ಪುತ್ತೂರು: ಹಿಜಾಬ್ ವಿವಾದದ ಮಧ್ಯೆಯೇ ಗುರುವಾರ ರಾಜ್ಯಾದ್ಯಂತ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಕಾಲೇಜುಗಳು ಆರಂಭವಾಗಿದ್ದು, ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯವಾಗಿದ್ದು, ಕೊನೆಗೂ ಪಟ್ಟು ಸಡಿಲಿಸಿದ 46 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಿದ್ದಾರೆ.