Monday, 16th May 2022

ಏಕರೂಪ ಶಿಕ್ಷಣ ಪರಿಕಲ್ಪನೆಯ ಹಂದರ ಹೇಗಿದೆ?

ಅವಲೋಕನ

ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು
‘ಒಂದು ದೇಶ-ಒಂದು ತೆರಿಗೆ, ಒಂದು ದೇಶ-ಒಂದು ಚುನಾವಣೆ, ಒಂದು ದೇಶ-ಒಂದು ರೇಷನ್ ಕಾರ್ಡ್’ ಹೀಗೆ ಹಲವಾರು ಯೋಜನೆಗಳು ದೇಶದ ಪ್ರಗತಿಗೆ ಉತ್ತೇಜಕಗಳಾಗಿ ಸದ್ಯ ರೂಪುಗೊಳ್ಳುತ್ತಿಿವೆ. ದೇಶದ ಪ್ರಗತಿಗೆ ಮುಖ್ಯ ಅಗತ್ಯವಾಗಿರುವುದು ಶಿಕ್ಷಣ. ಆದರೆ ಶಿಕ್ಷಣ ಕ್ರಾಾಂತಿ ದೇಶದ ಎಲ್ಲಾಾ ರಾಜ್ಯಗಳಲ್ಲಿ ಒಂದೇ ತೆರನಾದ ಅಲೆಯನ್ನು ಬೀಸುತ್ತಿಿಲ್ಲ. ಹಲವು ರಾಷ್ಟ್ರೀಯ ಕಾರ್ಯಕ್ರಮಗಳು ರಾಜ್ಯಗಳಲ್ಲಿ ಸಮರ್ಪಕ ರೀತಿಯಲ್ಲಿ ಅನುಷ್ಠಾಾನಗೊಳ್ಳುತ್ತಿಿಲ್ಲ. ರಾಜಕೀಯ ಪಕ್ಷಗಳು ತಂತಮ್ಮ ರಾಜ್ಯಗಳಲ್ಲಿ ಚುನಾವಣೆಯ ದೃಷ್ಟಿಿಯನ್ನು ಇಟ್ಟುಕೊಂಡು ಶೈಕ್ಷಣಿಕ ಆಡಳಿತವನ್ನು ನಡೆಸುತ್ತಿಿರುವುದು ನಿಜವಾಗಿ ದುರದೃಷ್ಟಕರ.

ಭಾರತೀಯರ ದೃಷ್ಟಿಿಯಲ್ಲಿ ಶಿಕ್ಷಣ, ಜೀವನೋಪಾಯಕ್ಕೆೆ ಮಾತ್ರವಲ್ಲ ಪೌರತ್ವ ತರಬೇತಿ ನೀಡುವ, ಆಧ್ಯಾಾತ್ಮಿಿಕ ಜೀವನಕ್ಕೆೆ ಅಣಿಗೊಳಿಸುವ ಬುನಾದಿಯೂ ಹೌದು. ಆತ್ಮಾಾಸಾಕ್ಷಾತ್ಕಾಾರದೆಡೆಗೆ ಕೊಂಡೊಯ್ಯುವ ಮಾರ್ಗ ಅದು ಎನ್ನುವ ಕಲ್ಪನೆ ಇದೆ. ಜನತೆಗೆ ಶಿಕ್ಷಣ ಕೊಡಿಸುವುದು ರಾಷ್ಟ್ರದ ಹೊಣೆಗಾರಿಕೆ. ಅಜ್ಞಾಾನವನ್ನು ಹೊಡೆದೋಡಿಸಲು ಶಿಕ್ಷಣ ಒಂದು ಅಸ್ತ್ರವೆಂದು ಭಾವಿಸಲಾಗಿದೆ. 1978ರಲ್ಲಿ ಸಂವಿಧಾನಕ್ಕೆೆ ಮಾಡಲಾದ 42ನೇ ತಿದ್ದುಪಡಿಯಿಂದ ಶಿಕ್ಷಣವನ್ನು ‘ಸಮವರ್ತಿ’ ಪಟ್ಟಿಿಗೆ ಸೇರಿಸಲಾಯಿತು. ರಾಜ್ಯಪಟ್ಟಿಿಯಲ್ಲಿದ್ದ ಶಿಕ್ಷಣವನ್ನು ಸಮವರ್ತಿ ಪಟ್ಟಿಿಗೆ ಸೇರಿಸಲು ಹಲವಾರು ಕಾರಣಗಳಿವೆ: ರಾಜ್ಯಪಟ್ಟಿಿಯಲ್ಲಿದ್ದಾಾಗ ಶಿಕ್ಷಣಕ್ಕಾಾಗಿ ನೀಡಲಾಗುತ್ತಿಿದ್ದ ಹಣವನ್ನು ಹಲವಾರು ರಾಜ್ಯ ಸರಕಾರಗಳು ಅದಕ್ಕೆೆ ವಿನಿಯೋಗಿಸದೆ ಪ್ರವಾಹ, ಕ್ಷಾಮ ಇತರ ಬಾಬ್ತುಗಳಿಗೆ ವೆಚ್ಚಮಾಡುತ್ತಿಿದ್ದವು. ಇದರಿಂದ ರಾಜ್ಯದಲ್ಲಿ ಪ್ರಾಾಥಮಿಕ ಶಿಕ್ಷಣವನ್ನು ಎಲ್ಲರಿಗೂ ವಿಸ್ತರಿಸುವಲ್ಲಿ ರಾಜ್ಯಗಳು ವಿಫಲವಾದವು. ರಾಜ್ಯ ಸರಕಾರಗಳ ಈ ಕ್ರಮವನ್ನು ಪ್ರಶ್ನಿಿಸುವ ಅಧಿಕಾರ ಕೇಂದ್ರಕ್ಕೆೆ ಇರಲಿಲ್ಲ

ಏಕರೂಪದ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸುವುದು ಕೇಂದ್ರ ಸರಕಾರಕ್ಕೆೆ ಮಾತ್ರ ಸಾಧ್ಯವಿದೆ. ನೀತಿ-ನಿರೂಪಣೆ ಮತ್ತು ಜಾರಿಯಲ್ಲಿ ರಾಜ್ಯಗಳು ಪಾಲ್ಗೊೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದುದು ಕೂಡ ಶಿಕ್ಷಣವನ್ನು ಸಮವರ್ತಿ ಸೇರಿಸಲು ಪೂರಕ ಅಂಶವಾಯಿತು. ಸಮವರ್ತಿ ಪಟ್ಟಿಿಯಲ್ಲಿನ ವಿಷಯವಾದ ಶಿಕ್ಷಣಕ್ಕೆೆ ಸಂಬಂಧಿಸಿದ ಹಲವು ಕಲಂಗಳು ಶಿಕ್ಷಣದ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆೆ ತಿಳಿಸುತ್ತದೆ. ಕಲಂ 20, ಆರ್ಥಿಕ ಮತ್ತು ಸಾಮಾಜಿಕ ಯೋಜನೆಯ ಬಗ್ಗೆೆ ತಿಳಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟು ಸೇರಿ ದೇಶದ ನಾಗರಿಕರ ಜೀವನ ಸ್ತರವನ್ನು ಉನ್ನತೀಕರಿಸಬಲ್ಲ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರಬಲ್ಲ ಶೈಕ್ಷಣಿಕ ಯೋಜನೆಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಯಶಸ್ವಿಿಯಾಗಿ ಅನುಷ್ಠಾಾನಗೊಳಿಸಬೇಕು ಎಂದಿದೆ.

