Friday, 2nd December 2022

ರೋಮಿಲಾ ಕೈಯಲ್ಲಿ ಇತಿಹಾಸ ವಿಲವಿಲ!

ಚಕ್ರವ್ಯೂಹ

1970 ರಿಂದ 2014 ರವರೆಗೆ ಭಾರತದ ಶಾಲೆ, ಕಾಲೇಜು, ವಿಶ್ವವಿದ್ಯಾಾಲಯಗಳಲ್ಲಿ ಪಠ್ಯವಾಗಿದ್ದ ಯಾವುದೇ ಚರಿತ್ರೆೆಯ ಪುಸ್ತಕ ತೆರೆದುನೋಡಿ; ಅಲ್ಲಿ ಸಂಪಾದಕೀಯ ಮಂಡಳಿ ಅಥವಾ ಲೇಖಕರ ಪಟ್ಟಿಿಯಲ್ಲಿ ರೋಮಿಲಾ ಥಾಪರ್ ಎಂಬ ಹೆಸರು ಕಡ್ಡಾಾಯವೆನ್ನುವಂತೆ ಇರುತ್ತದೆ ಮತ್ತು ಈ ಹೆಸರಿನ ಜೊತೆ ಕಡ್ಡಾಾಯವಾಗಿ ‘ಎಮಿನೆಂಟ್ ಹಿಸ್ಟೋೋರಿಯನ್’ (ಪ್ರಸಿದ್ಧ/ತಜ್ಞ ಇತಿಹಾಸಜ್ಞರು) ಎಂಬ ಉಪಾಧಿ ಸೇರಿಕೊಂಡಿರುತ್ತದೆ. ಪ್ರೈಮರಿ ಮತ್ತು ಹೈಸ್ಕೂಲ್‌ಗಳಿಗೆ ರಚನೆಯಾಗುತ್ತಿಿದ್ದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಬರೆಯುತ್ತಿಿದ್ದವರು ಇಲ್ಲವೇ ಮೇಲುಸ್ತುವಾರಿಯಲ್ಲಿ ಬರೆಸುತ್ತಿಿದ್ದವರು ಇವರೇ ಆದ್ದರಿಂದ, ಇವರ ಹೆಸರಿಲ್ಲದ ಚರಿತ್ರೆೆಯ ಪುಸ್ತಕಗಳೇ ಇರಲಿಲ್ಲ. ಮತ್ತು ಕೇಂದ್ರ ಸರಕಾರದ ಈ ಪಠ್ಯಕ್ರಮವನ್ನೇ ಹಲವು ರಾಜ್ಯ ಶಿಕ್ಷಣ ಇಲಾಖೆಗಳೂ ಅನುಸರಿಸುವುದರಿಂದ, ಸ್ಟೇಟ್ ಸಿಲೆಬಸ್‌ನ ಪಠ್ಯಗಳಲ್ಲೂ ಇವರ ನೆರಳು ದಟ್ಟವಾಗಿಯೇ ಇರುತ್ತಿಿತ್ತು. ಕಾದಂಬರಿಕಾರನಿಗೆ ತನ್ನ ಕತೆಯೊಳಗೆ ಯಾರನ್ನು ಬೇಕಾದರೂ ಹೀರೋ ಮಾಡುವ, ಕೊಲೆ ಮಾಡುವ ಅಧಿಕಾರಗಳಿರುವಂತೆ ರೋಮಿಲಾ ಥಾಪರ್ ಕೂಡ ಭಾರತದ ಇತಿಹಾಸವನ್ನು ಕಾದಂಬರಿಕಾರನ ಸ್ವಾಾತಂತ್ರ್ಯವಿಟ್ಟುಕೊಂಡು ಬರೆದರು. ನೂರಾರು ವರ್ಷ ಈ ದೇಶವನ್ನು ಆಳಿದ ಸಾಮ್ರಾಾಜ್ಯಗಳನ್ನು ಅರ್ಧ ಪುಟದಲ್ಲಿ ವಿವರಿಸಿ ಸೇಡು ತೀರಿಸಿಕೊಂಡರು. ಕುಡುಕ, ಸ್ತ್ರೀಲೋಲ, ಅಸಮರ್ಥ, ಕ್ರೂರ ರಾಜರುಗಳನ್ನು ವೈಭವೀಕರಿಸಿ ಒಂದೊಂದು ಅಧ್ಯಾಾಯಗಳನ್ನೇ ಮೀಸಲಿರಿಸಿ ಹೀರೋ ಮಾಡಿದರು. ಆಕ್ರಮಣಗಳನ್ನು ಮಹತ್ವಾಾಕಾಂಕ್ಷೆ ಎಂದರು. ಪ್ರತಿರೋಧಗಳನ್ನು ದಂಗೆ ಎಂದು ಕರೆದರು. ಕನಿಷ್ಠ ಮೂರು ಸಾವಿರ ವರ್ಷಗಳ ಭವ್ಯ ಇತಿಹಾಸವಿದ್ದ ದೇಶವನ್ನು ಹೇಡಿಗಳ, ಹೆಂಬೇಡಿಗಳ ನಾಡು ಎಂದು ಕರೆದೂ ದಕ್ಕಿಿಸಿಕೊಂಡರು! ಕಳೆದ ವರ್ಷ ಈಕೆ ಐಸಿಎಚ್‌ಆರ್ (ಇತಿಹಾಸ ಅಧ್ಯಯನದ ಭಾರತೀಯ ಪೀಠ) ಎಂಬ ಸಂಸ್ಥೆೆಯ ಜರ್ನಲ್‌ನ ಸಂಪಾದಕೀಯ ಮಂಡಳಿಯಿಂದ ತನ್ನನ್ನು ಕೈಬಿಟ್ಟದ್ದಕ್ಕೆೆ ಕೆಂಡಾಮಂಡಲರಾಗಿ ಬೆಂಕಿ ಕಾರಿದ್ದರು.

ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾಾಲಯದಲ್ಲಿ ‘ಪ್ರೊೊಫೆಸರ್ ಎಮೆರಿಟಾ’ ಎಂಬ ಹುದ್ದೆೆಯಲ್ಲಿ ತಾವು ಮುಂದುವರಿಯಬೇಕೇ ಬೇಡವೇ ಎಂಬುದನ್ನು ಚರ್ಚಿಸಬೇಕಾಗಿದೆ; ಹಾಗಾಗಿ ತಮ್ಮ ಕರಿಕ್ಯುಲಮ್ ವಿಟೇ (ಇದುವರೆಗಿನ ಶೈಕ್ಷಣಿಕ ಯಾತ್ರೆೆ, ಸಾಧನೆ ಎಲ್ಲವನ್ನೂ ತಿಳಿಸುವ ಪ್ರವರಪಟ್ಟಿಿ)ಯನ್ನು ವಿಶ್ವವಿದ್ಯಾಾಲಯಕ್ಕೆೆ ಸಲ್ಲಿಸಿ – ಎಂದು ಜೆಎನ್‌ಯು ಉಪಕುಲಪತಿಗಳು ಹೇಳಿದ್ದೇ ತಡ, ಇದೀಗ ರೋಮಿಲಾ ಥಾಪರ್‌ಗೆ ಮತ್ತೊೊಂದು ಸುತ್ತಿಿನ ಆಮಶಂಕೆ ಪ್ರಾಾರಂಭವಾಗಿದೆ. ವಿಶ್ವವಿದ್ಯಾಾಲಯವು ಈಕೆಯ ಬಳಿ ಪ್ರವರ ಒದಗಿಸಲು ಕೇಳುವುದು ಈಕೆಯ ವ್ಯಕ್ತಿಿತ್ವಕ್ಕೇ ಮಾಡುವ ಗಂಭೀರ ಅಪಮಾನ ಎಂದು ಕಮ್ಯುನಿಸ್ಟರು, ಮಾರ್ಕ್ಸಿಿಸ್ಟರು, ಪ್ರಗತಿಪರ ಜೀವಪರ ಚಿಂತಕರು, ಸಾಕ್ಷಿಪ್ರಜ್ಞೆಗಳು ಗೋಳಾಡುತ್ತಿಿದ್ದಾಾರೆ.

ಯಾವುದೇ ವ್ಯಕ್ತಿಿ 75 ವರ್ಷಕ್ಕಿಿಂತ ಹಿರಿಯರಾದರೆ ಅವರಿಗೆ ‘ಪ್ರೊೊಫೆಸರ್ ಎಮಿರೆಟಾ’ ಎಂಬ ಗೌರವ ಪ್ರಾಾಧ್ಯಾಾಪಕ ಸ್ಥಾಾನ ಕೊಡುವಾಗ ಸ್ವಲ್ಪ ಯೋಚಿಸಬೇಕು; ಅವರನ್ನು ವಿಶ್ವವಿದ್ಯಾಾಲಯದಲ್ಲಿ ಮುಂದುವರಿಸಬೇಕೇ ಬೇಡವೇ ಎಂಬುದನ್ನು ಕಾಲಕಾಲಕ್ಕೆೆ ಪುನರ್ವಿಮರ್ಶಿಸಬೇಕು – ಎಂಬುದು ವಿವಿ ನಿಯಮ. ರೊಮಿಲಾ ಥಾಪರ್‌ಗೆ ಈಗ 87 ವರ್ಷ ವಯಸ್ಸು. ಸರಕಾರೀ ನಿಯಮಗಳ ಪ್ರಕಾರ ನಿವೃತ್ತರಾಗಿ ಆಗಲೇ ಮೂರು ದಶಕಗಳು ಕಳೆದಿವೆ. ಆದರೆ ಅಲ್ಲಿಂದ ಇಲ್ಲಿನವರೆಗೂ ಆಕೆಯನ್ನು ಗೌರವ ಪ್ರಾಾಧ್ಯಾಾಪಿಕೆಯೆಂಬ ವಿಶೇಷ ಗೌರವ, ಕುರ್ಚಿ, ಸಂಬಳ, ಭತ್ಯೆೆ, ವಸತಿ ಕೊಟ್ಟು ಮುಂದುವರಿಸಿಕೊಂಡು ಬರಲಾಗಿದೆ.

