Tuesday, 17th May 2022

ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳಿಗೆ ಸಹಾಯಹಸ್ತ

ಭಾರತದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದಿಂದ ಜನ ಜೀವನ ದುಸ್ತರವಾಗಿದೆ. ಜಿಡಿಪಿ ದರ ಶೇ.5ಕ್ಕೆೆ ಕುಸಿದಿರುವ ಪರಿಣಾಮ ಆರ್ಥಿಕ ಚೇತರಿಕೆ ಮಂದಗತಿಯಲ್ಲಿ ಸಾಗಲಿದೆ. ಇದನ್ನು ಸೂಕ್ಷ್ಮವಾಗಿ ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಂಡು ಆರ್ಥಿಕ ಸದೃಢತೆಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕಾಗಿದೆ.

ಈಗಾಗಲೇ ಕೆಲ ಬೃಹತ್ ಕಂಪನಿಗಳು ನಷ್ಟ ಅನುಭವಿಸುತ್ತಿಿದ್ದು, ಉದ್ಯೋೋಗಸ್ಥರನ್ನು ನಿರುದ್ಯೋೋಗಿಗಳನ್ನಾಾಗಿಸುತ್ತಿಿದೆ. ಈಗಾಗಲೇ ನಿರುದ್ಯೋೋಗ ಸಮಸ್ಯೆೆಯಿಂದ ಹೊರ ಬರದ ದೇಶಕ್ಕೆೆ ಮತ್ತಷ್ಟು ಹೊರೆಯಾಗಲಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದು, ಕಂಪನಿಯ ಚೆನ್ನೈ ಕೇಂದ್ರ ಕಚೇರಿಯಲ್ಲಿ 5 ದಿನಗಳ ಕಾಲ ಉತ್ಪಾಾದನಾ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆೆ ಉದ್ಯೋೋಗಿಗಳಿಗೆ ನೋಟಿಸ್ ನೀಡಲಾಗಿದ್ದು, ಸೆ. 10 ಮತ್ತು 11ರಂದು ಉತ್ಪಾಾದನಾ ಘಟಕ ಕಾರ್ಯ ನಿರ್ವಹಿಸುವುದಿಲ್ಲ. ಸೆ. 9ರಂದು ರಜೆ ಇರುವುದರಿಂದ ಒಟ್ಟು 5 ದಿನಗಳ ಕಾಲ ಅಶೋಕ್ ಲೇಲ್ಯಾಾಂಡ್ ಕಚೇರಿ ಮುಚ್ಚಲ್ಪಟ್ಟಿಿರುತ್ತದೆ ಎಂದು ತಿಳಿಸಲಾಗಿದೆ. ಕಳೆದ ತಿಂಗಳು ಅಶೋಕ್ ಲೇಲ್ಯಾಾಂಡ್ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ. 50ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿತ್ತು.

ಮಾರುತಿ ಸುಜುಕಿ ಕೂಡ ಗುರುಗ್ರಾಾಮ ಪ್ರೊೊಡಕ್ಷನ್ ಯೂನಿಟ್‌ಗಳಲ್ಲಿ ಸೆ. 7 ಮತ್ತು 8ರಂದು ಉತ್ಪಾಾದನೆ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಮಾರುತಿ ಸುಜುಕಿ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದ್ದರೂ ಉತ್ಪಾಾದನೆಯಲ್ಲಿ ಆಗಸ್‌ಟ್‌‌ನಲ್ಲಿ ಶೇ. 33.99ರಷ್ಟು ಕುಸಿತ ಕಂಡಿತ್ತು. ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳಲ್ಲಿ 1,11,370 ಯೂನಿಟ್‌ಗಳನ್ನು ಉತ್ಪಾಾದನೆ ಮಾಡಿತ್ತು. ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಪನಿ 1,68,725 ಯೂನಿಟ್‌ಗಳನ್ನು ಉತ್ಪಾಾದಿಸಿತ್ತು ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೋಮವಾರ ಬಿಎಸ್‌ಇಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಪ್ರಯಾಣಿಕರ ವಾಹನದಲ್ಲಿ ಕಳೆದ ತಿಂಗಳು 1,10,214 ಯೂನಿಟ್‌ಗಳನ್ನು ಉತ್ಪಾಾದಿಸಲಾಗಿದೆ. ಕಳೆದ ವರ್ಷದ ಇದೇ ತಿಂಗಳಿಲಿನಲ್ಲಿ 1,66,161 ಯೂನಿಟ್‌ಗಳನ್ನು ಉತ್ಪಾಾದಿಸಲಾಗಿತ್ತು.

