾದಾಗ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಮತ್ತು ವೈದ್ಯರು ಆತನ ಸ್ಥಿತಿಯನ್ನು ಗುರುತಿಸುವುದು ಬಹಳ ಮುಖ್ಯ. ಅದನ್ನು ಗೋಲ್ಡನ್ ಟೈಮ್ ಎನ್ನುತ್ತೇವೆ ಎಂದ ಕಿಶೋರ್ ಅವರು ಇತ್ತೀಚೆಗೆ ನಾನು ಬೇರೆ ಆಸ್ಪತ್ರೆಯಲ್ಲಿದ್ದಾಗ ೮೪ ವರ್ಷದ ವೃದ್ಧರೊಬ್ಬರು ಉಬ್ಬಸ ಎಂಬ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರ ಆರೋಗ್ಯದ ಲಕ್ಷಣಗಳನ್ನು ಗಮನಿಸಿದ ನನಗೆ ಹೃದಯ ಸಂಬಂಧಿ ಸಮಸ್ಯೆಯಿರುವುದು ಕಾಣಿಸಿತು. ತಕ್ಷಣವೇ ಇಸಿಜಿ ಮಾಡಿಸಿದಾಗ ಅವರಲ್ಲಿ ಸಮಸ್ಯೆಯಿರುವುದು ಗಮನಕ್ಕೆ ಬಂತು. ತಕ್ಷಣವೇ ಎಂಜಿಯಾಗ್ರಫಿ ಮಾಡಿ, ಒಂದು ಬ್ಲಾಕೇಜ್ ಅನ್ನು ತೆರವುಗೊಳಿಸಿ ಸ್ಟಂಟ್ ಅಳವಡಿಕೆ ಮಾಡಲಾಯಿತು. ಕೇವಲ ಎಂಟು ನಿಮಿಷದಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು. ಆ ರೋಗಿ ಕೇವಲ ಎರಡು ದಿನದಲ್ಲಿಯೇ ಮನೆಗೆ ವಾಪಸ್ ಹೋಗುವ ಸ್ಥಿತಿಯಲ್ಲಿ ಗುಣುಮುಖರಾದರು.

ಹೃದಯ ಆರೋಗ್ಯಕ್ಕೆ ೫ ಸಲಹೆಗಳು
ಬಿಪಿ ಕಡಿಮೆ ಮಾಡಿಕೊಳ್ಳಬೇಕು.

ರಕ್ತದಲ್ಲಿಸಕ್ಕರೆ ಪ್ರಮಾಣ ಕಡಿಮೆ ಇರಬೇಕು

ಸೊಂಟದಲ್ಲಿ ಕೊಲೆಸ್ಟ್ರಾಲ್ ಬರದಂತೆ ನೋಡಿಕೊಳ್ಳಬೇಕು

ತೂಕ ಹೆಚ್ಚಾಗದಂತೆ ಮುತುವರ್ಜಿ ವಹಿಸಬೇಕು

ಅತಿಯಾದ ಆಸೆ ಇಟ್ಟುಕೊಳ್ಳಬಾರದು.

ಹೃದ್ರೋಗಿಗಳಲ್ಲಿನ ಅಪಾಯಕಾರಿ ಅಂಶಗಳು
ಧೂಮಪಾನ/ ಪರೋಕ್ಷ
ಧೂಮಪಾನ ಶೇ.೪೯
ಮಧುಮೇಹ ಶೇ.೧೧
ಅಽಕ ರತ್ತದೊತ್ತಡ ಶೇ.೯
ಬೊಜ್ಜು ಶೇ.೧೧
ಡಿಸ್ಲಿಪಿಡೆಮಿಯಾ ಶೇ.೧೪
ಕೌಟುಂಬಿಕ ಒತ್ತಡ ಶೇ.೧೬