ಈಗ 87ನೇ ವಯಸ್ಸಿಿನಲ್ಲಿ ಈಕೆ ವಿವಿ ಕ್ಯಾಾಂಪಸ್ಸಿಿನಲ್ಲಿ ಅಲ್ಲಿಂದಿಲ್ಲಿಗೆ ಠಳಾಯಿಸುತ್ತ, ಸುಳ್ಳು ಪೊಳ್ಳು ಇತಿಹಾಸಗಳನ್ನು ಕಂಡ ಕಂಡವರ ತಲೆಗೆ ತುಂಬಿಸುತ್ತ, ವಿವಿಯ ಸೆಮಿನಾರುಗಳಲ್ಲಿ ತನ್ನ ನಾರುವ ಪಳೆಯುಳಿಕೆಯಂಥ ಸಿದ್ಧಾಾಂತಗಳನ್ನೇ ಮತ್ತೆೆ ಮತ್ತೆೆ ಉರುಹೊಡೆಯುತ್ತ ಒಟ್ಟಾಾರೆಯಾಗಿ ಅಪ್ರಸ್ತುತರಾಗಿದ್ದಾಾರೆ ಎಂಬುದು ಎಲ್ಲರಿಗೆ ಗೊತ್ತಿಿರುವ ಸಂಗತಿ. ಹಾಗಿರುವಾಗ ಈಕೆಯನ್ನು ವೃತ್ತಿಿಯಲ್ಲಿ ಮುಂದುವರಿಸಿ ವಿಶ್ವವಿದ್ಯಾಾಲಯ ಗಳಿಸುವ ಘನತೆಯಾದರೂ ಏನು? ಅದನ್ನಾಾದರೂ ಮತ್ತೆೆ ವಿಮರ್ಶಿಸಬೇಕಲ್ಲವೆ? ಉಳಿದೆಲ್ಲ ವಿಷಯಕ್ಕೂ ರೂಲ್ಸು ರೂಲ್ಸು ಎಂದು ಬೊಬ್ಬಿಿರಿಯುವ ಕಮ್ಯುನಿಸ್ಟರು ಈಗ ಮಾತ್ರ, ರೂಲ್ಸು ಸಡಿಲಿಸಬೇಕು, ನೀತಿ-ನಿಯಮಾವಳಿಗಳನ್ನು ಗಾಳಿಗೆ ತೂರಿಯಾದರೂ ಸರಿಯೇ, ರೋಮಿಲಾ ಥಾಪರ್‌ಗೆ ವಿವಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿಿರುವುದು ತಿಕ್ಕಲುತನದ ಪರಮಾವಧಿ ಅಷ್ಟೆೆ!

ರೋಮಿಲಾ ಥಾಪರ್ ತನ್ನನ್ನು ಜೆಎನ್‌ಯುನ ಡೈನೋಸಾರ್ ಎಂದೇ ಹೇಳಿಕೊಳ್ಳುತ್ತಾಾರೆ. ಯಾಕೆಂದರೆ ಆಕೆ ಜವಹರ್‌ಲಾಲ್ ನೆಹರೂ ವಿವಿಗೆ ಪದಾರ್ಪಣೆ ಮಾಡಿದ್ದು 1970ರಲ್ಲಿ, ತನ್ನ ನಲವತ್ತನೆ ವಯಸ್ಸಿಿನಲ್ಲಿ. ಆ ವಿಶ್ವವಿದ್ಯಾಾಲಯ ಅದಾಗಷ್ಟೇ ಕಣ್ಣುಬಿಟ್ಟು ಗರಿಯೊಡೆಯುತ್ತಿಿದ್ದ ಕಾಲವದು. ಇಂಗ್ಲೆೆಂಡಿನಲ್ಲಿ ಎರಡು ಪದವಿಗಳನ್ನು ಗಳಿಸಿ ಭಾರತಕ್ಕೆೆ ಬಂದಿದ್ದ, ತನ್ನ ದೇಶದ ಇತಿಹಾಸವನ್ನು ಬ್ರಿಿಟಿಷ್ ಇತಿಹಾಸಕಾರರ ಮೂಲಕವೇ ಓದುತ್ತಿಿದ್ದ, ಸಂಸ್ಕೃತ ಕಲಿಯಲಾರೆನೆಂಬ ಧಾರ್ಷ್ಟ್ಯ ಬೆಳೆಸಿಕೊಂಡಿದ್ದ ಮತ್ತು ಇಲ್ಲಿನ ಎಲ್ಲ ಪ್ರಾಾಚೀನ ಕೃತಿಗಳನ್ನು ಅವುಗಳ ವಿದೇಶೀ ಅನುವಾದಗಳ ಮೂಲಕವೇ ಓದಿಕೊಂಡಿದ್ದ ಥಾಪರ್ ಜೆಎನ್‌ಯು ಎಂಬ ಕಾಕ (ಕಾಂಗ್ರೆೆಸ್, ಕಮ್ಯುನಿಸ್‌ಟ್‌) ಪಂಡಿತರ ವಲಯಕ್ಕೆೆ ನೂರಕ್ಕೆೆ ನೂರು ಹೊಂದುವ ವ್ಯಕ್ತಿಿಯಾಗಿದ್ದರು. ಅತ್ಯುಗ್ರ ಕಮ್ಯುನಿಸ್‌ಟ್‌ ಆಗಿದ್ದ ಥಾಪರ್, ಜೆಎನ್‌ಯುನ ಮುಂದಿನ ನಾಲ್ಕು ದಶಕಗಳ ಹಣೆಬರಹ ಬರೆದ ಬುದ್ಧಿಿಜೀವಿಗಳ ವಲಯದಲ್ಲಿ ಸ್ಟಾಾರ್ ಪರ್ಫಾರ್ಮರ್ ಆಗಿದ್ದರು. ಸಿಪಿಎಂ ಕಾರ್ಯಕರ್ತ ಮತ್ತು ಕಟ್ಟಾಾ ಎಡಪಂಥೀಯ ಪತ್ರಕರ್ತನಾಗಿದ್ದ ರಮೇಶ್ ಥಾಪರ್ ಈಕೆಯ ಪತಿ. ಈತ ಇನ್ನೋೋರ್ವ ಎಡ ಪತ್ರಕರ್ತ ಕರಣ್ ಥಾಪರ್‌ನ ಕಸಿನ್. ಕರಣ್‌ನ ಮಾವನನ್ನು ಜವಹರ್‌ಲಾಲ್ ನೆಹರೂರ ಸೋದರಸೊಸೆಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಮ್ಯುನಿಸ್‌ಟ್‌, ಮಾರ್ಕ್ಸಿಿಸ್‌ಟ್‌, ನೆಹ್ರೂವಿಯನ್, ಸೆಕ್ಯುಲರ್ – ಇದು ರೋಮಿಲಾ ಥಾಪರ್‌ರ ಬಿರುದಬಾವಲಿ. ಕಾಂಗ್ರೆೆಸ್ ಯುಗದ ರಾಷ್ಟ್ರೀಯ ಬುದ್ಧಿಿಜೀವಿ ಎಂದು ಕರೆಸಿಕೊಳ್ಳುವುದಕ್ಕೆೆ ಇದಕ್ಕಿಿಂತ ಬೇರೇನಾದರೂ ಬೇಕೇನು?

60ರ ದಶಕದಲ್ಲಿ ಕೇಂದ್ರ ಸರಕಾರ ಭಾರತದ ಪ್ರಾಾಥಮಿಕ ಶಾಲೆಗಳಿಗೆ ಇತಿಹಾಸ ಪಠ್ಯಗಳನ್ನು ಬರೆಯಲು ಈಕೆಯಲ್ಲಿ ಕೇಳಿಕೊಂಡಿತು. ರೋಮಿಲಾ, ‘ಭಾರತದ ಪ್ರಾಾಚೀನ ಚರಿತ್ರೆೆ ಮತ್ತು ಮಧ್ಯಕಾಲೀನ ಇತಿಹಾಸ’ ಎಂಬ ಎರಡು ಪುಸ್ತಕಗಳನ್ನು ಬರೆದರು. ಭಾರತ ಅನಾಗರಿಕರ ನಾಡಾಗಿತ್ತು. ಆರ್ಯರು ಇಲ್ಲಿಗೆ ಇರಾನ್ ಅಥವಾ ಮಧ್ಯ ಏಷ್ಯಾಾದಿಂದ ಬಂದರು. ಅವರಿಗೂ ಇಲ್ಲಿನ ಮೂಲನಿವಾಸಿಗಳಿಗೂ ದೊಡ್ಡಮಟ್ಟದ ಕದನವೇ ಆಯಿತು. ಆದರೆ, ತಂತ್ರಜ್ಞಾಾನ ಮತ್ತು ಸಂಖ್ಯೆೆಯಲ್ಲಿ ಮುಂದಿದ್ದ ಆರ್ಯರು ಮೂಲನಿವಾಸಿಗಳನ್ನು ಭಾರತದ ದಕ್ಷಿಣಕ್ಕೆೆ ತಳ್ಳಿಿದರು. ಹಾಗೆ ತಳ್ಳಲ್ಪಟ್ಟವರೇ ದ್ರಾಾವಿಡರು. ಘಜ್ನಿಿ ಭಾರತಕ್ಕೆೆ ದಂಡೆತ್ತಿಿ ಬಂದುದು ತನ್ನ ಸಾಮ್ರಾಾಜ್ಯವನ್ನು ಬೆಳೆಸಲು ಬೇಕಾದ ಮೂಲಧನ ಸಂಗ್ರಹಿಸುವುದಕ್ಕಾಾಗಿ. ಮೌರ್ಯ, ಗುಪ್ತರ ಕಾಲದಲ್ಲಿ ಆಯಾ ರಾಜರಿಗೆ ತಮ್ಮ ಪ್ರಭುತ್ವದ ಅಸ್ತಿಿತ್ವವನ್ನು ಉಳಿಸಿಕೊಳ್ಳುವುದೇ ಮಹತ್ಸಾಾದನೆಯಾಗಿತ್ತು. ಅಖಂಡಭಾರತವನ್ನು ಮೊದಲ ಬಾರಿಗೆ ಆಳಿದವರು ಮುಘಲರು. ಅವರು ಈ ದೇಶಕ್ಕೆೆ ಭವ್ಯವಾದ ಸಂಸ್ಕೃತಿಯನ್ನು ಕೊಟ್ಟರು. ಧರ್ಮಸಹಿಷ್ಣುಗಳಾಗಿದ್ದರು; ಧರ್ಮಭೀರುಗಳಾಗಿದ್ದರು; ಕಲೋಪಾಸಕರಾಗಿದ್ದರು; ಮಾನವತಾವಾದಿಗಳಾಗಿದ್ದರು. ಮುಘಲರಿಂದಲೇ ಈ ದೇಶ ಉದ್ಧಾಾರವಾಯಿತು. ಮುಂದೆ ಈ ದೇಶವನ್ನು ಆಳಿದ ಬ್ರಿಿಟಿಷರು, ಮಾಡಿದ ಕೇಡಿಗಿಂತ ಸುಧಾರಣೆಯೇ ಹೆಚ್ಚು. ಭಾರತಕ್ಕೆೆ ಸುಸಂಸ್ಕೃತ ನಡೆವಳಿಕೆಯನ್ನು ಕಲಿಸಿಕೊಟ್ಟವರು ಬ್ರಿಿಟಿಷರು.

