Sunday, 3rd July 2022

ಹೆಡಗೇವಾರ್ ಭಾಷಣ ಅಳವಡಿಸಿದರೆ ತಪ್ಪೇನಿದೆ?

10ನೇ ತರಗತಿ ಪಠ್ಯ ಪುಸ್ತಕದಲ್ಲಿ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಅಳವಡಿಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಪ್ರತಿಪಕ್ಷದ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಅಂಗುಲಿಮಾಲಾ ಎಂಬ ರಾಕ್ಷಸ ಪ್ರವೃತ್ತಿಯ ಬೇಟೆಗಾರನ ಪಾತ್ರವನ್ನೇ ಪಠ್ಯದಲ್ಲಿ ಅಳವಡಿಸಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಿದವರಿಗೆ ದೇಶಭಕ್ತನೊಬ್ಬನ ಭಾಷಣವನ್ನು ಅರಗಿಸಿಕೊಳ್ಳದಿರಲು ರಾಜಕೀಯ ಕಾರಣ ಗಳಲ್ಲದೇ ಬೇರೆನೂ ಅಲ್ಲ. ಹೆಡಗೇವಾರ್ ಅವರ ವಿಚಾರಗಳನ್ನು ಇಂದಿನ ಯುವಕರು ತಿಳಿದುಕೊಂಡರೆ
ಕಮ್ಯೂನಿ ವಿಚಾರಗಳನ್ನು ವಿರೋಧಿಸುತ್ತಾರೋ ಎಂಬ ಭಯ ಕಾಡುತ್ತಿರುವಂತಿದೆ. ಅನೇಕರಿಗೆ ಹೆಡಗೇವಾರ್ ಎಂದರೆ ಕೇವಲ ಆರ್‌ಎಸ್‌ಎಸ್ ಸಂಸ್ಥಾಪಕ ಎಂದಷ್ಟೇ ಗೊತ್ತು. ಆದರೆ ಅವರ ಹಿನ್ನಲೆ ಏನು? ಅವರ ಕೊಡುಗೆ ಏನು? ದೇಶಕ್ಕಾಗಿ ಅವರು ಏನು ಮಾಡಿದರು ಎಂಬ ಮಾಹಿತಿ ಮಾತ್ರ ಬಹಳ ಜನತೆಗೆ ಗೊತ್ತಿಲ್ಲ. ಹೀಗಾಗಿಯೇ ವಿನಾಕಾರಣ ವಿರೋಧಿಸುತ್ತಿದ್ದಾರೆ.

ವೃತ್ತಿಯಲ್ಲಿ ವೈದ್ಯರಾದ ಹೆಡಗೇವಾರ್ ಅವರು ಮನಸ್ಸು ಮಾಡಿದ್ದರೆ ಅಂದಿನ ಬ್ರಿಟಿಷ್ ಸರಕಾರದಲ್ಲೇ ಅತ್ಯುನ್ನತ ಹುದ್ದೆಯನ್ನು ಗಿಟ್ಟಿಸಿಕೊಂಡು ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ಅಂದಿನ ದಿನಗಳಲ್ಲಿ ಭಾರತೀಯರ ಮೇಲೆ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯಗಳನ್ನು ಕಂಡು ಹೆಡಗೇವಾರ್ ಅವರಿಗೆ ತಮ್ಮ ಜೀವನಕ್ಕಿಂತ ದೇಶದ ಭವಿಷ್ಯವೇ ಮುಖ್ಯ ಎಂಬ ನಿರ್ಧಾರಕ್ಕೆ ಬಂದರು. ಆ ಕುರಿತು ತೀವ್ರವಾಗಿ ಚಿಂತಿಸಿದ ಹೆಡಗೇವಾರ್ ಅವರಿಗೆ ಭಾರತದಲ್ಲಿ ಹಿಂದೂಗಳ ಮೇಲೆ ಹಿಂದಿನಿಂದ ನಡೆಯುತ್ತಿದ್ದ ವಿದೇಶಿ ದೌರ್ಜನ್ಯದ ಸಹಿಷ್ಣುತಾ ಗುಣ, ಹಿಂದೂಗಳು ಸೃಷ್ಟಿಸಿದ ವರ್ಗೀಕೃತ ಸಮಾಜ, ಅಸ್ಪೃಶ್ಯತೆ ಮುಂತಾದವುಗಳೆ ಹಿಂದೂಗಳ ಮೂಲ ಸ್ವಭಾವದಿಂದಲೇ ಬಂದೊದಗಿರುವಂತದ್ದು ಎಂಬ ನಿರ್ಧಾರ ದೃಢವಾಗುತ್ತಾ ಬಂತು.

ಇವಕ್ಕೆ ಅವರಿಗೆ ಕಂಡ ಪರಿಹಾರವೆಂದರೆ ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ, ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃ ತಿಕ ಒಕ್ಕೂಟವನ್ನು ಸ್ಥಾಪಿಸುವುದು. ಆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದೇ ಆರ್‌ಎಸ್‌ಎಸ್ ಎಂಬ ಸಂಘಟನೆ. ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಅನುಭವಿಸಿದ ಅನೇಕ ಕಷ್ಟಕರ ಸನ್ನಿವೇಶಗಳಲ್ಲಿ ಆರ್‌ಎಸ್‌ಎಸ್ ಮಹತ್ವದ ಕಾಯಕಗಳನ್ನು ನಡೆಸಿದೆ. ಜನ ಸಮುದಾಯವಾದ ಹಿಂದೂಗಳಲ್ಲಿ ಆರ್‌ಎಸ್‌ಎಸ್ ಸ್ವಾತಂತ್ರ್ಯದ ಬಗ್ಗೆ ಜಾಗೃತಿಯನ್ನು, ಒಗ್ಗಟ್ಟಿನ ಮಹತ್ವವನ್ನು ಅಂದು ಮೂಡಿಸಲು ಪ್ರಮುಖ ಪಾತ್ರವಹಿಸಿದೆ. ಅಂತಹವರ ಭಾಷಣವನ್ನು ಪಠ್ಯದಲ್ಲಿ ಅಳವಡಿಸಿದರೆ ತಪ್ಪೇನಿದೆ ಎಂಬುದನ್ನು ವಿರೋಽಸುವವರು ಪ್ರಶ್ನಿಸಿಕೊಳ್ಳಬೇಕಿದೆ.