Sunday, 14th August 2022

ಹವಾಮಾನ ವೈಪರೀತ್ಯ: ಶಾಸಕ ಭೈರತಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಹಾವೇರಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಉಪ ಚುನಾವಣೆಯ ಪ್ರಚಾರಕ್ಕಾಗಿ ಹೆಲಿಕ್ಯಾಪ್ಟರ್ ನಲ್ಲಿ ತೆರಳುತ್ತಿದ್ದ ಶಾಸಕ ಭೈರತಿ ಸುರೇಶ್ ಅವರ, ಹೆಲಿ ಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.

ಭಾನುವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶಾಸಕ ಭೈರತಿ ಸುರೇಶ್ ಅವರು ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದ ಅವರ ಹೆಲಿಕಾಪ್ಟರ್, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಾಳ ಗ್ರಾಮದ ಆಟದ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಅರ್ಧದಲ್ಲೇ ಬಸವಾಳ ಗ್ರಾಮದ ಆಟದ ಮೈದಾನದಲ್ಲಿ ಲ್ಯಾಂಡ್ ಆಗಿದ್ದರಿಂದ ಶಾಸಕ ಭೈರತಿ ಸುರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಿಢೀರ್ ತಮ್ಮೂರಿನ ಆಟದ ಮೈದಾನದಲ್ಲಿ ಇಳಿದ ಹೆಲಿಕ್ಯಾಪ್ಟರ್ ನೋಡಲು ಗ್ರಾಮಸ್ಥರ ದಂಡೇ ಬಸವನಾಳ ಗ್ರಾಮದಲ್ಲಿ ನೆರೆದಿತ್ತು.