ಇಂಥ ಮಹಾಮಹಿರಮರೆಲ್ಲ ಆಳಿಹೋಗಿರದಿದ್ದರೆ ನಮ್ಮವರು ಇನ್ನೂ ಗಡ್ಡೆೆಗೆಣಸು ತಿನ್ನುತ್ತ ಬದುಕುತ್ತಿಿದ್ದರು – ಹೀಗೆ ಹರಿಯಿತು ರೋಮಿಲಾ ಥಾಪರ್ ವಿಚಾರಧಾರೆ. ಎಲ್ಲಕ್ಕಿಿಂತ ಮುಖ್ಯವಾಗಿ ಈಕೆ ಭಾರತದ ಇತಿಹಾಸದಲ್ಲಿ ರಕ್ತದಲ್ಲಿ ಬರೆದ ಸಾಲುಗಳಂತಿರುವ ಕೆಲವು ಮಹತ್ವದ ಸಂಗತಿಗಳನ್ನೇ ಅಲ್ಲಗಳೆದಿದ್ದರು. ರೋಮಿಲಾ ಪ್ರಕಾರ ಘಜ್ನಿಿ ಸೋಮನಾಥ ದೇವಾಲಯವನ್ನು ಒಡೆಯಲೇ ಇಲ್ಲ! ಅಂಥದೊಂದು ಘಟನೆ ಚರಿತ್ರೆೆಯಲ್ಲಿ ನಡೆದುಹೋಗಿದೆಯೆಂಬುದಕ್ಕೆೆ ಸಾಕ್ಷಿಯೇ ಇಲ್ಲವೆಂದು ಹೇಳಿದರೀಕೆ! 1969ರಲ್ಲಿ ಸಾಂಸದರು ಈಕೆಯ ಹೊಸ ಬಗೆಯ ಇತಿಹಾಸ ಪುಸ್ತಕಗಳನ್ನು ಓದಿ ಕೆಂಡಾಮಂಡಲರಾಗಿ ದೊಡ್ಡ ಗಲಾಟೆಯನ್ನೇ ಎಬ್ಬಿಿಸಿದರು. ಈ ಇತಿಹಾಸ ಕೃತಿಗಳನ್ನು ಮುಟ್ಟುಗೋಲು ಹಾಕಬೇಕೆಂಬ ಒತ್ತಾಾಯ ಕೇಳಿಬಂತು. ಸ್ವಾಾತಂತ್ರ್ಯ ಪಡೆದು ಆಗಷ್ಟೇ ಅಂಬೆಗಾಲಿಡುತ್ತಿಿದ್ದ ದೇಶಕ್ಕೆೆ ತನ್ನ ಅಸ್ಮಿಿತೆಯನ್ನು ನೆನಪಿಸಿಕೊಂಡು ಮುನ್ನುಗ್ಗಲು ಬೇಕಾದ ರಕ್ತಪೂರಣ ಮಾಡುವ ಬದಲು ಈಕೆ ಬರೆದ ಇತಿಹಾಸ ಶಾಲೆಗಳಲ್ಲಿ ಷಂಡ ಜನಾಂಗವನ್ನು ಸೃಷ್ಟಿಿಸುತ್ತದೆ ಎಂಬ ಕೂಗೆದ್ದಿತು. ಆದರೆ, ನೆಹರೂ ಪುತ್ರಿಿಯ ಕೃಪಾಕಟಾಕ್ಷ ಈಕೆಗೆ ಬಲವಾಗಿತ್ತು. ಜೆಎನ್‌ಯು ಎಂಬ ಎಡಚರ ಆಡುಂಬೊಲದಲ್ಲಿ ಈಕೆ ಧ್ರುವತಾರೆಯಾಗಿ ಪ್ರತಿಷ್ಠಾಾಪಿಸಲ್ಪಟ್ಟರು.

ಅಲ್ಲಿಂದ ಮುಂದೆ ಈಕೆ ನಡೆದದ್ದೇ ದಾರಿ, ಹೇಳಿದ್ದೇ ಶಾಸನ, ಬರೆದದ್ದೇ ಇತಿಹಾಸ! ಕೇಂದ್ರ ಸರಕಾರದ ಸುಪರ್ದಿಯಲ್ಲಿರುವ ಎನ್‌ಸಿಇಆರ್‌ಟಿ ಇಲಾಖೆಯ ಪಠ್ಯಪುಸ್ತಕಗಳಿಗೆ ಈಕೆಯೇ ಮುಖ್ಯ ಇತಿಹಾಸ ಲೇಖಕಿ! ಮುಂದಿನ ಮೂವತ್ತು ವರ್ಷಗಳ ಕಾಲ ಶಾಲಾವಿದ್ಯಾಾರ್ಥಿಗಳು ಆರ್ಯರ ಆಕ್ರಮಣದ ಸಿದ್ಧಾಾಂತವನ್ನು ಓದಿಯೇ ಓದಿದರು! ಕೆಲವು ದಶಕಗಳು ಕಳೆದ ಮೇಲೆ ರೋಮಿಲಾರ ಸಿದ್ಧಾಾಂತ ಬದಲಾಯಿತು. ಆಕ್ರಮಣವಾಗಿದೆಯೆಂಬುದಕ್ಕೆೆ ಒಂದೇ ಒಂದು ಕುರುಹೂ ಸಿಗದ ಹಿನ್ನೆೆಲೆಯಲ್ಲಿ, ಆರ್ಯರು ಭಾರತಕ್ಕೆೆ ವಲಸೆ ಬಂದು ಇಲ್ಲಿನ ಜನಜೀವನದೊಂದಿಗೆ ಬೆರೆತರು ಎಂಬ ಹೊಸ ಸಿದ್ಧಾಾಂತ ಬಂತು. ಮುಂದೆ, ವಿಜ್ಞಾಾನಿಗಳು ಭಾರತದ ಮತ್ತು ಮಧ್ಯ ಏಷ್ಯಾಾದ ಸಾವಿರಾರು ಜನರ ಡಿಎನ್‌ಎ ಪರೀಕ್ಷೆ ನಡೆಸಿ, ಭಾರತದಲ್ಲಿ ಹೊರಗಿಂದ ಬಂದು ಬೆರೆತುಹೋದ ಜನರಿರುವ ಸಾಧ್ಯತೆ ಅತ್ಯಂತ ಕ್ಷೀಣ; ಇಲ್ಲಿದ್ದವರೆಲ್ಲ ಪುರಾತನ ಕಾಲದಿಂದಲೂ ಇಲ್ಲಿಯೇ ಇದ್ದವರು ಹೊರತು ಹೊರಗಿನಿಂದ ಬಂದವರಲ್ಲ ಎಂಬುದನ್ನು ದಾಖಲೆ ಸಮೇತ ತೋರಿಸಿದರು. ರೋಮಿಲಾ ಎಂಥ ಭಂಡರೆಂದರೆ, ಕೊನೆಗೂ (ಇಂದಿಗೂ) ತನ್ನ ಆರ್ಯ-ದ್ರಾಾವಿಡ ಸಿದ್ಧಾಾಂತವನ್ನು ಬದಲಿಸಿಕೊಳ್ಳಲಿಲ್ಲ! ಅಂತೂ, ಚರಿತ್ರೆೆಯ ಸಂಶೋಧನೆ ವೈಜ್ಞಾಾನಿಕವಾಗಿ ನಡೆಯಬೇಕು ಎಂದು ಬೊಬ್ಬೆೆ ಹಾಕುವ ಎಡ ಬುದ್ಧಿಿಜೀವಿಗಳು, ವೈಜ್ಞಾಾನಿಕ ಪುರಾವೆ ತಮ್ಮ ಸಿದ್ಧಾಾಂತಕ್ಕೆೆ ವಿರುದ್ಧವಾಗಿದ್ದಾಾಗ ಅದನ್ನೂ ಪೃಷ್ಟದಡಿ ಒತ್ತಿಿಹಿಡಿಯುತ್ತಾಾರೆ ಎಂದಾಯಿತು.

ರೋಮಿಲಾ ಥಾಪರ್ ಬರೆದ ಯಾವ ಪಠ್ಯಪುಸ್ತಕದಲ್ಲೂ ಮೌರ್ಯ, ಗುಪ್ತ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಚಾಂದೇಲ, ವಿಜಯನಗರ, ಮರಾಠ, ರಜಪೂತ ಮುಂತಾದ ಸಾಮ್ರಾಾಜ್ಯಗಳ ಬಗ್ಗೆೆ ವಿಸ್ತೃತವಾದ ವಿವರಣೆಗಳು ಸಿಗುವುದಿಲ್ಲ. ಈ ಪದ್ಧತಿ ಇಂದೂ ಮುಂದುವರಿದಿದೆ. ಇತಿಹಾಸ ಪಠ್ಯದ ಮುಕ್ಕಾಾಲುಪಾಲು ಆವರಿಸಿರುವುದೆಲ್ಲ ಮುಸ್ಲಿಿಂ ರಾಜರ ವೈಭವದ ವರ್ಣನೆಯೇ. ಸುಮಾರು ಮುನ್ನೂರೈವತ್ತು ವರ್ಷ ದಕ್ಷಿಣ ಭಾರತವನ್ನು ಆಳಿ, ಮುಸ್ಲಿಿಮರನ್ನು ಸಮರ್ಥವಾಗಿ ತಡೆದಿದ್ದ ವಿಜಯನಗರ ಸಾಮ್ರಾಾಜ್ಯದ ಬಗ್ಗೆೆ ಇಂದಿಗೂ ಎನ್‌ಸಿಇಆರ್‌ಟಿ ಪಠ್ಯಗಳಲ್ಲಿರುವ ವಿವರ ಅಷ್ಟಕ್ಕಷ್ಟೆೆ.