ಪ್ರಾಾಥಮಿಕ ಶಿಕ್ಷಣದ ಅವಕಾಶ ಎಲ್ಲರಿಗೂ ದೊರೆಯಬೇಕೆಂಬ ಸದುದ್ದೇಶ 45ನೇ ಕಲಂನಲ್ಲಿ ಕಂಡು ಬರುತ್ತದೆ. ಇಲ್ಲಿ ಸರಕಾರ ಎನ್ನುವ ಪದ ಗೊಂದಲಕ್ಕೀಡು ಮಾಡಬಾರದೆಂಬ ಕಾರಣದಿಂದ 12ನೇ ಕಲಂನಲ್ಲಿ ಇದರ ಅರ್ಥ ವಿವರಣೆಯನ್ನು ಹೀಗೆ ನೀಡಿದೆ: ‘ಇಲ್ಲಿ ಸರಕಾರ ಎಂದರೆ ಕೇಂದ್ರ ಸರಕಾರ, ರಾಜ್ಯ ಸರಕಾರ, ಸ್ಥಳೀಯ ಮಂಡಳಿಗಳು ಮತ್ತು ಖಾಸಗಿ ಸಂಸ್ಥೆೆಗಳು’. ಇವೆಲ್ಲವುಗಳು ಉಚಿತ ಮತ್ತು ಕಡ್ಡಾಾಯ ಪ್ರಾಾಥಮಿಕ ಶಿಕ್ಷಣವನ್ನು ಜಾರಿಗೊಳಿಸುವಲ್ಲಿ ಜವಾಬ್ದಾಾರರೆಂದು ಸ್ಪಷ್ಟಮಾಡಿದೆ.

ಒಂದು ದೇಶದ ಶಿಕ್ಷಣ ವ್ಯವಸ್ಥೆೆಯಲ್ಲಿ ಪ್ರಜಾಪ್ರಭುತ್ವದ ತತ್ವಗಳು ಬೆಳೆಯದಿದ್ದರೆ ಆ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸೃಷ್ಟಿಿಸುವುದು ಕನಸಿನ ಮಾತು. ಶಿಕ್ಷಣದ ಗುರಿ, ಪಠ್ಯಕ್ರಮ, ಬೋಧನಾ ವಿಧಾನ, ಆಡಳಿತ, ಸಂಘಟನೆ, ಶಾಲಾ ಪರಿಸರ ಮುಂತಾದವುಗಳಲ್ಲಿ ಪ್ರಜಾಪ್ರಭುತ್ವ ಲಕ್ಷಣಗಳನ್ನು ಪ್ರತಿಬಿಂಬಿಸದಿದ್ದರೆ ಪ್ರಜಾಪ್ರಭುತ್ವವು ಬೆಳೆಯಲಾರವು. ಸಂವಿಧಾನವನ್ನು ರೂಪಿಸಿದ ನಂತರದಲ್ಲಿ ಇಲ್ಲಿನ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಆಗಿರುವ ಪ್ರಮುಖ ಬದಲಾವಣೆಗಳ ಪರಿಣಾಮವಾಗಿ, ಹಿಂದೆ ಇಲ್ಲವಾಗಿದ್ದ ಅನೇಕ ಸಮಸ್ಯೆೆಗಳು ಇಂದು ತಲೆ ಎತ್ತಿಿವೆ.

ದೇಶದ ಶೈಕ್ಷಣಿಕ ನೀತಿಗಳನ್ನು ರೂಪಿಸುವುದಕ್ಕೆೆ ಸಂಬಂಧಿಸಿದ ಅತಿ ಉನ್ನತ ಸಲಹಾ ಸಮಿತಿಯೆಂದರೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಆಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ತಮ್ಮ ಸಾಮಾನ್ಯ ಕಾಳಜಿಗಳನ್ನು ಹಂಚಿಕೊಳ್ಳಲು, ಅನುಭವಗಳನ್ನು ವಿಮರ್ಶಿಸಲು ಮತ್ತು ಭವಿಷ್ಯದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಇದೇ ವೇದಿಕೆ. ಅಲ್ಲಿ ಪ್ರಸ್ತಾಾಪಿತವಾದಂತೆ ‘ಒಂದು ದೇಶ- ಒಂದು ಶಿಕ್ಷಣ ಪದ್ಧತಿ’ಯನ್ನು ಜಾರಿಗೆ ತರುವ ಅವಶ್ಯಕತೆ ನಮ್ಮ ದೇಶಕ್ಕೆೆ ಅಗತ್ಯವಾಗಿದೆ. ಇದು ಸುಲಭದ ಮಾತಲ್ಲ; ಹಾಗಂತ ಅಸಾಧ್ಯವೂ ಅಲ್ಲ. ಹಲವು ವರ್ಷಗಳಿಂದ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವ ಬಗ್ಗೆೆ ಚರ್ಚೆಗಳು ನಡೆಯುತ್ತಿಿವೆೆ.

ಅವುಗಳ ಮುಖ್ಯ ಅಂಶಗಳೆಂದರೆ,
ಪಠ್ಯಕ್ರಮ:

ಪ್ರತಿ ರಾಜ್ಯಗಳು ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005’ನ್ನು ಆಧರಿಸಿ ಪಠ್ಯಕ್ರಮಗಳನ್ನು ರಾಜ್ಯಗಳ ಸನ್ನಿಿವೇಶಕ್ಕೆೆ ಹೊಂದಾಣಿಕೆಯಾಗುವಂತೆ ಸಿದ್ಧಪಡಿಸುತ್ತವೆ. ಆ ವೇಳೆ, ‘ಎನ್‌ಪಿಇ-1986’ ಆದ್ಯತೆ ಕೊಡುವ 10 ಮೂಲತತ್ತ್ವಗಳಾದ ಭಾರತದ ರಾಷ್ಟ್ರೀಯ ಚಳವಳಿ, ಸಂವಿಧಾನಾತ್ಮಕ ಹೊಣೆಗಾರಿಕೆಗಳು, ಮೌಲ್ಯಗಳು, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರೀಯ ಪರಂಪರೆ, ಧರ್ಮ ನಿರಪೇಕ್ಷತೆ, ಲಿಂಗ ಸಮಾನತೆ, ಸಂಸ್ಕೃತಿ ಮತ್ತು ಸಮಾನತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಂತರಗಳ ನಿರ್ಮೂಲನ, ಸಣ್ಣ ಕುಟುಂಬ, ಆದರ್ಶ ಮತ್ತು ವೈಜ್ಞಾಾನಿಕ ಮನೋಧರ್ಮ-ಇವುಗಳನ್ನು ಹಾಗೂ 84 ಮೌಲ್ಯಗಳನ್ನು ಪಠ್ಯಪುಸ್ತಕಗಳ ಪರಿಶೀಲನೆ ಮಾಡುವಾಗ ಗಮನದಲ್ಲಿ ಇಟ್ಟುಕೊಳ್ಳುತ್ತಾಾರೆ. ಭಾರತೀಯ ಸಮಾಜದ ವೈವಿಧ್ಯಮಯ ಸಾಂಸ್ಕೃತಿಕ ಸನ್ನಿಿವೇಶ, ಬದಲಾಗುತ್ತಿಿರುವ ಸಂದರ್ಭ, ವಿಶೇಷವಾಗಿ ರಾಜ್ಯಗಳ ಸ್ಥಿಿತಿ, 21ನೇ ಶತಮಾನಕ್ಕೆೆ ಕಾಲಿಡುತ್ತಿಿರುವ ಯುವ ಜನಾಂಗ ಇವುಗಳ ಬದಲಾವಣೆಯ ವೇಗಕ್ಕೆೆ ಪಠ್ಯಕ್ರಮವನ್ನೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.

