Saturday, 24th October 2020

ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್​ ನಿಧನ

ಉಡುಪಿ: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್​ (101) ಶನಿವಾರ ನಿಧನರಾದರು.

ಅವರು ಏರು ಮದ್ದಳೆಯ ಅನ್ವೇಷಕ ಎಂದೇ ಚಿರಪರಿಚಿತರಾಗಿದ್ದರು. ಅಮೆರಿಕ ಸೇರಿ ಹಲವು ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು. ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿಸುತ್ತಿದ್ದರು.

 

Leave a Reply

Your email address will not be published. Required fields are marked *