ನಾವು ಕರ್ನಾಟಕದವರಾದರೂ ಅಷ್ಟೆೆ; ವಿಜಯನಗರದ ಹೆಮ್ಮೆೆಯ ದೊರೆಯಾಗಿದ್ದ ಎರಡನೇ ದೇವರಾಯನ ಕಾಲದಲ್ಲಿ ಕನ್ನಡ ಸಾಮ್ರಾಾಜ್ಯ ಬರ್ಮಾದವರೆಗೆ ಹರಡಿಕೊಂಡಿತ್ತು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಶಿವಾಜಿಯ ಬಗ್ಗೆೆ ಒಂದೆರಡು ಪುಟಗಳ ವಿವರಣೆ ಬಂದರೆ ಅದೇ ದೊಡ್ಡದು. ಮಿಠಾಯಿ ಡಬ್ಬದೊಳಗೆ ಅವಿತು ಜೈಲಿನಿಂದ ಪಾರಾದನೆಂಬ ಕತೆಯನ್ನು ಅವನೊಬ್ಬ ಹೇಡಿ ಎಂಬ ಭಾವನೆ ಬರುವಂತೆ ಬರೆಯಲಾಗಿರುತ್ತದೆ. ಭಾರತದ ಎಲ್ಲೆೆಲ್ಲಿ ಸಾಮ್ರಾಾಜ್ಯ ವಿಸ್ತರಿಸಿದ್ದರೂ ಮುಘಲರಿಗೆ ಈಶಾನ್ಯ ಭಾರತವನ್ನು ಮಾತ್ರ ಅಭೇದ್ಯದುರ್ಗವಾಗಿಸಿಬಿಟ್ಟಿಿದ್ದ ಅಹೋಮಿ ರಾಜರುಗಳ ಕತೆಗಳನ್ನು ಯಾವ ಇತಿಹಾಸ ಪಠ್ಯ ಹೇಳಿದೆ? ಅದೇ ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನಂಥ ಕಳ್ಳಕೊರಮ ಮುಘಲ್ ರಾಜರುಗಳ ಬಗ್ಗೆೆ ಧಂಡಿಯಾಗಿ ಓದಿಕೊಂಡಿದ್ದೇವೆ! ತನ್ನ ಹದಿನಾಲ್ಕನೇ ವಯಸ್ಸಿಿನಲ್ಲೇ ಹಿಂದೂಗಳ ತಲೆ ಕತ್ತರಿಸುವ ಕೆಲಸ ಶುರುಹಚ್ಚಿಿಕೊಂಡ ಅಕ್ಬರ್‌ನ ಕ್ರೂರತೆ ಅವನ ಧರ್ಮಸಹಿಷ್ಣುತೆಯ ಕಟ್ಟುಕತೆಗಳಲ್ಲಿ ಮುಚ್ಚಿಿಹೋಗಿದೆ. ಕುಡುಕ ಹುಮಾಯೂನ್ ಅದೆಷ್ಟು ದುರ್ಬಲನಾಗಿದ್ದನೆಂದರೆ ತನ್ನ ತಲೆ ಉಳಿಸಿಕೊಳ್ಳಲು ಇರಾನಿನ ಮಾವನ ಮನೆಗೆ ಹೋಗಿ ಅಡಗಿಕೊಂಡಿದ್ದನೆಂಬ ಸತ್ಯವನ್ನು ಈ ಪಠ್ಯಗಳು ನಮಗೆ ಹೇಳಿಯೇ ಇಲ್ಲ. ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಸಿದ ಔರಂಗಜೇಬ ಈ ಎಡ ಚರಿತ್ರಕಾರರ ಕೈಯಲ್ಲಿ ‘ಜಿಂದಾ ಪೀರ್’ (ಜೀವಂತ ಸಂತ) ಆಗಿಹೋದ!

ಭಾರತದಲ್ಲಿ ಮುಸ್ಲಿಿಂ ಆಕ್ರಮಣದ ಮೊದಲು ‘ರಿಲಿಜನ್’ ಎಂಬ ಕಲ್ಪನೆಯೇ ಇರಲಿಲ್ಲ. ಒಬ್ಬ ದೇವರು, ಒಂದು ಪವಿತ್ರಗ್ರಂಥ, ದೇವರ ಆಜ್ಞೆಗಳು, ದೇವದೂತರು – ಇತ್ಯಾಾದಿ ಯಾವುದೂ ಇರಲಿಲ್ಲ. ಮನುಷ್ಯ ಈ ಜಗತ್ತಿಿನಲ್ಲಿ ನೆಮ್ಮದಿಯಿಂದ ಬಾಳಿಬದುಕಲು ಇವೆಲ್ಲ ವ್ಯವಸ್ಥೆೆಗಳ ಅಗತ್ಯವಿಲ್ಲ ಎಂದು ಬಗೆದವರು ಭಾರತೀಯರು. ಹಾಗಾಗಿ ಇಲ್ಲಿನ ಇತಿಹಾಸ ಬರೆಯುವವರು ಮೊದಲು ಭಾರತದ ಆತ್ಮವನ್ನು ಅರ್ಥಮಾಡಿಕೊಳ್ಳಬೇಕಿತ್ತು. ಆದರೆ ವಿದೇಶದ ಪಂಡಿತರಿಂದ ಬಂದದ್ದನ್ನಷ್ಟೇ ತೀರ್ಥವೆಂದು ಕುಡಿಯುತ್ತಿಿದ್ದ ರೋಮಿಲಾ ಮತ್ತವರ ಪಡೆ ಹುಟ್ಟಿಿಸಿದ ಅಧ್ವಾಾನ ಒಂದೆರಡಲ್ಲ. ಇವರು ಭಾರತದಲ್ಲಿ ಹಿಂದೂ ಎಂಬ ರಿಲಿಜನ್ ಇತ್ತು; ಜಾತಿವ್ಯವಸ್ಥೆೆ ಇತ್ತು ಎಂಬ ವಿದೇಶೀ ಸಿದ್ಧಾಾಂತಗಳನ್ನು ಒಪ್ಪಿಿಕೊಂಡು ಮುಂದುವರಿದಿದ್ದರಿಂದ ಇವರಿಗೆ ಇಲ್ಲಿ ಕಾರ್ಮಿಕರ ಶೋಷಣೆ ಕಾಣಿಸಿತು; ಪುರೋಹಿತಶಾಹಿಯ ದೌರ್ಜನ್ಯ ಕಾಣಿಸಿತು.

ಇಂದು ಜೆಎನ್‌ಯು ಪ್ರಣೀತ ಎಡಸಿದ್ಧಾಾಂತಿಗಳು ಸಹಸ್ರನಾಮದಂತೆ ಪಠಿಸುತ್ತಿಿರುವ ಬ್ರಾಾಹ್ಮಿಿನಿಕಲ್ ಮನಸ್ಥಿಿತಿ ಎಂಬ ಪದಪುಂಜವನ್ನು ಟಂಕಿಸಿದವರು ರೋಮಿಲಾ ಅವರೇ. ವೇದಗಳನ್ನು ಗೌರವಿಸಿದವರು ಇವರ ದೃಷ್ಟಿಿಯಲ್ಲಿ ಬ್ರಾಾಹ್ಮಿಿನಿಕಲ್ ಆದರು. ಅವರೇ ಮುಂದೆ ಪುರೋಹಿತಶಾಹಿ, ಕೋಮುವಾದಿ, ಮನುವಾದಿ, ಚೆಡ್ಡಿಿ, ಬಜರಂಗಿ ಇತ್ಯಾಾದಿ ಆಗುತ್ತಾಾಹೋದರು. ಭಾರತದ ನೈಜ ಪರಿಸ್ಥಿಿತಿಯನ್ನು ಎಂದೂ ಕಣ್ಣಾಾರೆ ಪರೀಕ್ಷಿಸದ, ತನ್ನ ಕ್ಯಾಾಂಪಸ್ಸಿಿನ ಏರ್ ಕಂಡೀಷನ್‌ಡ್‌ ಕೋಣೆಯಿಂದ ಎಂದೂ ಹೊರಬಂದು ಸುಡುನೆಲವನ್ನು ತುಳಿಯದಿದ್ದ ರೋಮಿಲಾ ಥಾಪರ್ ಕೇವಲ ಪುಸ್ತಕದ ಬದನೆಕಾಯಿಗಳನ್ನು ಓದಿಕೊಂಡು ತನ್ನ ಸಿದ್ಧಾಾಂತವಾಗಿ ಭಟ್ಟಿಿ ಇಳಿಸಿದರು. ಅದರ ಮುಂದಿನ ಹಂತವಾಗಿ ಬಾಬ್ರಿಿ ಮಸೀದಿಯ ಕೆಳಗೆ ರಾಮನ ಜನ್ಮಭೂಮಿ ಇರಲಿಕ್ಕೆೆ ಸಾಧ್ಯವೇ ಇಲ್ಲ ಎಂಬ ಹೊಸ ಸಿದ್ಧಾಾಂತ ಹುಟ್ಟಿಿತು. ಭಾರತೀಯ ಪುರಾತತ್ವ ಇಲಾಖೆ 1950 ಮತ್ತು 70ರ ದಶಕಗಳಲ್ಲಿ ಹಾಗೂ 1992ರಲ್ಲಿ – ಒಟ್ಟು ಮೂರು ಬಾರಿ ಅತ್ಯಂತ ವಿಸ್ತೃತವಾದ ಉತ್ಖನನ ಕಾರ್ಯ ನಡೆಸಿ, ಅಲ್ಲಿ ನಿಜವಾಗಿಯೂ ಬಹು ದೊಡ್ಡ ಹಿಂದೂ ಕಟ್ಟಡವೊಂದು ಇತ್ತೆೆಂದು ಪುರಾವೆ ಸಹಿತ ತೋರಿಸಿತು. ಬಾಬ್ರಿಿ ಮಸೀದಿಯ ವಿವಾದ ಕೋರ್ಟ್ ಮೆಟ್ಟಿಿಲೇರಿದಾಗ ಅಲಹಾಬಾದ್ ಹೈಕೋರ್ಟ್, ಪುರಾತತ್ವ ಇಲಾಖೆಯ ಅಧ್ಯಯನವನ್ನು ಎತ್ತಿಿಹಿಡಿಯಿತು. ಅಷ್ಟಾಾದರೂ ರೋಮಿಲಾ ತನ್ನ ಸಿದ್ಧಾಾಂತವನ್ನು ಪುಸ್ತಕದಿಂದ ಕೈಬಿಡಲಿಲ್ಲ. ಮಸೀದಿ ಇರುವ ಜಾಗದಲ್ಲಿ ಮಂದಿರ ಕಟ್ಟಲು ಅವಕಾಶ ಕೊಡಬಾರದು ಎಂದು ಕೋರ್ಟಿಗೆ ಮನವಿ ಸಲ್ಲಿಸಿದವರ ಪೈಕಿ ಈ ರೋಮಿಲಾ ಕೂಡ ಇದ್ದರು! ಬಾಬ್ರಿಿ ಮಸೀದಿಯ ವಿವಾದದಲ್ಲಿ ಈಕೆ ಹಚ್ಚಿಿದ ಬೆಂಕಿಯನ್ನು ಆರಿಸುವುದಕ್ಕೆೆ ಇನ್ನೆೆಷ್ಟು ವರ್ಷಗಳು ಹೋಗಬೇಕೋ ದೇವರಿಗೇ ಗೊತ್ತು.