ಪ್ರಸ್ತುತ ಭಾರತೀಯ ಸನ್ನಿಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಗಳು ಏಕರೂಪದಲ್ಲಿಲ್ಲ. ಇದು ಮಕ್ಕಳಿಗೆ ರಾಷ್ಟ್ರೀಯ ಪರೀಕ್ಷೆಗಳನ್ನು ಎದುರಿಸುವಾಗ ಕಂಟಕವಾಗಿ ಪರಿಣಮಿಸಿದೆ. ಇಡೀ ರಾಷ್ಟ್ರಕ್ಕೆೆ ಒಂದೇ ಪಠ್ಯಕ್ರಮವನ್ನು ಆಳವಡಿಸುವುದರಿಂದ ಎಲ್ಲಾಾ ವಿದ್ಯಾಾರ್ಥಿಗಳು ಏಕ ರೂಪದ ಸಾಮರ್ಥ್ಯಗಳನ್ನು ಹೊಂದಿ, ಪ್ರಾಾಂತೀಯ ಅಸಮಾನತೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಆದರೆ, ಸ್ಥಳೀಯ ಇತಿಹಾಸದ ವಿಷಯಕ್ಕೆೆ ಬಂದಾಗ ಕೊಂಚ ಗೊಂದಲ ಉದ್ಭವಿಸುತ್ತದೆ. ಇದಕ್ಕೆೆ ಪರಿಹಾರವೆಂದರೆ, ಸ್ಥಳೀಯ ಇತಿಹಾಸಕ್ಕೆೆ ಆದ್ಯತೆ ನೀಡಲು ರಾಜ್ಯಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿಯಾಗಿ ಸ್ಥಳೀಯ ಇತಿಹಾಸವನ್ನು ಬಿಂಬಿಸುವ ಪುಸ್ತಕವನ್ನು ಬೋಧಿಸಲು ಅವಕಾಶ ಒದಗಿಸಬೇಕು.

ಏಕರೂಪದ ಆಡಳಿತ:

ಶೈಕ್ಷಣಿಕ ಆಡಳಿತವು ಸಾಮಾನ್ಯ ವಿವೇಚನೆಯಲ್ಲಿ ಒಂದು ಕಲೆ. ಇದರಲ್ಲಿ ಹೊಂದಾಣಿಕೆ ಮತ್ತು ಮನೋವೈಜ್ಞಾಾನಿಕ ನೆಲೆಯಲ್ಲಿ ಆಡಳಿತ ಮಾಡಬೇಕಾಗಿರುತ್ತದೆ. ಏಕೆಂದರೆ ಇದು ಮುಖ್ಯವಾಗಿ ಮಕ್ಕಳ ವ್ಯಾಾಪ್ತಿಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿಿರುತ್ತದೆ. ಈ ಅಂಶ, ವಿಶಿಷ್ಟ ತರಬೇತಿ ಹೊಂದಿದ ಅಧಿಕಾರಿಗಳೇ ಆಡಳಿತ ನಡೆಸಬೇಕೆಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ. ಆದರೆ, ಪ್ರಸ್ತುತ ಪ್ರತಿ ರಾಜ್ಯಗಳು ಬೇರೆ ಬೇರೆ ರೀತಿಯಾದ ಶೈಕ್ಷಣಿಕ ಆಡಳಿತ ಪದ್ಧತಿಗಳನ್ನು ಹೊಂದಿವೆ. ಶೈಕ್ಷಣಿಕ ವಿಚಾರದಲ್ಲಿ ಪ್ರಭುತ್ವವನ್ನು ಪಡೆದ ಅಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿಿರುವುದು ಬಹಳ ಕಡಿಮೆ. ರಾಜ್ಯಮಟ್ಟದಲ್ಲಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿಿರುವುದು ಅಸಮರ್ಪಕ ಎನ್ನಲಾಗುತ್ತದೆ. ಶೈಕ್ಷಣಿಕ ಆಡಳಿತವು ಸುಗಮವಾಗಿ, ಏಕರೂಪದಲ್ಲಿ ನಡೆಯಬೇಕಾದರೆ ಭಾರತೀಯ ಶಿಕ್ಷಣ ಸೇವೆ (ಐಇಎಸ್) ಎಂಬ ನೂತನ ನಾಗರಿಕ ಸೇವೆ ಪರೀಕ್ಷೆ ನಡೆಸಿ ಶೈಕ್ಷಣಿಕ ಆಡಳಿತದಲ್ಲಿ ತರಬೇತಿ ಹೊಂದಿದ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇದರಿಂದ ಶಿಕ್ಷಣದ ಮೇಲೆ ನಿಗದಿಪಡಿಸಿರುವ ಅನುದಾನದ ಅಪವ್ಯಯನ್ನು ಸಹ ತಪ್ಪಿಿಸಬಹುದು ಮತ್ತು ಗುಣಮಟ್ಟದ ಶಿಕ್ಷಣ ನೀಡಬಹುದು.

ಶಿಕ್ಷಣದ ಸಾರ್ವತ್ರೀಕರಣ :

ನಾವು ನಿರ್ಮಿಸಬೇಕೆಂದಿರುವ ರಾಷ್ಟ್ರವೆಂಬ ಬೃಹತ್ ಕಟ್ಟಡಕ್ಕೆೆ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣವೇ ಅಡಿಪಾಯವಾಗಿದೆ. ಇಂದು ಶಿಕ್ಷಣ ಯಾವುದೇ ವರ್ಗ ಅಥವಾ ಸಮೂಹಕ್ಕೆೆ ಸಂಬಂಧಿಸಿರದೆ ದೇಶದ ಸಮಸ್ತ ಜನಸಂಖ್ಯೆೆಗೆ ಸಂಬಂಧಿಸಿದೆ. ಶಿಕ್ಷಣದ ಸಾರ್ವತ್ರೀಕರಣವೆಂದರೆ ಸಮಾಜದ ಎಲ್ಲಾಾ ವರ್ಗದವರಿಗೆ ಶಾಲಾ ಸೌಲಭ್ಯದ ಅವಕಾಶ ಒದಗಿಸುವುದು ಎಂದರ್ಥ. ಆದರೆ, ಈಗ ದೇಶದ ಎಲ್ಲಾಾ ರಾಜ್ಯಗಳಲ್ಲಿ ಒಂದೇ ತೆರನಾದ ಶಿಕ್ಷಣ ಸೌಲಭ್ಯಗಳು ಇಲ್ಲ. ಮೇಲ್ವಿಿಚಾರಣೆ: ಎಲ್ಲಾಾ ರಾಜ್ಯಗಳು ತಮ್ಮದೇ ಆದ ಶೈಕ್ಷಣಿಕ ಮೇಲ್ವಿಿಚಾರಣೆ ಮತ್ತು ತನಿಖೆ ಪದ್ಧತಿಯನ್ನು ಹೊಂದಿದೆ. ಹಲವು ಬಾರಿ ಕ್ರೇಂದದಿಂದ ದೊರೆಯುವ ಅನುದಾನವನ್ನು ಸರಿಯಾಗಿ ಶಿಕ್ಷಣ ಉದ್ದೇಶಗಳಿಗೆ ಬಳಸಿಕೊಳ್ಳದೆ ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ರಾಜ್ಯಗಳು ಆನೇಕ. ಸದ್ಯ ರಾಷ್ಟ್ರ ಮಟ್ಟದ ಮೇಲ್ವಿಿಚಾರಣೆ ಪದ್ದತಿ ಇಲ್ಲದಿರುವುದೇ ಇದಕ್ಕೆೆ ಮುಖ್ಯ ಕಾರಣ.