ಹೀಗೆ ಎಲ್ಲ ಕಂಪನಿಗಳ ಆರ್ಥಿಕ ಸ್ಥಿಿತಿ ಶೋಚನೀಯವಾಗಿದೆ. ತಾರಕಕ್ಕೆೆ ಏರುತ್ತಿಿರುವ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಬಿಕ್ಕಟ್ಟು, ಷೇರು ಮಾರುಕಟ್ಟೆೆ ಮೇಲೆ ಪ್ರಭಾವ ಬೀರುತ್ತಿಿದೆ. ನಿಶ್ಚಿಿತ ಸರಕಾರ ರಚನೆಯಾಗುವ ತನಕ ಷೇರುಪೇಟೆಯಲ್ಲಿ ದೇಶೀಯವಾಗಿ ನಕಾರಾತ್ಮಕ ಪ್ರಭಾವ ಇದ್ದೆ ಇರುತ್ತದೆ ಎಂದು ಮಾರುಕಟ್ಟೆೆ ತಜ್ಞರು ಅಂದಾಜು ಮಾಡಿದ್ದಾರೆ. ಹೀಗೆ ಆರ್ಥಿಕ ಸಂಕಷ್ಟದಲ್ಲಿ ದೇಶ ಮುಂದುವರಿದರೆ ಜನರ ಭವಿಷ್ಯ ಚಿಂತಾಜನಕವಾಗಲಿದೆ. ಆದ್ದರಿಂದ ದೇಶದ ಮುಂದಿನ ಭವಿಷ್ಯವನ್ನು ಅರಿತು ಆರ್ಥಿಕ ಸಲಬತೆಗೆ ತಜ್ಞರ ಜತೆ ಚಿಂತನೆ ನಡೆಸಬೇಕಿದೆ. ಕುಸಿದಿರುವ ಆರ್ಥಿಕತೆಯಿಂದ ಹೊರಬರಲು ಹೊಸ ಕ್ರಿಿಯಾ ಯೋಜನೆಗಳನ್ನು ಕೈಗೊಳ್ಳಬೇಕಿದೆ. ಬೃಹತ್ ಉದ್ಯಮಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಮೂಲಕ ಅವುಗಳ ಸಹಾಯಕ್ಕೆೆ ಹೋಗಬೇಕಿದೆ. ಸರಕಾರವೇ ಪ್ರತಿಯೊಬ್ಬರಿಗೂ ಉದ್ಯೋೋಗ ನೀಡಲು ಅಸಾಧ್ಯವಾದುದು. ಆದ್ದರಿಂದ ಖಾಸಗಿ ಕಂಪನಿಗಳನ್ನು ಪ್ರೋೋತ್ಸಾಾಹಿಸುವ ಮೂಲಕ ಉದ್ಯೋೋಗಾವಕಾಶಕ್ಕೆೆ ಆದ್ಯತೆ ನೀಡಬೇಕಿದೆ. ಕೇಂದ್ರ ಸರಕಾರ ಕೈಗೊಳ್ಳುವ ನಿರ್ಧಾರಗಳು ಕಂಪನಿಗಳಿಗೆ ಅನುಕೂಲಕರವಾಗಿಬೇಕು.