ರೋಮಿಲಾ ಥಾಪರ್ ಹೀಗೆ ಕೇವಲ ಕಟ್ಟುಕತೆಗಳನ್ನು ಬರೆದುಕೊಂಡು ಹೋಗಿದ್ದರೂ ಕ್ಷಮಿಸಬಹುದಿತ್ತೇನೋ. ಆದರೆ ಆಕೆ ತನ್ನ ನೆರಳ ಕೆಳಗೆ ಯಾರೊಬ್ಬ ಭಿನ್ನ ಚಿಂತನೆಯ ಇತಿಹಾಸಜ್ಞನೂ ಬೆಳೆಯದಂತೆ ನೋಡಿಕೊಂಡರು. ಈಕೆಯ ಸರ್ವಾಧಿಕಾರಿ ಮನಸ್ಥಿಿತಿಯಿಂದಾಗಿ ಪ್ರೊೊಫೆಸರ್ ಬಿ.ಬಿ. ಲಾಲ್, ರಮೇಶ್ ಚಂದ್ರ ಮಜುಂದಾರ್, ಜಾದೂನಾಥ್ ಸರ್ಕಾರ್, ನವರತ್ನ ಎಸ್. ರಾಜಾರಾಂ ಮುಂತಾದವರ ಚಿಂತನೆಗಳು ಕಾಲಗರ್ಭದಲ್ಲಿ ಶಾಶ್ವತವಾಗಿ ಮುಚ್ಚಿಿಹೋದವು. ಮಾತುಮಾತಿಗೂ ಮಾರ್ಕ್‌ಸ್‌‌ಮೂಸೆಯಲ್ಲಿ ವಿಚಾರಗಳನ್ನು ಅದ್ದಿತೆಗೆಯುತ್ತಿಿದ್ದ ರೋಮಿಲಾ ಮತ್ತು ಮುಸ್ಲಿಿಂ ರಾಜರುಗಳ ಕತೆಗಳಿಂದಲೇ ಇತಿಹಾಸ ಪಠ್ಯವನ್ನು ತುಂಬಿಸಿಬಿಟ್ಟ ಇರ್ಫಾನ್ ಹಬೀಬ್ – ಈ ಇಬ್ಬರೇ ಭಾರತದ ಶಿಕ್ಷಣ ಕ್ಷೇತ್ರವನ್ನು ಅಕ್ಷರಶಃ ಆಳಿದರು. ತನ್ನ ವಿರುದ್ಧ ನಿಲ್ಲುವವರನ್ನು ರೋಮಿಲಾ ಅತ್ಯಂತ ತುಚ್ಛಭಾಷೆಯಲ್ಲಿ ಹಂಗಿಸುತ್ತ ಭಂಗಿಸುತ್ತ ಬದಿಗೆ ಸರಿಸುತ್ತಿಿದ್ದರು. ಅಲ್ಲದೆ ಅವರಿಗೆ ನಿಯೋ-ನಾಝಿ, ಫ್ಯಾಾಸಿಸ್‌ಟ್‌, ಬ್ರಾಾಹ್ಮಿಿನಿಕಲ್, ಕೋಮುವಾದಿ, ಪುರೋಹಿತಶಾಹಿ ಎಂಬೆಲ್ಲ ಬಿರುದುಗಳನ್ನು ಅನಾಯಾಸವಾಗಿ ಅಂಟಿಸಲಾಗುತ್ತಿಿತ್ತು. ಉದಾಹರಣೆಗೆ ರೋಮಿಲಾರ ಸಿದ್ಧಾಾಂತಗಳನ್ನು ದಾಖಲೆ, ಅಂಕಿಅಂಶಗಳ ಸಮೇತ ಸುಳ್ಳೆೆಂದು ಸಾಬೀತುಗೊಳಿಸಿ ಆಕೆಯ ತರ್ಕದ ಬಡಕಲುತನವನ್ನು ಬೆತ್ತಲೆ ಮಾಡಿದ, ಎಮಿನೆಂಟ್ ಹಿಸ್ಟೋೋರಿಯನ್‌ಸ್‌ ಕೃತಿಕಾರ ಅರುಣ್ ಶೌರಿಯನ್ನು ಆಕೆ ಆತನ ಸಿದ್ಧಾಾಂತ ಎಳಸು, ಅಪ್ರಬುದ್ಧ. ಆತ ಅಜ್ಞಾಾನಿ. ಇತಿಹಾಸದ ಕೊಳದಲ್ಲಿ ಒಂದಡಿ ಕೂಡ ಇಳಿಯದ ಒಡ್ಡ. ಆತನ ವಾದ ಹಾಸ್ಯಾಾಸ್ಪದ, ಬರೇ ಜೋಕ್, ಕಸ ಎಂಬೆಲ್ಲ ಶಬ್ದಾಾಡಂಬರದಿಂದ ಸನ್ಮಾಾನಿಸಿದರೇ ಹೊರತು ಶೌರಿಯ ವಾದ ಎಲ್ಲಿ ತಪ್ಪುು, ಯಾಕೆ ತಪ್ಪುು ಎಂಬುದನ್ನು ತೋರಿಸುವ ಧೈರ್ಯ ಮಾತ್ರ ತೋರಲಿಲ್ಲ!

ನಾವು ಇತಿಹಾಸವನ್ನು ಯಾಕೆ ಓದಬೇಕು? ಹಿಂದೆ ನಡೆದುಹೋಗಿರುವ ಘಟನೆಗಳನ್ನು ತಿಳಿಸಿಕೊಡುವುದಷ್ಟೇ ಇತಿಹಾಸದ ಕೆಲಸವಲ್ಲ. ಅದೊಂದೇ ಉದ್ದೇಶವಾಗಿದ್ದರೆ ಇಂತಿಂಥಾ ದಿನಗಳಲ್ಲಿ ಇಂತಿಂಥಾ ಘಟನೆಗಳು ನಡೆದವೆಂಬುದರ ಟೈಮ್‌ಲೈನ್ ಕೊಟ್ಟು ಗತಕಾಲದ ಕತೆ ಮುಗಿಸಬಹುದಿತ್ತು. ಆದರೆ, ಮನುಷ್ಯನ ಪೂರ್ವಕಾಲದ ಕತೆಯನ್ನು ಹೇಳಿ ಮುಂದಿನ ಪೀಳಿಗೆಯ ಭವಿಷ್ಯದ ನಡಿಗೆಗೆ ಮಾರ್ಗದರ್ಶನ ಕೊಡುವುದು ಇತಿಹಾಸದ ಮುಖ್ಯ ಕೆಲಸ. ಒಂದು ಘಟನೆಯನ್ನು ವಿವರಿಸುವಾಗಲೂ ಅದನ್ನು ಆ ಕಾಲಘಟ್ಟದ ಸಂದರ್ಭದಲ್ಲಿಟ್ಟು ವಿವೇಚಿಸಬೇಕೇ ಹೊರತು ಪ್ರಸ್ತುತದಲ್ಲಿಟ್ಟು ಅದರ ಮೌಲ್ಯಮಾಪನ ಮಾಡಿ ಏಕಪಕ್ಷೀಯ ತೀರ್ಮಾನ ಕೊಡಬಾರದು. ಆರನೇ ತರಗತಿಯಿಂದ ಹಿಡಿದು ಕಾಲೇಜಿನವರೆಗಿನ ಎಲ್ಲ ಪಠ್ಯಗಳಲ್ಲೂ ರೋಮಿಲಾ ಥಾಪರ್ ಬಿಟ್ಟೂಬಿಡದೆ ತುರುಕುವ ಎರಡು ವಿಚಾರಗಳೆಂದರೆ, ಹಿಂದಿನ ಕಾಲದಲ್ಲಿ ಭಾರತದಲ್ಲಿ ಜಾತಿಪದ್ಧತಿ ಇತ್ತು ಮತ್ತು ವಿಗ್ರಹಾರಾಧನೆಯನ್ನು ಸಮಾಜ ಸುಧಾರಕರು ವಿರೋಧಿಸುತ್ತಿಿದ್ದರು – ಎನ್ನುವುದು.

ಈ ತೆವಲು ಎಲ್ಲಿಯವರೆಗೆ ಹೋಗುತ್ತದೆಂದರೆ ಭಕ್ತಿಿಚಳವಳಿಯವರೂ ಮೂರ್ತಿಪೂಜೆಯನ್ನು ವಿರೋಧಿಸುತ್ತಿಿದ್ದರು ಎಂಬಲ್ಲಿಯವರೆಗೆ! ದೇವರ ಕಲ್ಪನೆಯನ್ನು ವಿರೋಧಿಸುವ ಕಮ್ಯುನಿಸಮ್ಮಿಿಗೆ ಭಕ್ತಿಿ, ಧರ್ಮಗಳೆಲ್ಲ ವರ್ಜ್ಯ. ಹಾಗಾಗಿ ರೋಮಿಲಾ ಇವೆಲ್ಲ ವಿಷಯಗಳನ್ನು ಅದೆಷ್ಟು ಅಸಹ್ಯಪಡುತ್ತ ಬರೆಯುತ್ತಾಾರೆಂಬುದನ್ನು ನಾವು ಊಹಿಸಬಹುದು. ಮಧ್ಯಕಾಲೀನ ಭಾರತದಲ್ಲಿ ಸಮಾಜ ಎಂಬ ಪರಿಕಲ್ಪನೆ ಹೇಗೆ ಬೆಳೆಯಿತೆಂಬುದನ್ನು ವಿವರಿಸುವಾಗಲೂ ಆಕೆ ಕಾರ್ಲ್ ಮಾರ್ಕ್‌ಸ್‌, ಎಂಗೆಲ್‌ಸ್‌, ಲೂಯಿ ಆಲ್ತಸ್ಸರ್‌ರಂಥ ಕಮ್ಯುನಿಸ್‌ಟ್‌ ಚಿಂತಕರ ನೆರವು ಪಡೆಯುತ್ತಾಾರೆ. ಯುರೋಪಿನ ಆ ಮಹಾನುಭಾವರ ಸಿದ್ಧಾಾಂತಗಳನ್ನು ಇಲ್ಲಿಗೆ ಅನ್ವಯಿಸಲು ನೋಡುತ್ತಾಾರೆ. ಹಾಗಾಗಿ ಈಕೆಗೆ ಭಾರತದ ಸಮಾಜವ್ಯವಸ್ಥೆೆಯಲ್ಲಿ ಅತ್ಯಂತ ದೊಡ್ಡ ಪರಿಣಾಮ ಬೀರಿದ ಧಾರ್ಮಿಕತೆ ಒಂದು ತೊಡಕಾಗಿ, ಸಮಸ್ಯೆೆಯಾಗಿ, ಸಾಮಾಜಿಕ ಪಿಡುಗಾಗಿ ಕಾಣಿಸುತ್ತದೆ. ವಚನಕಾರರ ಕಾಲವನ್ನು ಚಳವಳಿಯ ಯುಗವೆಂದು ಬಿಂಬಿಸುವ ನಮ್ಮ ಕನ್ನಡ ಇತಿಹಾಸಕಾರರ ಸಮಸ್ಯೆೆಯೂ ಇದೇ. ಇವರಿಗೆ ಸಮಾಜದ ಅಂಕುಡೊಂಕುಗಳನ್ನು ಪರಿಹಾಸ್ಯ ಮಾಡಿದ ದಾಸ ಸಾಹಿತ್ಯ ಒಂದು ಭಕ್ತಿಿಚಳವಳಿಯಾಗಿ ಕಂಡರೆ ವಚನಸಾಹಿತ್ಯಕಾರರು ಮಾತ್ರ ಬಂಡಾಯಗಾರರಾಗಿ ಕಾಣುತ್ತಾಾರೆ!

ಮೆಗಾಸ್ತನೀಸ್‌ನಂಥ ಚರಿತ್ರಕಾರರು ಭಾರತಕ್ಕೆೆ ನಿಜವಾಗಿಯೂ ಬಂದಿದ್ದರೇ ಅಥವಾ ಎಲ್ಲೋೋ ಕೂತು ತಮ್ಮ ಕಲ್ಪನೆಗಳ ದೋಣಿಗಳನ್ನು ಉತ್ಪ್ರೇಕ್ಷೆಯ ಹೊಳೆಯಲ್ಲಿ ತೇಲಿಬಿಟ್ಟರೋ ಎನ್ನುವುದು ಇಂದಿಗೂ ಪ್ರಶ್ನಾಾರ್ಥಕವಾಗಿದೆ. ಭಾರತದ ಜನರಿಗೆ ಹಾವಿನ ತಲೆಗಳಿದ್ದವು ಎಂದು ಬರೆದಿರುವ ಮೆಗಾಸ್ತನೀಸ್‌ನ ಕೃತಿಯ ಕೆಲವೊಂದು ಸಾಲುಗಳನ್ನು ರೋಮಿಲಾ ಐತಿಹಾಸಿಕ ಸಿದ್ಧಾಾಂತಗಳನ್ನು ರೂಪಿಸಲು ಒದಗುವ ಸಾಕ್ಷಿ ಎಂದು ಪರಿಗಣಿಸುತ್ತಾಾರೆ. ಸೋಮನಾಥದಲ್ಲಿದ್ದದ್ದು ಹಿಂದೂಗಳು ಪೂಜಿಸುವ ಶಿವಲಿಂಗವಾಗಲಿ, ಬೇರೆ ಶಿವನ ಮೂರ್ತಿಯಾಗಲಿ ಅಲ್ಲ; ಅಲ್ಲಿ ಅರೇಬಿಯಾದ ಒಂದು ದೇವರನ್ನು ಪ್ರತಿಷ್ಠಾಾಪಿಸಲಾಗಿತ್ತು ಎಂಬ ನಿರ್ಣಯಕ್ಕೆೆ ಬರಲು ರೋಮಿಲಾರಿಗೆ ನೆರವಾಗುವುದು ಒಂದು ಅಡಗೂಲಜ್ಜಿಿ ಜನಪದ ಕತೆ! ಹೀಗೆ ಕತೆ-ಉಪಕತೆಗಳನ್ನಿಿಟ್ಟುಕೊಂಡು ಇತಿಹಾಸ ಕಟ್ಟುವ ಈಕೆ, ರಾಮಾಯಣ ಮಹಾಭಾರತಗಳನ್ನು ಕೇವಲ ಕವಿಕಲ್ಪನೆ ಎಂದು ಬದಿಗಿಟ್ಟುಬಿಡುತ್ತಾಾರೆ. ಭಾರತದಲ್ಲಿ ಸನಾತನ ಧರ್ಮ ಎಂಬುದಿರಲಿಲ್ಲ. ಇಲ್ಲಿನ ನಾಗರಿಕತೆ ಶುರುವಾಗಿದ್ದೇ ಬೌದ್ಧಮತದ ಮೂಲಕ. ಅದಾಗಿ ಜೈನಮತ ಬಂದು ಕೊನೆಗೆ ಹಿಂದೂ/ಸನಾತನ ಧರ್ಮ ಚಾಲ್ತಿಿಗೆ ಬಂತು ಎಂಬುದು ಈಕೆಯ ಸಂಶೋಧನೆ. ಮಹಾಭಾರತದ ಶಾಂತಿಪರ್ವದಲ್ಲಿ ಯುಧಿಷ್ಠಿಿರ, ತನಗೆ ರಾಜ್ಯ ಬೇಡ ಎಂಬ ನಿರ್ಣಯಕ್ಕೆೆ ಬರುತ್ತಾಾನೆ; ಆ ನಿರ್ಣಯವನ್ನು ಆತ ತೆಗೆದುಕೊಳ್ಳಲು ಅವನಿಗೆ ದೇವಾನಾಂಪ್ರಿಿಯ ಅಶೋಕನ ಪ್ರಭಾವ ಇದೆ – ಎಂಬುದೂ ಈಕೆಯ ರೀಸರ್ಚು! ಕನಿಷ್ಠ ಕ್ರಿಿಸ್ತಪೂರ್ವ 1400ರ ಆಚೆಗೆ ನಡೆದುಹೋಗಿರುವ ಮಹಾಭಾರತ ಎಲ್ಲಿ? ಕ್ರಿಿಸ್ತಪೂರ್ವ 300ಕ್ಕಿಿಂತ ಈಚೆಗೆ ಭಾರತದಲ್ಲಿ ಆಗಿಹೋಗಿರುವ ಅಶೋಕ ಎಲ್ಲಿ!

ಹಿಂದೂ ಆಗಿರುವ ಎಲ್ಲವೂ ಕೀಳು, ಅವನ್ನು ಅಕಾರಣ ದ್ವೇಷಿಸಬೇಕು ಎಂಬ ಪೂರ್ವಗ್ರಹವನ್ನಿಿಟ್ಟುಕೊಂಡೇ ಹೊರಡುವ ಇಂಥ ಮನಸ್ಸುಗಳಿಂದ ನಾವು ಎಷ್ಟು ನಿಷ್ಪಕ್ಷಪಾತ ಚರಿತ್ರೆೆಯನ್ನು ನಿರೀಕ್ಷಿಸಬಹುದು? ಕೆಲವು ವರ್ಷಗಳ ಹಿಂದೆ ರೋಮಿಲಾ, ರಮಾನಂದ ಸಾಗರರ ಟಿವಿ ರಾಮಾಯಣದ ಬಗ್ಗೆೆ ಒಂದು ಲೇಖನ ಬರೆದಿದ್ದರು. ಕೇವಲ ಕಪೋಲಕಲ್ಪಿಿತ ಕಾವ್ಯದ ಮೇಲೆ ನಿರ್ಮಾಣವಾಗುತ್ತಿಿರುವ ಈ ಧಾರಾವಾಹಿಗೆ ಇಷ್ಟೊೊಂದು ಜನಪ್ರಿಿಯತೆ ಏಕೆ? ಇದು ಕೇವಲ ಮನರಂಜನೆಯಲ್ಲ; ಇದರ ಮೂಲಕ ಕೆಲವೊಂದು ಫ್ಯಾಾಸಿಸ್‌ಟ್‌ ಶಕ್ತಿಿಗಳು ಭಾರತದ ಸಂಸ್ಕೃತಿ ಚಿಂತನೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹಂಚಿಕೆ ಹಾಕಿವೆ ಎಂಬುದು ಆಕೆಯ ವಾದವಾಗಿತ್ತು. ರಾಮಾಯಣ ಧಾರಾವಾಹಿಯು, ಕಲಿಯುಗದ ಗಂಡು-ಹೆಣ್ಣುಗಳು ರಾಮ-ಸೀತೆಯರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಹೇಳುವ ಪುರೋಹಿತಶಾಹಿ ಹುನ್ನಾಾರದಂತೆ ಕಂಡಿತ್ತು ಈ ಎಡ ಚರಿತ್ರಕಾರರಿಗೆ! ಅಚ್ಚರಿಯ ಮಾತೆಂದರೆ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳು ಕೆಲವೊಮ್ಮೆೆ ಕಟ್ಟುಕತೆಗಳಾಗುತ್ತವೆ, ಇನ್ನು ಕೆಲವೊಮ್ಮೆೆ ಐತಿಹಾಸಿಕ ದಾಖಲೆಗಳು ಅಥವಾ ಸಾಕ್ಷಿಗಳಾಗುತ್ತವೆ! ಎಲ್ಲವೂ ಇವರಿಗೆ ಬೇಕಾದಂತೆ! ಈ ಎಡಚರಿತ್ರಕಾರರಿಗೆ ಅಸಲಿಗೆ ಭಾರತದ ಯಾವ ಸಾಹಿತ್ಯಿಿಕ ದಾಖಲೆಗಳನ್ನೂ ಅವುಗಳ ಮೂಲದಲ್ಲಿ, ಮೂಲಭಾಷೆಯಲ್ಲಿ, ಅರ್ಥಾತ್ ಸಂಸ್ಕೃತ, ಪಾಲಿ, ಪ್ರಾಾಕೃತಗಳಲ್ಲಿ ಓದುವ ಪಾಂಡಿತ್ಯವಿಲ್ಲ.

ಶಾಸನಗಳನ್ನು ಓದುವುದು ಇವರಿಗೆ ಗೊತ್ತಿಿಲ್ಲ. ಚರಿತ್ರಕಾರನಿಗೆ ಇರಲೇಬೇಕಾದ ಹತ್ತುಹಲವು ಶಾಸ್ತ್ರಗಳ (ಶಿಲ್ಪ, ನಾಟ್ಯ, ಸಂಗೀತ, ಯೋಗ, ಕಾವ್ಯ, ಛಂದಸ್ಸು, ನಿರುಕ್ತ, ನ್ಯಾಾಯ, ತರ್ಕ..) ಪ್ರಾಾಥಮಿಕ ಪರಿಚಯವೂ ಇಲ್ಲ. ಹೋಗಲಿ, ಆಧುನಿಕ ವಿಜ್ಞಾಾನದ ಸಂಶೋಧನೆಗಳಿಂದ ಬರುವ ನಿರ್ಣಯಗಳನ್ನೂ ಇವರು, ಅವು ತಮ್ಮ ಬುರುಡೆ ಪ್ರಬಂಧಗಳನ್ನು ಪ್ರಶ್ನಿಿಸುವಂತಿದ್ದರೆ, ಒಪ್ಪಿಿಕೊಳ್ಳುವುದಿಲ್ಲ! ಜೆನೆಟಿಕ್‌ಸ್‌, ಕಾರ್ಬನ್ ಡೇಟಿಂಗ್ ಮುಂತಾದ ಪದಗಳೂ ಪರಿಕಲ್ಪನೆಗಳೂ ಇವರಿಗೆ ವರ್ಜ್ಯ. ಆರ್ಕಿಯಾಲಜಿಯಲ್ಲಿ ಇತ್ತೀಚೆಗೆ ಬಳಸುತ್ತಿಿರುವ ಆಧುನಿಕ, ವೈಜ್ಞಾಾನಿಕ ಉಪಕರಣಗಳಾಗಲೀ ವಿಧಾನಗಳಾಗಲೀ ಏನೇನು ಎಂಬುದರ ಕಿಂಚಿತ್ ಕಲ್ಪನೆಯಾದರೂ ಈ ಎಮಿನೆಂಟ್ ಹಿಸ್ಟೋೋರಿಯನ್ನುಗಳಿಗಿಲ್ಲ. ಇವರ ಅರ್ಹತೆಯನ್ನು ಸಾರುವ ಏಕೈಕ ಪತಾಕೆಯೆಂದರೆ ಇವರು ಕಲಿತುಬಂದದ್ದು ಜೆಎನ್‌ಯು, ದೆಹಲಿ, ಅಲಿಘರ ಮುಸ್ಲಿಿಂ ಯುನಿವರ್ಸಿಟಿಗಳಲ್ಲಿ – ಎಂಬುದು! ಓದಿದ್ದು ಭಾರತದ ಬಗ್ಗೆೆ ಪಾಶ್ಚಾಾತ್ಯ ಮಡೆಯರು ಬರೆದ ಉದ್ಗ್ರಂಥಗಳನ್ನು. ಓದಲು ಬಳಸಿದ್ದು ಮಾರ್ಕ್‌ಸ್‌‌ವಾದವೆಂಬ ಕಣ್ಣಡಕವನ್ನು. ಇವರಿಗೆ ಪಾಠ ಮಾಡಿದವರು ಮತ್ತದೇ ಎಡ-ಬಿಡಂಗಿ ಪಂಡಿತರು. ಇವರಿಗೆ ಇಂದ್ರ, ಚಂದ್ರ ಎಂಬೆಲ್ಲ ಬಗೆ ಬಗೆಯ ಬೇಗಡೆಗಳ ಬಿರುದುಬಾವಲಿ ಕೊಡುವವರು ಅದೇ ಎಡ ಬ್ರಿಿಗೇಡಿನ ಪತ್ರಿಿಕೆಗಳು, ಪತ್ರಕರ್ತರು. ಒಟ್ಟಲ್ಲಿ ಇದು ಪರಸ್ಪರ ಬೆನ್ನು ಕೆರೆದುಕೊಳ್ಳುವವರ ಮಹಾಸಂಘ.

ಅವರ ಮರ್ಜಿ; ಅವರಿಗೆ ಬೇಕಾದಂತೆ ಇತಿಹಾಸವನ್ನು ಅರ್ಥೈಸಿಕೊಳ್ಳಲಿ ಬಿಡಿ; ನಿಮ್ಮ ಗಂಟೇನು ಹೋಗುತ್ತದೆ – ಎಂದು ಬಲಪಂಥೀಯರನ್ನು ಜೋರು ಮಾಡುವ ಎಡಮಧ್ಯಸ್ಥರೂ ನಮ್ಮಲ್ಲಿ ದೊಡ್ಡ ಸಂಖ್ಯೆೆಯಲ್ಲೇ ಇದ್ದಾಾರೆ. ಆದರೆ ಎಡಬಿಡಂಗಿ ಇತಿಹಾಸಕಾರರು ಮಾಡಿದ ಅಧ್ವಾಾನಗಳಿಗೆ ಒಂದೇ ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳಿಿ: ಭಾರತದಲ್ಲಿ ಇತಿಹಾಸಪೂರ್ವಕಾಲದಲ್ಲಿ ಜನ ದನಗಾಹಿಗಳಾಗಿದ್ದರು, ಬೇಟೆಯಾಡುತ್ತಿಿದ್ದರು, ಅನಾಗರಿಕರಾಗಿದ್ದರು – ಎಂದು ಭಾರತದ ಬಗ್ಗೆೆ ಪ್ರಬಂಧ ಬರೆದವನು, ಈ ನೆಲಕ್ಕೆೆ ಒಮ್ಮೆೆಯೂ ಕಾಲಿಡದೆ ಇದ್ದ ಕಾರ್ಲ್ ಮಾರ್ಕ್‌ಸ್‌. ಭಾರತ ಕಾಡುಮನುಷ್ಯರ ನೆಲವಾಗಿತ್ತು; ನಾವು ಬಂದು ಅವರಿಗೆ ಸಂಸ್ಕೃತಿಯ ಪರಿಚಯ ಮಾಡಿಸಿದೆವು – ಎಂದರು ಬ್ರಿಿಟಿಷರು.

ಈಸ್‌ಟ್‌ ಇಂಡಿಯಾ ಕಂಪೆನಿಯಿಂದ ಪೊಗದಸ್ತು ಫೆಲೊಶಿಪ್ ಪಡೆದು (ಅರ್ಥಾತ್ ಇತಿಹಾಸದ ದೊಡ್ಡ ಗಂಜಿಗಿರಾಕಿಯಾಗಿ) ಬದುಕು ಸಾಗಿಸಿದ ಮ್ಯಾಾಕ್‌ಸ್‌ ಮುಲ್ಲರ್, ಆರ್ಯ ಜನಾಂಗದ ವಲಸೆ/ಆಕ್ರಮಣಗಳ ಕತೆಗೆ ಬೇಕಾದ ಪೂರ್ವರಂಗ ಸೃಷ್ಟಿಿಸಿದ. ನಂತರ ಬಂದವರೆಲ್ಲ ಆ ಕತೆಗೆ ತಂತಮ್ಮ ಪಾಲಿನ ಹವಿಸ್ಸುಗಳನ್ನು ಸುರಿಯುತ್ತ ಬೆಂಕಿಯನ್ನು ದೊಡ್ಡದು ಮಾಡುತ್ತಾಾ ಬಂದರು. ಹತ್ತೊೊಂಬತ್ತನೆ ಶತಮಾನದ ಹೊತ್ತಿಿಗೆ ಇದು ‘ವೈಟ್ ಮ್ಯಾಾನ್‌ಸ್‌ ಬರ್ಡನ್’ ಎಂಬ ಮತ್ತೊೊಂದು ಪರಿಕಲ್ಪನೆಗೆ ಗರ್ಭದಾನ ಮಾಡಿತು. ಇಡೀ ಏಷ್ಯವೇ ಅನಾಗರಿಕರ ಗೊಂಡಾರಣ್ಯ. ಆ ನೆಲವನ್ನು ನಾಗರಿಕಗೊಳಿಸಿ ಉದ್ಧರಿಸುವ ಹೊಣೆ ಬಿಳಿಯರದ್ದು ಎಂಬ ವಿಚಿತ್ರ ತರ್ಕ ಅದು! ಹಾಗೆ ಮೊದಲು ಬ್ರಿಿಟಿಷರು ಆರ್ಯಕುಲದ ವಾರಸುದಾರರಾದರು. ನಂತರ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಆರ್ಯಕುಲದ ಪೂರ್ವಜರೆಂದು ಕರೆಸಿಕೊಳ್ಳುವ ಗುತ್ತಿಿಗೆಯನ್ನು ಜರ್ಮನರು ಕಿತ್ತುಕೊಂಡರು. ಅವರ ನಾಯಕನಾಗಿ ಹೊರಹೊಮ್ಮಿಿದ ಅಡಾಲ್‌ಫ್‌ ಹಿಟ್ಲರ್, ಅನಾರ್ಯರೆಂಬ ಹಣೆಪಟ್ಟಿಿ ಕಟ್ಟಿಿ 60 ಲಕ್ಷ ಯಹೂದ್ಯರ ಹೆಣ ಮಲಗಿಸಿದ. ಆ ನರಮೇಧದ ರಕ್ತ ಎಲ್ಲ ಎಡಪಂಥೀಯ ಚರಿತ್ರಕಾರರ ಕೈಯಲ್ಲೂ ಅಂಟಂಟಾಗಿ ಮೆತ್ತಿಿಕೊಂಡಿದೆ. ಆದರೆ ಅವರ್ಯಾಾರಿಗಾದರೂ ಇದುವರೆಗೆ ಆ ವಿಷಯದಲ್ಲಿ ಪಾಪಪ್ರಜ್ಞೆ ಕಾಡಿದ್ದನ್ನು ಯಾರಾದರೂ ಕಂಡಿದ್ದೀರಾ?

ಭಾರತದಲ್ಲಿ ಯಾವಾಗ ನೈಜ ಇತಿಹಾಸಕಾರರು ಮರೆಗೆ ಸರಿದು ಇಂಥ ಖೊಟ್ಟಿಿ ಚರಿತ್ರಕಾರರ ಕಾಲ ಶುರುವಾಯಿತೋ ಅಂದೇ ಭಾರತ ದಾರಿ ತಪ್ಪಿಿತು. ಈಗಂತೂ ನಮ್ಮ ದೇಶದಲ್ಲಿ ‘ಚರಿತ್ರಕಾರ’ ಎಂದು ಹೆಸರು ಮಾಡಲು ಇತಿಹಾಸವನ್ನು ಓದಿಕೊಂಡಿರಬೇಕಾದ್ದು ಕಡ್ಡಾಾಯವೇನಲ್ಲ! ಒಂದಷ್ಟು ಅಂತಿಮ ನಿರ್ಣಯಗಳನ್ನು ಮೊದಲೇ ಬರೆದಿಟ್ಟುಕೊಂಡು ಅದಕ್ಕೆೆ ಬೇಕಾದಂತೆ ಕತೆಯನ್ನು ಬೆಳೆಸಿಕೊಂಡುಹೋಗಬಲ್ಲ ಚಾಕಚಕ್ಯತೆ, ಕ್ರಿಿಯೇಟಿವಿಟಿ ಇದ್ದರೆ ಸಾಕಾಗುತ್ತದೆ! ಶಾರುಖ್ ಖಾನನ ಸಿನೆಮಾಗಳಿಗೆ ಚಿತ್ರಕತೆ ಬರೆಯುವವನು ಕೂಡ ನಮ್ಮ ದೇಶದಲ್ಲಿ ‘ಎಮಿನೆಂಟ್ ಹಿಸ್ಟೋೋರಿಯನ್’ ಎಂದು ಕರೆಸಿಕೊಂಡು ಬಿಟ್ಟಿಿಜೀವನ ಮಾಡಬಹುದು. ರೋಮಿಲಾ ಥಾಪರ್ ಅಥವಾ ಇರ್ಫಾನ್ ಹಬೀಬ್ ಬರೆದಿರುವ ಚರಿತ್ರೆೆಗಳೆಲ್ಲ ಅಂಥವೇ.

ಮಹಾಭಾರತ ನಡೆದದ್ದು ಬುದ್ಧ, ಅಶೋಕರ ಕಾಲಾನಂತರ ಎಂಬ ಅಂತಿಮ ನಿರ್ಣಯವನ್ನು ಮೊದಲೇ ಬರೆದಿಟ್ಟುಕೊಂಡಾಗ ಮಾತ್ರ ಯುಧಿಷ್ಠಿಿರನಿಗೆ ಅಶೋಕ ಪ್ರೇರಣೆಯಾದ ಕತೆ ಹುಟ್ಟುತ್ತದಲ್ಲವೆ? ಇನ್ನು ಭಾರತದ ಸಂಸ್ಕೃತ ಸಾಹಿತ್ಯಕ್ಕೇ ನೇರ ಕೈಹಾಕಿ ಅದನ್ನು ತಮಗೆ ಬೇಕಾದಂತೆ ತಿರುಚಿ, ಕಮ್ಯುನಿಸ್‌ಟ್‌ ಸೆಂಟು ಹೊಡೆದು, ಯದ್ವಾಾತದ್ವಾಾ ಅನುವಾದಿಸಿ ಒಂದಿಡೀ ತಲೆಮಾರನ್ನೇ ತಲೆಕೆಡಿಸುವ ಕೆಲಸವೂ ವೆಂಡಿ ಡಾನಿಗರ್, ಶೆಲ್ಡನ್ ಪೊಲಕ್ ಮುಂತಾದ ಎಡ-ಬಿಡಂಗಿಗಳ ಕಡೆಯಿಂದ ನಡೆಯುತ್ತಿಿದೆ. ಇತಿಹಾಸ, ಸಾಹಿತ್ಯ, ಪುರಾಣ, ಕಾವ್ಯ, ಪ್ರಾಾಗೇತಿಹಾಸ ಮುಂತಾದ ಎಲ್ಲವನ್ನೂ ಕಲಸುಮೇಲೋಗರ ಮಾಡಿ ಭಾರತದ ಮುಂದಿನ ಪೀಳಿಗೆಯನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆೆ ತೆಗೆದುಕೊಳ್ಳುವ ಈ ತಂತ್ರಕ್ಕೆೆ ಪ್ರತಿತಂತ್ರ ಹೂಡಬಲ್ಲ ಸಾಮರ್ಥ್ಯ ಬಲಪಂಥದಲ್ಲಿ ಇದೆಯೆ? ಅಷ್ಟೊೊಂದು ಪ್ರಮಾಣದಲ್ಲಿ ಮಾನವ ಸಂಪನ್ಮೂಲವನ್ನು ಸೃಷ್ಟಿಿಸಿದ್ದೇವೆಯೇ? ಪ್ರಶ್ನೆೆಗೆ ನಿರಾಶೆಯೇ ಉತ್ತರ.

ಇಸ್ಲಾಾಂ, ಕ್ರಿಿಶ್ಚಿಿಯಾನಿಟಿಗಳಂತೆ ಕಮ್ಯುನಿಸಂ ಕೂಡ ಒಂದು ರಿಲಿಜನ್. ಕಾರ್ಲ್ ಮಾರ್ಕ್‌ಸ್‌ ಅದರ ಪ್ರವಾದಿ; ಇತಿಹಾಸವೇ ಆ ರಿಲಿಜನ್‌ನ ದೇವರು. ಯಾವುದೇ ರಿಲಿಜನ್ ತನ್ನ ದೇವರನ್ನು ಜಗತ್ತಿಿನ ಮೂಲೆಮೂಲೆಗೆ ವ್ಯಾಾಪಿಸಲು ಉತ್ಸುಕವಾಗಿರುವಂತೆ ಕಮ್ಯುನಿಸಂ ಕೂಡ ತಾನು ನಂಬಿದ ಅಥವಾ ಬರೆದ ಇತಿಹಾಸವನ್ನೇ ಜಗತ್ತಿಿನ ಎಲ್ಲೆೆಡೆ ಹರಡಲು ನೋಡುತ್ತದೆ. ಅದಕ್ಕಾಾಗಿ ಹಿಂಸಾತ್ಮಕ ಮಾರ್ಗವನ್ನು ಬೇಕಾದರೂ ಅದು ಬಳಸೀತು! ಮೂರ್ನಾಲ್ಕು ವರ್ಷಗಳ ಹಿಂದೆ ಕನ್ನಡದ ಇತಿಹಾಸಪಠ್ಯವನ್ನು ಕುಲಗೆಡಿಸುವ ಕಾರ್ಯವನ್ನು ಇಲ್ಲಿನ ಲೋಕಲ್ ಎಡಬಿಡಂಗಿ ಬರಗೂರು ರಾಮಚಂದ್ರಪ್ಪ ಕೈಗೆತ್ತಿಿಕೊಂಡರು. ಅದಾಗಲೇ ಆರ್ಯರ ಆಕ್ರಮಣ ಮತ್ತು ಆಗಮನ ಎಂಬ ಎರಡೂ ಥಿಯರಿಗಳೂ ಬಿದ್ದುಹೋಗಿದ್ದವು. ಆದರೂ ಬರಗೂರು, ಆ ವಿಷಯದಲ್ಲೇ ಹತ್ತುಹತ್ತು ಪೇಜುಗಳ ಕತೆಗಳನ್ನು ಇತಿಹಾಸದ ಹಣೆಪಟ್ಟಿಿಯಲ್ಲಿ ಮಕ್ಕಳ ಗಂಟಲಿಗೆ ತುರುಕಿದರು. ಪುರೋಹಿತಶಾಹಿ, ವೈದಿಕಶಾಹಿ ಮುಂತಾದ ಪದಪ್ರಯೋಗಗಳೂ ಆದವು.

ವೈದಿಕರು ಹಸುವಿನ ಹಾಲು, ತುಪ್ಪವನ್ನೆೆಲ್ಲ ಯಜ್ಞಕ್ಕೆೆ ಸುರಿಯುತ್ತಿಿದ್ದುದರಿಂದ ಜನ ಹಸಿವೆಯಿಂದ ಸತ್ತರು ಎಂಬ ಹಸಿಹಸಿ ಹುಚ್ಚುಪ್ಯಾಾಲಿ ಸುಳ್ಳನ್ನು ಕೂಡ ಇದೇ ಬರಗೂರಪ್ಪ ಬರೆದರು, ಅಥವಾ ಬರೆಸಿದರು. ಒಂದಷ್ಟು ಪ್ರಜ್ಞಾಾವಂತರನ್ನು ಹೊರತುಪಡಿಸಿದರೆ ಯಾರೊಬ್ಬರೂ ಈ ಹಳವಂಡದ ಬಗ್ಗೆೆ ಮಾತಾಡಲಿಲ್ಲ. ಯಾಕೆಂದರೆ ಹೆಚ್ಚಿಿನವರೆಲ್ಲ ಒಂದಾನೊಂದು ಕಾಲದಲ್ಲಿ ಜೆಎನ್‌ಯು ಪಂಡಿತ ಪ್ರಣೀತ ಇತಿಹಾಸವನ್ನೇ ಪಠ್ಯದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿ ಬಂದವರಲ್ಲವೇ? ಅವರ್ಯಾಾರಿಗೂ ಇಲ್ಲಿ ಬರಗೂರು ಎಂಬ ಅಯೋಗ್ಯ ಮಾಡುತ್ತಿಿರುವ ಪಠ್ಯಪರಿಷ್ಕರಣೆ ಮೂಲತಃ ಎಡಸಿದ್ಧಾಾಂತದ ಪ್ರಚಾರಕಾರ್ಯ ಎಂಬುದು ಹೊಳೆಯಲೇ ಇಲ್ಲ. ಈಗ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತವಿದೆ. ಆದರೆ ಬರಗೂರು ರಾಮಚಂದ್ರಪ್ಪ ಮಾಡಿಹೋದ ಪರಿಷ್ಕರಣೆಯೆಂಬ ಅಧ್ವಾಾನದ ಮರುಪರಿಷ್ಕರಣೆ ಮಾಡಬೇಕು ಎಂದು ಈ ಸರಕಾರಕ್ಕೆೆ ಇನ್ನೂ ಅನ್ನಿಿಸಿಲ್ಲ. ಇಂಥ ಕೋಮಾಸ್ಥಿಿತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಮ್ಮ ಮಕ್ಕಳು ರೋಮಿಲಾ ಥಾಪರ್ ಬರೆದ ಇತಿಹಾಸವೆಂಬ ಚಂದಮಾಮ ಕತೆಯನ್ನು ನಡೆದ ವಾಸ್ತವವೆಂದೇ ನಂಬಿ ಓದುತ್ತಿಿರುತ್ತಾಾರೆ. ಹೆನ್ರಿಿ ಫೋರ್ಡ್‌ಗೆ ಯಾರೋ ಇತಿಹಾಸದ ಬಗ್ಗೆೆ ನಿಮ್ಮ ಅಭಿಪ್ರಾಾಯ ಏನು ಎಂದು ಕೇಳಿದಾಗ ಅವನು ಹೇಳಿದನಂತೆ: ಹಿಸ್ಟರಿ ಈಸ್ ಬಂಕ್ (ಇತಿಹಾಸ ದೊಡ್ಡ ಬೊಗಳೆ/ಲೊಳಲೊಟ್ಟೆೆ). ಮಾರ್ಕ್ಸಿಿಸ್‌ಟ್‌ ಹಿಸ್ಟರಿಯ ಅಬ್ಬರ ಆಗಲೇ ಜೋರಾಗಿತ್ತೇನೋ!