ಏಕ ರೂಪದ ಶಾಲಾ ಸಂಕೀರ್ಣ:

ಶಾಲೆಯು ಯಶಸ್ವಿಿಯಾಗಿ ಕಾರ್ಯ ನಿರ್ವಹಿಸಲು, ಆಡಳಿತದಲ್ಲಿ ವಿಕೇಂದ್ರಿಿಕರಣ ಮತ್ತು ಸಾರ್ವಜನಿಕರಿಂದ ಸಹಕಾರ ಮುಂತಾದವುಗಳ ವ್ಯವಸ್ಥೆೆಯಾಗಬೇಕು. ಶಾಲಾ ಸಂಕೀರ್ಣವು ಪ್ರಸ್ತುತ ಶಿಕ್ಷಣ ವ್ಯವಸ್ಥೆೆಯಲ್ಲಿ ಆಡಳಿತ ಮತ್ತು ಯೋಜನೆಯನ್ನು ವಿಕೇಂದ್ರಿಿಕರಣಗೊಳಿಸುವಂತಹ ಸುಧಾರಿತ ಕ್ರಮ. ಇದರ ಮುಖ್ಯ ಉದ್ದೇಶವೆಂದರೆ ಶೈಕ್ಷಣಿಕ ವಿಸ್ತರಣಾ ಕಾರ್ಯಗಳನ್ನು ರೂಪಿಸುವ ಮೂಲಕ ಸೇವೆ ಸಲ್ಲಿಸುತ್ತಿಿರುವ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಿಸುವುದು, ಶಾಲೆಗಳಲ್ಲಿ ದೊರೆಯುವ ಮತ್ತು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುವುದು ಇತ್ಯಾಾದಿ. ಆದರೆ ಒಂದೇ ರೀತಿಯ ಶಾಲಾ ಸಂಕೀರ್ಣ ಹೊಂದಿಲ್ಲದಿರುವುದನ್ನು ಸರಪಡಿಸಬೇಕಿದೆ.

ಶಾಲಾ ರಚನೆ: ರಾಜ್ಯಗಳು ತಮ್ಮ ಇಚ್ಛಾಾನುಸಾರವಾಗಿ ಶಾಲಾ ರಚನೆಯನ್ನು ರೂಪಿಸಿವೆ. ಪ್ರಸ್ತುತ ಕೇಂದ್ರ ಪಠ್ಯಕ್ರಮಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ, 1 ರಿಂದ 12ನೇ ತರಗತಿಯವರೆಗೆ, 6 ರಿಂದ 10ನೇ ತರಗತಿಯವರೆಗೆ ತರಗತಿಯವರೆಗೆ ಶಾಲೆಗಳು ವಿನ್ಯಾಾಸಗೊಂಡಿರುತ್ತವೆ. ಇಡೀ ದೇಶಕ್ಕೆೆ ಅನ್ವಯವಾಗುವಂತಹ ಏಕ ರೂಪದ ಶಾಲೆ ವಿನ್ಯಾಾಸ ಅಪೇಕ್ಷಣೀಯವಾದುದರಿಂದ, ಕೇಂದ್ರಿಿಯ ಮಾದರಿಯಲ್ಲಿ ಶಾಲಾ ರಚನೆಯನ್ನು ಮಾಡಬೇಕಾಗಿದೆ.

ಶಿಕ್ಷಕರ ನೇಮಕ:

ಆರ್‌ಟಿಇ ಕಾಯಿದೆಯಲ್ಲಿ ಎಲ್ಲಾಾ ರಾಜ್ಯಗಳಿಗೆ ಅನ್ವಯವಾಗುವಂತೆ ಪರಿಚ್ಛೇದ 23ರಲ್ಲಿ ಶಿಕ್ಷಕರ ನೇಮಕಕ್ಕೆೆ ಸ್ವಷ್ಟವಾದ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆದರೆ ಹಲವು ರಾಜ್ಯಗಳು ಇನ್ನೂ ಸಹ ಅವೈಜ್ಞಾಾನಿಕ ಮತ್ತು ಹಳೆಯ ನಿಯಮಗಳನ್ನು ಆಳವಡಿಸಿಕೊಂಡಿರುವುದರಿಂದ ಕ್ರಮಬದ್ಧವಾದ ರೀತಿಯಲ್ಲಿ ನೇಮಕ ನಡೆಯುತ್ತಿಿಲ್ಲ. ಹಲವು ರಾಜ್ಯಗಳ ಶಾಲೆಗಳಲ್ಲಿ ದೊಡ್ಡ ಸಂಖ್ಯೆೆಯಲ್ಲಿ ಖಾಲಿ ಹುದ್ದೆೆಗಳಿರುವುದು ಸಾಮಾನ್ಯವಾಗಿದೆ. ಇಡೀ ದೇಶದಲ್ಲಿ ಏಕರೂಪದ ಶಿಕ್ಷಕರ ನೇಮಕ ಪ್ರಕ್ರಿಿಯೆ ನಡೆಯಬೇಕಾದರೆ ಎನ್‌ಸಿಟಿಇ, ಎನ್‌ಸಿಆರ್‌ಟಿಇ ಅಥವ ಸಿಬಿಎಸ್‌ಸಿಯ ಏಜೆನ್ಸಿಿಗಳನ್ನು ಅದಕ್ಕಾಾಗಿ ನೇಮಿಸಬೇಕಿದೆ.
ಬೋಧನಾ ವಿಧಾನ: ಕೇಂದ್ರೀಯ ಮತ್ತು ರಾಜ್ಯ ಪಠ್ಯಕ್ರಮಗಳಲ್ಲಿ ಬೋಧನಾ ವಿಧಾನಗಳಲ್ಲಿ ವಿಭಿನ್ನತೆಯಿದೆ. ಕೆಲವು ರಾಜ್ಯಗಳ ವಿಧಾನಗಳು ಅತ್ಯಂತ ವೈಜ್ಞಾಾನಿಕತೆಯಿಂದ ಕೂಡಿವೆ. ಉದಾಹರಣೆಗೆ, ಕೇರಳ. ಇಲ್ಲಿ ಪ್ರಾಾಥಮಿಕ ಶಿಕ್ಷಣ ಶೇ.100 ಗುರಿ ಸಾಧಿಸಿದೆ.

