Sunday, 22nd May 2022

ನ.26 ರಿಂದ ರಾಜ್ಯದಲ್ಲಿ ಮತ್ತೆ 3 ದಿನ ಭಾರಿ ಮಳೆ

Rain in Bangalore
covidಬೆಂಗಳೂರು: ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ನ.26 ರಿಂದ ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಯಾಗಲಿದೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಹಾಸನ. ದಾವಣ ಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಗಳಿವೆ. ಇನ್ನುಳಿದಂತೆ ಚಳಿ ಸಹ ರಾಜ್ಯದಲ್ಲಿ ಆರಂಭವಾಗಲಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕ ಬಳ್ಳಾಪುರ, ಮೈಸೂರು, ಚಾಮ ರಾಜನಗರ ಮತ್ತು ತುಮಕೂರಿನಲ್ಲಿ ನ.26ರಿಂದ ಮುಂದಿನ 3 ದಿನ ಭಾರಿ ಮಳೆಯಾಗಲಿದೆ.
ಚಂಡಮಾರುತದ ಕೇಂದ್ರ ಬಿಂದು ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿದೆ. ಇದರ ಪ್ರಭಾವ ದಿಂದ ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರದೇಶವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ ಸಾಧ್ಯತೆಯಿದೆ.