Monday, 16th May 2022

ಹೃದಯ ವೈಶಾಲ ಗುಣ ಹೊಂದಿದ ಡಿಸಿ ಕರೀಗೌಡ

ತಾಲೂಕಿನಲ್ಲಿ ಅಂತರ್ಜಲ ಬತ್ತಿಹೋಗಿದ್ದು, ನೀರಿನ ಮೂಲಗಳು ಇಲ್ಲದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆೆಯಲ್ಲಿ ಜ್ವಲಂತ ಸಮಸ್ಯೆೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಿಯಿಂದ ನೀಲಗಿರಿ ಹಾಗೂ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಹೃದಯ ವೈಶಾಲ ಗುಣವನ್ನು ಜಿಲ್ಲಾಧಿಕಾರಿ ಕರೀಗೌಡರು ಹೊಂದಿದ್ದಾಾರೆ ಎಂದು ಜಿಪಂ ಸಿಇಒ ಲತಾ ಅಭಿಪ್ರಾಯಿಸಿದರು.

ತಾಲೂಕಿನ ಕುಂದಾಣ ಹೋಬಳಿ ಬೀರಸಂದ್ರ ಗ್ರಾಾಮ ಬೆಂಗಳೂರು ಗ್ರಾಾಮಾಂತರ ಜಿಲ್ಲಾಾಡಳಿತ ಸಭಾಂಗಣ ನಿಕಟ ಪೂರ್ವ ಜಿಲ್ಲಾಾಧಿಕಾರಿ ಕರೀಗೌಡ ಬೀಳ್ಕೊೊಡಿಗೆ ಹಾಗೂ ನೂತನ ಜಿಲ್ಲಾಾಧಿಕಾರಿ ರವೀಂದ್ರ ಅವರನ್ನು ಸ್ವಾಾಗತಿಸುವ ಸಮಾರಂಭಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆೆಯಲ್ಲಿ 105 ಗ್ರಾಾಮ ಪಂಚಾಯಿತಿಗಳಲ್ಲಿ 50ಕ್ಕೂ ಹೆಚ್ಚು ಘನತ್ಯಾಾಜ್ಯ ಘಟಕಗಳನ್ನು ಸ್ಥಾಾಪಿಸಲಾಗಿದೆ ಎಂದರು.
ಕೆರೆಗಳಲ್ಲಿ ನೀರಿನ ಮೂಲಗಳಿಗೆ ಪ್ರಥಮ ಆದ್ಯತೆ ನೀಡಿ ಕೆರೆ ಶಂಕುಸ್ಥಾಾಪನೆಗೆ ಗ್ರಾಾಮಸ್ಥರು ಬರುವ ಮುನ್ನವೇ ಮೊದಲು ಹಾಜರಿರುವ ಸಮಯ ಪ್ರಜ್ಞೆೆಯನ್ನು ಹೊಂದಿದ್ದಾಾರೆ. ಬೆಂಗಳೂರಿನ ಐಶರಾಮಿ ಜೀವನಕ್ಕೆೆ ಹೊಂದಿಕೊಂಡಿದ್ದ ನೌಕರರ ಚಳಿ ಬಿಡಿಸಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಜಿಲ್ಲಾಾಸ್ಥರದ ಇಲಾಖೆಗಳು ನೂತನ ಜಿಲ್ಲಾಾಡಳಿತಕ್ಕೆೆ ಬರುವಂತೆ ಮಾಡಿದ್ದಾಾರೆ ಎಂದರು.

ಸರಕಾರಿ ನೌಕರರ ಸಂಘದ ಜಿಲ್ಲಾಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಬೆಂಗಳೂರು ಗ್ರಾಾಮಾಂತರ ನಾಲ್ಕು ತಾಲೂಕುಗಳಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿಿ ಪಡಿಸಲು ಸ್ಥಳಿಯ ರೈತರ ಜತೆ ಅಂಗಲಾಚಿ ಸಮೃದ್ಧಿಿ ಕೆರೆಗಳನ್ನಾಾಗಿ ಮಾರ್ಪಡು ಮಾಡಿದ್ದಾಾರೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಮಾಧ್ಯಮಗಳು ಸಹ ಜಿಲ್ಲಾಾಧಿಕಾರಿಗಳ ಕಾರ್ಯವೈಖರಿ ಮೆಚ್ಚಿಿ ತಮ್ಮ ಸಂತೋಷವನ್ನು ಹೊರಹಾಕಿದ್ದಾಾರೆ ಎಂದರು.