ಕಲಿಕೆಯಲ್ಲಿ ಸಮಾನತೆ:

ಭಾರತ ಸಂವಿಧಾನವು ಮಾನವಾಭಿವೃದ್ಧಿಿಯಲ್ಲಿ ಶಿಕ್ಷಣದ ಪಾತ್ರವನ್ನು ಪರಿಗಣಿಸಿ ಪ್ರತಿಯೊಬ್ಬರಿಗೂ ಜೀವನಾವಶ್ಯಕ ಶಿಕ್ಷಣಕ್ಕೆೆ ಎಲ್ಲಾಾ ರೀತಿಯ ಅವಕಾಶ ನೀಡುವ ಭರವಸೆಯನ್ನು ನೀಡಿರುವುದನ್ನು ಇಲ್ಲಿಯವರೆಗೆ ನೋಡಿದ್ದೇವೆ. ಸಂವಿಧಾನವು ದೇಶದ ಎಲ್ಲಾಾ ಮಕ್ಕಳಿಗೂ ಶಿಕ್ಷಣ ಪಡೆಯುವುದು ಅವರ ಹಕ್ಕು ಎನ್ನುವುದನ್ನು ಖಾತ್ರಿಿಪಡಿಸಿದೆ. ಒಂದು ದೇಶ-ಒಂದು ಶಿಕ್ಷಣ ಯೋಜನೆಯಿಂದ ಇದನ್ನು ಉತ್ತಮವಾಗಿ ಅನುಷ್ಠಾಾನಗೊಳಿಸಬಹುದು.

ತರಬೇತಿಗಳಲ್ಲಿ ಏಕತೆ:

ಮಕ್ಕಳಿಗೆ ಒದಗಿಸುವ ಶಿಕ್ಷಣವು ಗುಣಮಟ್ಟದಲ್ಲಿಯೂ ಉತ್ಕೃಷ್ಟವಾಗಿರಬೇಕು ಎಂಬುದು ಎಲ್ಲಾಾ ಪೋಷಕರ ನಿರೀಕ್ಷೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಸರಕಾರ ಮತ್ತು ಶಿಕ್ಷಣ ಇಲಾಖೆಯ ಬದ್ಧತೆ ಕೂಡ. ಮಗುವಿನ ಕಲಿಕೆಯ ಸಾಮರ್ಥ್ಯಾಾಧರಿತ, ಸಂತಸದಾಯಕ, ಕನಿಷ್ಠ ಕಲಿಕೆ ಅದಕ್ಕೆೆ ಸಿಗಬೇಕು ಎಂಬ ಆಶಯದಿಂದ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗವು ಕಟ್ಟುನಿಟ್ಟಿಿನ ನಿರ್ದೇಶನ ನೀಡಿರುತ್ತದೆ. ಆದರೆ, ಹಲವು ರಾಜ್ಯಗಳು ಸೇವಾನಿರತ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಅನುದಾನವನ್ನು ಬಳಸಿಕೊಳ್ಳಲು ಮಾತ್ರ ನಡೆಸುತ್ತಿಿವೆ. ರಾಷ್ಟ್ರ ಮಟ್ಟದ ಮೂಲ ಉದ್ದೇಶಗಳು ರಾಜ್ಯ ಮಟ್ಟಕ್ಕೆೆ ಅಥವಾ ಜಿಲ್ಲಾಾ ಹಂತಕ್ಕೆೆ ತಲುಪುವಾಗ ತಮ್ಮ ಘನತೆ, ಪರಿಣಾಮ ಕಳೆದುಕೊಳ್ಳುತ್ತಿಿರುವುದು ಸಮಸ್ಯೆೆಯಾಗಿದೆ.

ರಾಷ್ಟ್ರೀಯತೆಯ ಕಲ್ಪನೆ:

ಭಾರತದ ಮಾಜಿ ರಾಷ್ಟ್ರಪತಿ, ಶಿಕ್ಷಣವೇತ್ತ, ದಿ.ಡಾ.ಎಸ್.ರಾಧಾಕೃಷ್ಣನ್, ‘ರಾಷ್ಟ್ರೀಯ ಭಾವೈಕ್ಯತೆಯನ್ನು ಇಟ್ಟಿಿಗೆ ಸಿಮೆಂಟಿನಿಂದಾಲಿ, ಉಳಿ, ಸುತ್ತಿಿಗೆಗಳಿಂದಾಗಲಿ ಕಟ್ಟಲು ಸಾಧ್ಯವಿಲ್ಲ. ಇದನ್ನು ಜನರ ಮನಸ್ಸು ಮತ್ತು ಹೃದಯಾಂತರಾಳದಲ್ಲಿ, ಶಾಂತಚಿತ್ತದಿಂದ, ಸದ್ದುಗದ್ದಲಗಳಿಲ್ಲದೆ, ವಿವೇಚನೆಯಿಂದ ಕೂಡಿದ, ಯೋಜಿತ ಶೈಕ್ಷಣಿಕ ಪ್ರಕ್ರಿಿಯೆಗಳಿಂದ ಬೆಳೆಸಬಹುದಾಗಿದೆ’ ಎಂದಿದ್ದರು. ಅದೇ ರೀತಿ, ‘ರಾಷ್ಟ್ರೀಯ ಭಾವೈಕ್ಯ ಸಮಿತಿ’, ‘ಶಿಕ್ಷಣ ಎಂದರೆ, ಜನತೆಯ ಹೃದಯಾಂತರಾಳದಲ್ಲಿ ಏಕತೆ, ಐಕ್ಯತೆ, ಸಾಮರಸ್ಯ ಮತ್ತು ಸಮಾನತೆ ಆಧರಿತ ಪೌರತ್ವದ ಕಲ್ಪನೆಯನ್ನು ಮತ್ತು ರಾಷ್ಟ್ರವಿಧೇಯ ಭಾವನೆಯನ್ನು ಬೆಳೆಸುವ ಒಂದು ಮನಃಶಾಸ್ತ್ರೀಯ ಪ್ರಕ್ರಿಿಯೆಯೇ ಆಗಿದೆ’ ಎಂದಿದೆ. ಆದರೆ, ಪ್ರಸ್ತುತ ಸನ್ನಿಿವೇಶದಲ್ಲಿ ರಾಜ್ಯಗಳು ತಮ್ಮದೇ ಆದ ರಾಜ್ಯಮಟ್ಟದ ಗುರಿಗಳನ್ನು ಕೂಡ ಹೊಂದಿರುತ್ತವೆ. ಹಾಗಾಗಿ ನಾವು ಮಗುವಿನಲ್ಲಿ ರಾಷ್ಟ್ರೀಯತೆಯ ಕಲ್ಪನೆಯನ್ನು ಮೂಡಿಸುವಲ್ಲಿ ಸೋತಿದ್ದೇವೆ ಎನ್ನಲಾಗುತ್ತದೆ.

ಒಂದೇ ಮಂಡಳಿ:

ಭಾರತದಲ್ಲಿ ಶೈಕ್ಷಣಿಕ ಆಡಳಿತವೂ ಸಹ ಬ್ರಿಿಟಿಷ್ ಆಡಳಿತ ಪರಂಪರೆಯ ಮುಂದುವರಿಕೆಯಾಗಿದೆ. ಪ್ರತಿ ರಾಜ್ಯದಲ್ಲಿ ಜಿಲ್ಲೆೆ ಮತ್ತು ಬ್ಲಾಾಕ್ ಹಂತಗಳಲ್ಲಿ ವಿಕೇಂದ್ರೀಕರಣ ಇದೆ. ಶಿಕ್ಷಣ ಕಾರ್ಯಕ್ರಮಗಳನ್ನು ಅನುಷ್ಠಾಾನಗೊಳಿಸುವಲ್ಲಿ ಸಂಬಂಧಿಸಿದ ರಾಜ್ಯ ಶಿಕ್ಷಣ ಇಲಾಖೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿಿ ಸಚಿವಾಲಯ ಹಾಗೂ ಕೇಂದ್ರ ಸಚಿವಾಲಯಗಳ ನಿರ್ದೇಶನಗಳು, ಅನುದಾನಗಳನ್ನು ಪಡೆದು ನಡೆಸುತ್ತಿಿರುತ್ತವೆ. ರಾಜ್ಯಗಳು ತಮ್ಮದೇ ಆದ ಶೈಕ್ಷಣಿಕ ಮಂಡಳಿಗಳನ್ನು ಹೊಂದಿರುತ್ತವೆ.

ಅವುಗಳು ಒಂದೆ ರೀತಿಯ ಕಾರ್ಯಹೊಂದಾಣಿಕೆ, ಕಾರ್ಯ ವ್ಯಾಾಪ್ತಿಿಯನ್ನು ಹೊಂದಿರುವುದಿಲ್ಲ. ಏಕರೂಪದ ಶಿಕ್ಷಣ ದೇಶದೆಲ್ಲೆೆಡೆ ಒಂದೇ ಮಂಡಳಿಯಿಂದ ನಡೆಯಲ್ಪಡುವುದರಿಂದ, ಪ್ರತಿ ರಾಜ್ಯಗಳು ಅವುಗಳ ಪ್ರಾಾಂತೀಯ ಕಚೇರಿಗಳನ್ನು ಸ್ಥಾಾಪಿಸುವುದರ ಮೂಲಕ ಉತ್ತಮ ಆಡಳಿತವನ್ನು ನೀಡಲು ಸಹಕಾರಿಯಾಗುತ್ತದೆ.

ಉದ್ಯೋೋಗ ಅವಕಾಶಗಳಿಗೆ ಒತ್ತು:

ಭಾರತದ ಶೈಕ್ಷಣಿಕ ವ್ಯವಸ್ಥೆೆಯು ಕೇವಲ ಶಿಕ್ಷಿತ ಸಮಾಜವನ್ನು ನಿರ್ಮಿಸುವುದರ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿಿನಲ್ಲಿ ಒಂದು ಮಟ್ಟದ ಗುರಿಯನ್ನು ಸಹ ತಲುಪಿದೆ. ಆದರೆ, ಉದೋಗ್ಯದ ಒದಗಿಸುವದಲ್ಲಿ ವಿಫಲತೆಯನ್ನು ಕಂಡಿದೆ. ಇದನ್ನು ಸಹ ಏಕರೂಪ ಶಿಕ್ಷಣ ಸರಿಪಡಿಸಬೇಕಿದೆ.

ಅಪವ್ಯಯದ ನಿಲುಗಡೆ:

ಶಿಕ್ಷಣವು ಕೇವಲ ಹಕ್ಕಾಾಗಿಯೇ ಉಳಿದಿದೆಯೇ ವಿನಃ ಪ್ರಸ್ತುತತೆಯಲ್ಲಿ ಇದರ ಅನುಷ್ಠಾಾನ ಹಲವು ರಾಜ್ಯಗಳಲ್ಲಿ ಆಗುತ್ತಿಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಾಗಿ ಕಾಣುತ್ತಿಿರುವ ನ್ಯೂನತೆಗಳಲ್ಲಿ ಅಪವ್ಯಯ ಪ್ರಮುಖವಾಗಿದ್ದು, ಶಿಕ್ಷಣ ವ್ಯವಸ್ಥೆೆಯ ಗುಣಾತ್ಮಕ ಪ್ರಗತಿಗೆ ಅಡ್ಡಿಿಯಾಗಿದೆ. ದೇಶದಲ್ಲಿ ಗುಜರಾತ್ ಮತ್ತು ದೆಹಲಿಯಲ್ಲಿನ ಪ್ರಯೋಗಗಳು ಮಾತ್ರ ಅಪವ್ಯಯಗಳನ್ನು ತಪ್ಪಿಿಸುವಲ್ಲಿ ಯಶಸ್ವಿಿಯಾಗಿವೆ. ಆದರೆ ಇನ್ನೂ ಹಲವು ರಾಜ್ಯಗಳಲ್ಲಿ ಶಿಕ್ಷಣದ ಅಪವ್ಯಯಗಳು ಚಾಲ್ತಿಿಯಲ್ಲಿವೆ.

ಮೌಲ್ಯಮಾಪನ:

ಮಗುವಿನ ಕಲಿಕೆ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮೂಲಕ ಮಾತ್ರ ಅಳೆಯಲು ಸಾಧ್ಯ. ಎಲ್ಲಾಾ ರಾಜ್ಯಗಳು ಒಂದೇ ತೆರನಾದ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿಲ್ಲ. ಆರ್‌ಟಿಇ ಕಾಯಿದೆಯ ಪ್ರಕಾರ ಸಿಸಿಇ ಪದ್ದತಿಯ ಮೌಲ್ಯಮಾಪನವನ್ನು ಅಳವಡಿಸಿಕೊಂಡಿದ್ದರೂ, ಮೌಲ್ಯಮಾಪನದ ತಂತ್ರಗಳು ರಾಜ್ಯದಿಂದ ರಾಜ್ಯಕ್ಕೆೆ ಭಿನ್ನವಾಗಿದೆ. ಐಸಿಎಸ್‌ಸಿ, ಸಿಬಿಎಸ್‌ಸಿಗಳ ಮೌಲ್ಯಮಾಪನ ರಾಜ್ಯ ಶಿಕ್ಷಣಕ್ಕಿಿಂತ ಬೇರೆ ರೀತಿಯಾಗಿರುತ್ತದೆ. ಇದು ಕೇಂದ್ರಿಿಯ ಮತ್ತು ರಾಜ್ಯ ಪಠ್ಯಕ್ರಮಗಳ ಮಧ್ಯೆೆ ದೊಡ್ಡದಾದ ಕಂದಕವನ್ನು ನಿರ್ಮಿಸಿದೆ. ಒಂದೇ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸುವುದರಿಂದ, ಎಲ್ಲಾಾ ರಾಜ್ಯಗಳ ವಿದ್ಯಾಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಎದುರಾಗುವ ಸಮಸ್ಯೆೆಗಳನ್ನು ನಿವಾರಿಸಬಹುದು.

ಗಣಕ ಸಾಕ್ಷರತೆ: ಇಂದು ಕಂಪ್ಯೂೂಟರ್ ಸರ್ವವ್ಯಾಾಪಿ. ಕರ್ನಾಟಕದಲ್ಲಿ ‘ಮಾಹಿತಿ ಸಿಂಧು’ ಯೋಜನೆಯ ಹೆಸರಿನಲ್ಲಿ ಕಂಪ್ಯೂೂಟರ್ ಶಿಕ್ಷಣವನ್ನು 1999-2000ನೇ ವರ್ಷದಿಂದ ಜಾರಿ ಮಾಡಿದೆ. ಆಧುನಿಕ ಶಿಕ್ಷಣ ವ್ಯವಸ್ಥೆೆಯಲ್ಲಿ ಗಣಕ ಅನಕ್ಷರತೆಗೆ ಜಾಗ ಇಲ್ಲ. ಹಾಗಾಗಿ ರಾಷ್ಟ್ರಮಟ್ಟದ ಗಣಕ ಸಾಕ್ಷರತೆಯನ್ನು ರೂಪಿಸಬೇಕಾಗಿದೆ.

ಏಕರೂಪದ ದಾಖಲು ವ್ಯವಸ್ಥೆೆ:

ದೇಶದ ಎಲ್ಲೆೆಡೆ ಕಡ್ಡಾಾಯ ಶಿಕ್ಷಣವಿದ್ದರೂ ಸಹ ಅದರ ಉದ್ದೇಶ ಈಡೇರಿಲ್ಲ. ಏಕೆಂದರೆ ಮಕ್ಕಳು ಶಾಲೆಗೆ ದಾಖಲಾದರಷ್ಟೇ ಸಾಲದು, ಅವರು ಶಾಲೆಯಲ್ಲಿ ಉಳಿದು ಕಲಿಕೆಯನ್ನು ಮುಂದುವರಿಸುವುದು ಅತ್ಯಗತ್ಯ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಮಕ್ಕಳಿಗೆ ಪ್ರೋೋತ್ಸಾಾಹಕ ಸೌಲಭ್ಯಗಳನ್ನು ಒದಗಿಸಿ ಅವರ ಹಾಜರಾತಿ ಉತ್ತಮವಾಗಿಸಬಹುದು.

ಶಾಲಾ ಸೌಲಭ್ಯಗಳು:

ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಿದರೂ, ಜನರಿಗೆ ಸರಕಾರಿ ಶಾಲೆಯ ಮೇಲೆ ಆಸಕ್ತಿಿಯಿಲ್ಲದಿರಲು ಕಳಪೆ ಸೌಲಭ್ಯ, ಮುಖ್ಯವಾಗಿ ಶಾಲಾ ಕಟ್ಟಡಗಳೇ ಕಾರಣ ಎನ್ನಲಾಗುತ್ತದೆ. ಇದು ಪೋಷಕರ ದೃಷ್ಟಿಿಯಲ್ಲಿ ಮೊದಲ ನೋಟದಲ್ಲಿಯೇ ಶಾಲೆಯ ಗುಣಮಟ್ಟವನ್ನು ನಿರ್ಧರಿಸುವ ನಿರ್ಧಾರಕ. ಇದರ ಜತೆ ಶೌಚಾಲಯ, ಕುಡಿಯುವ ನೀರು, ಮನರಂಜನೆ ವ್ಯವಸ್ಥೆೆ, ಗ್ರಂಥಾಲಯ, ಆಟದ ಮೈದಾನ, ಸಾರಿಗೆ ಸೌಲಭ್ಯಗಳು, ದೈಹಿಕ ಶಿಕ್ಷಣಕ್ಕೆೆ ಒತ್ತು, ವೃತ್ತಿಿ ಶಿಕ್ಷಣಕ್ಕೆೆ ಪ್ರೋೋತ್ಸಾಾಹ ಇತ್ಯಾಾದಿ ಸಹ ಇರಬೇಕು. ಬಹುತೇಕ ರಾಜ್ಯಗಳು ಉತ್ತಮ ಸೌಲಭ್ಯಗಳನ್ನು ನೀಡಲು ಆಸಕ್ತಿಿಯನ್ನು ತೊರಿಸುತ್ತಿಿಲ್ಲ.

ಅನುದಾನದ ಬಳಕೆ: ರಾಜ್ಯ ಸರಕಾರಗಳು ಶಾಲೆಗಳಿಗೆ ನೀಡುವ ಅನುದಾನವನ್ನು ವೈಜ್ಞಾಾನಿಕ ನೆಲೆಯಲ್ಲಿ ಬಿಡುಗಡೆ ಮಾಡುತ್ತಿಿಲ್ಲ. ಇದನ್ನು ತಪ್ಪಿಿಸಲು ಪ್ರತಿ ಶಾಲೆಗಳಿಗೆ ಏಕರೂಪದ ಅನುದಾನವನ್ನು ವೈಜ್ಞಾಾನಿಕ ಅಂಶಗಳನ್ನು ಅಧರಿಸಿ ಬಿಡುಗಡೆ ಮಾಡಬೇಕಿದೆ.

ಸಹಪಠ್ಯ ಚಟುವಟಿಕೆಗೆ ಒತ್ತು:

ರಾಜ್ಯಗಳು, ಕೇಂದ್ರಕ್ಕೆೆ ತಮ್ಮ ರಾಜ್ಯದ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಉತ್ತಮ ರೀತಿಯಲ್ಲಿ ದಾಖಲೆ ರೂಪದಲ್ಲಿ ಸಲ್ಲಿಸುತ್ತಿಿರುತ್ತವೆ. ಇದರ ಆಧಾರದಲ್ಲಿ ಹೊಸ ಹೊಸ ಯೋಜನೆಗಳಿಗೆ ಅನುಮೋದನೆ ಪಡೆಯುವುದರಲ್ಲಿ ನಿರತವಾಗಿರುತ್ತದೆ. ಈ ಭರಾಟೆಯಲ್ಲಿ ಸಹಪಠ್ಯ ಚಟುವಟಿಕೆಗೆ ಗಮನಹರಿಸುವುದನ್ನೇ ಮರೆತುಬಿಡುತ್ತವೆ.

ಪಠ್ಯಪುಸ್ತಕದ ವಿತರಣೆ:

ಪ್ರತಿ ರಾಜ್ಯಗಳು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಿನ ಅನ್ವಯ, ತಮ್ಮ ರಾಜ್ಯದಲ್ಲಿ ತಮ್ಮದೇ ಪಠ್ಯಪುಸ್ತಕವನ್ನು ಮುದ್ರಿಿಸಿ ವಿತರಣೆ ಮಾಡುತ್ತವೆ. ಆದರೆ, ಹಲವು ಬಾರಿ ಪಠ್ಯಪುಸ್ತಕಗಳು ಸರಿಯಾಗಿ ವಿತರಣೆಯಾಗದೆ ಕಲಿಕೆಯು ಪೂರ್ಣ ಪ್ರಮಾಣದಲ್ಲಿ ಆಗುತ್ತಿಿಲ್ಲ. ಅಲ್ಲದೆ, ಕೇಂದ್ರಿಿಯ ಮತ್ತು ರಾಜ್ಯ ಪಠ್ಯಪುಸ್ತದಲ್ಲಿ ಅಜಗಜಂತಾರ ವ್ಯತ್ಯಾಾಸವಿರುವುದರಿಂದ, ರಾಜ್ಯ ಪಠ್ಯಕ್ರಮದಲ್ಲಿ ಕಲಿಕೆ ಮುಂದುವರಿಸಿದ ವಿದ್ಯಾಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಎದುರಿಸುವಾಗ ತೊಂದರೆಯನ್ನು ಅನುಭವಿಸುತ್ತಿಿದ್ದಾಾರೆ.

ಪರೀಕ್ಷಾ ಸುಧಾರಣೆಗಳು:

ಕಡ್ಡಾಾಯ ಶಿಕ್ಷಣ ಪದ್ದತಿಯ ಪ್ರಕಾರ ಶಾಲೆಯಲ್ಲಿ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೊಳಿಸಿದೆ. ಅಲ್ಲದೇ, ಅನುತ್ತೀರ್ಣತೆಯನ್ನು ರದ್ದುಪಡಿಸಿದೆ. ಈ ಮೌಲ್ಯಮಾಪನವನ್ನು ಚಟುವಟಿಕೆ, ಮೌಖಿಕ ಪರೀಕ್ಷೆೆ, ವೀಕ್ಷಣೆ ಮುಂತಾದ ತಂತ್ರಗಳ ಮೂಲಕ ಮಾಡಲಾಗುತ್ತದೆ. ಪರಿಹಾರ ಬೋಧನೆಯನ್ನು ಸಹ ನೀಡಲಾಗುತ್ತದೆ. ಆದರೆ, ಎಲ್ಲಾಾ ರಾಜ್ಯಗಳು ಒಂದೇ ರೀತಿಯ ಮೌಲ್ಯಮಾಪನ ಪದ್ಧತಿಯನ್ನು ಹೊಂದಿಲ್ಲ. ಅಲ್ಲದೇ, ಶ್ರೇಣಿ ನೀಡುವಾಗ ಸಹ ಕೇಂದ್ರ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮದಲ್ಲಿ ಶ್ರೇಣಿ ಬಿಂದು ಸರಾಸರಿಯಲ್ಲಿಯೂ ವ್ಯತ್ಯಾಾಸವಿದೆ. ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳು 5 ಮತ್ತು 8 ನೇ ತರಗತಿಗಳಿಗೆ ಪರೀಕ್ಷೆ ನಡೆಸಿ ನಿರೀಕ್ಷಿತ ಸಾಮರ್ಥ್ಯವನ್ನು ಪಡೆಯದ ವಿದ್ಯಾಾರ್ಥಿಗಳನ್ನು ಅನುತೀರ್ಣ ಮಾಡುವ ಬಗ್ಗೆೆ ಆಸಕ್ತಿಿ ತೋರಿವೆ. ಇದನ್ನು ಎಲ್ಲಾಾ ರಾಜ್ಯಗಳಲ್ಲಿ ಅಳವಡಿಸಿ, ಪರೀಕ್ಷಾ ಪದ್ದತಿಯಲ್ಲಿ ಸುಧಾರಣೆ ತರಲು ಏಕರೂಪದ ಶಿಕ್ಷಣವನ್ನು ಜಾರಿ ಮಾಡುವ ಅವಶ್ಯಕತೆಯಿದೆ.

ಖಾಸಗಿ ಶಾಲೆಯ ಹಾವಳಿ ತಪ್ಪಿಿಸುವ ಗುರಿ:

ಪ್ರಸ್ತುತ ಸರಕಾರಿ ಸಾಮ್ಯದ ಶಾಲೆಗಳು ಹಿಂದುಳಿದಿರಲು ಮುಖ್ಯ ಕಾರಣ ಖಾಸಗಿ ಶಾಲೆಯ ತೀವ್ರವಾದ ಪೈಪೋಟಿ. ಆದರೆ ಸರಕಾರಿ ಸ್ವಾಾಮ್ಯದ ಕೇಂದ್ರೀಯ ವಿದ್ಯಾಾಲಯಗಳು, ಸೈನಿಕ ಶಾಲೆಗಳು ಮತ್ತು ನವೋದಯ ವಿದ್ಯಾಾಲಯಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆೆ ಮುಖ್ಯ ಕಾರಣ ಒಂದೇ ಕ್ಯಾಾಪಂಸ್‌ನಲ್ಲಿ ಎಲ್ಲಾಾ ತರಗತಿಗಳು, ಮಕ್ಕಳಿಗೆ ಬೇಕಾದ ಎಲ್ಲಾಾ ಸೌಲಭ್ಯ, ವಿಷಯವಾರು ಶಿಕ್ಷಕರ ನೇಮಕ, ಉತ್ತಮ ದರ್ಜೆಯ ಶಾಲಾ ಕಟ್ಟಡಗಳು ಅಲ್ಲಿರುವುದು.

ಶಿಕ್ಷಣದ ಗುಣಮಟ್ಟದಲ್ಲಿ ತಾರತಮ್ಯ ಇದೆ ಎಂದು 1986ರ ರಾಷ್ಟ್ರೀಯ ಶಿಕ್ಷಣ ನೀತಿಯೂ ಒತ್ತಿಿ ಹೇಳಿದೆ. 2001-02 ರಿಂದ ಶಾಲಾ ಶಿಕ್ಷಣದ ಗುಣಮಟ್ಟ ಸಂವರ್ಧಿಸುವ ಹಾದಿಯಲ್ಲಿ ಸರ್ವ ಶಿಕ್ಷಣ ಅಭಿಯಾನವು ಮೈಲುಗಲ್ಲಾಾಗಿದೆ. ನೂತನವಾದ ‘ಸಮಗ್ರ ಶಿಕ್ಷಣ ಪದ್ಧತಿ’ಯೂ ಹೊಸ ರೂಪುರೇಷೆಗಳನ್ನು ಹೊಂದಿದೆ. ಆದರೆ, ರಾಜ್ಯಗಳು ಎಷ್ಟರ ಮಟ್ಟಿಿಗೆ ಅವುಗಳನ್ನು ಜಾರಿಗೊಳಿಸುತ್ತವೆ ಎನ್ನುವುದರ ಮೇಲೆ ಹೊಸ ಯೋಜನೆಗಳ ಯಶಸ್ಸು ನಿಂತಿದೆ. ಆದುದರಿಂದ ಶಿಕ್ಷಣ ತಜ್ಞರು, ನಾಗರಿಕರು, ಒಂದು ದೇಶ, ಒಂದು ಶಿಕ್ಷಣದ ಜಾರಿಗೆ ಪಟ್ಟುಹಿಡಿದ್ದಾಾರೆ. ಅದಕ್ಕೆೆ ಸ್ಪಂದಿಸಿ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಿಗಳು ಸಹಕರಿಸುವ ಅಗತ್ಯ ಇದೆ. ಏಕರೂಪ ಶಿಕ್ಷಣ ಪದ್ಧತಿ ಬೇಗ ಸಾಕಾರವಾಗಲಿ ಎಂದು ಆಶಿಸೋಣ.