ಹುಬ್ಬಳ್ಳಿ: ಮಾರ್ಚ್ 5 ಮತ್ತು 6ರಂದು ‘ಮಹಿಳಾ ದಿನಾಚರಣೆ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ‘ಮಿಸ್ ಮತ್ತು ಮಿಸಸ್ ಹುಬ್ಬಳ್ಳಿ ಐಕಾನ್- 2021′ ಫ್ಯಾಶನ್ ಷೋ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ಕ್ಲಬ್ ಅಧ್ಯಕ್ಷೆ ಶ್ರೀವಲ್ಲಿ ಹೆಬಸೂರ ಹೇಳಿದರು.
ಮಾರ್ಚ್ 5ರಂದು ನಗರದ ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ಸಂಸ್ಥೆಯಲ್ಲಿ (ಐಎನ್ಐಎಫ್ಡಿ) ಮತ್ತು ಸವಾಯಿ ಗಂಧರ್ವ ಹಾಲ್ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 18ರಿಂದ 30 ವರ್ಷದೊಳಗಿನ ಅವಿವಾಹಿತರು, 25ರಿಂದ 40 ವರ್ಷದೊಳಗಿನ ವಿವಾಹಿತರು, 41 ವರ್ಷ ಮೇಲ್ಪಟ್ಟವರು ಹಾಗೂ ಪ್ಲಸ್ ಸೈಜ್ (ಸ್ಥೂಲಕಾಯ) ಹೊಂದಿರುವವರು ಸೇರಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 600 ರೂಪಾಯಿ ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, ನೂರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕ್ಲಬ್ನ ಸೇವಾ ಯೋಜನೆಗಳಿಗೆ ಈ ಹಣವನ್ನು ಬಳಸಲಾಗುವುದು. ಪ್ರತಿ ವಿಭಾಗಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಟ್ರೋಫಿ, ನಗದು ಹಾಗೂ ಪ್ರಮಾಣಪತ್ರದೊಂದಿಗೆ ನೀಡಲಾಗುವುದು.
ಟಾಪ್ ಹತ್ತು ಮಂದಿಗೆ ಸಮಾಧಾನಕರ ಬಹುಮಾನ ