Friday, 27th May 2022

ಹನಿಮೂನ್ ಟೀಸರ್ ರಿಲೀಸ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿರುವುದಾಗಿ ಈ ಹಿಂದೆಯೇ ಹೇಳಿದ್ದರು. ಅಂತೆಯೇ ಈಗ ವೆಬ್ ಸಿರೀಸ್‌ನ ಟೀಸರ್ ಬಿಡುಗಡೆ ಮಾಡಿದ್ದಾರೆ. ಹನಿಮೂನ್ ಶೀರ್ಷಿಕೆಯಲ್ಲಿ ಈ ವೆಬ್ ಸೀರಿಸ್ ಮೂಡಿಬರುತ್ತಿದೆ.

ನಾಗಭೂಷಣ ಮತ್ತು ಸಂಜನಾ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪವನ್ ಕುಮಾರ್, ಅಪೂರ್ವಾ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹನಿಮೂನ್ ಸಾಂಪ್ರದಾಯಿಕ ಭಾರತೀಯ ವಿವಾಹದ ಕಥೆಯನ್ನು ಒಳಗೊಂಡಿದ್ದು, ಅದನ್ನು ತಿಳಿ ಹಾಸ್ಯದ ಮೂಲಕ ಕಟ್ಟಿಕೊಡಲಾಗಿದೆ. ಹನಿಮೂನ್ ಸರಣಿಯ ಕಥೆಯು ಹೊಸದಾಗಿ ವಿವಾಹವಾದ ದಂಪತಿಗಳು ಎದುರಿಸುವ ಘಟನೆಗಳನ್ನು ಒಳಗೊಂಡಿದೆ.

ಪ್ರವೀಣ್ ಮತ್ತು ತೇಜಸ್ವಿನಿ ಆಗ ತಾನೇ ವಿವಾಹವಾಗಿರುತ್ತಾರೆ. ಹನಿಮೂನ್‌ಗೆ ಕೇರಳಕ್ಕೆ ತೆರಳುತ್ತಾರೆ. ಅಂಜುಬುರುಕನಾದ ಪ್ರವೀಣ್, ಚಿನಕುರುಳಿ ತೇಜಸ್ವಿನಿಯನ್ನು ಒಲಿಸಿಕೊಳ್ಳಲು ಏನೆಲ್ಲಾ ಸಾಹಸ ಮಾಡು ತ್ತಾನೆ ಎಂಬುದನ್ನು ರೊಮ್ಯಾಂಟಿಕ್ ಆಗಿ ಕಟ್ಟಿಕೊಡಲಾಗಿದೆ. ಆರು ಕಂತುಗಳಲ್ಲಿ ಹನಿಮೂನ್ ವೆಬ್ ಸೀರಿಸ್ ಪ್ರಸಾರವಾಗಲಿದೆ.

***

ಹನಿಮೂನ್ ವೆಬ್ ಸರಣಿಯು ನಮ್ಮ ಹಿರಿಯರು ಮಾಡಿರುವ ಅರೇಂಜ್ಡ್ ವಿವಾಹ ವ್ಯವಸ್ಥೆ ಕುರಿತು ಒಂದು ಉದಾರವಾದ ಪ್ರತಿಕ್ರಿಯೆ ನೀಡುತ್ತದೆ.
ಶ್ರೀಮುತ್ತು ಸಿನಿ ಸರ್ವೀಸಸ್ ಮೂಲಕ ಈ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಮುಂದೆ ಮತ್ತಷ್ಟು ವಿಶಿಷ್ಟ ಕಥೆಗಳನ್ನು ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುವ ಯೋಜನೆ ಇದೆ.
-ಶಿವರಾಜ್ ಕುಮಾರ್ ನಟ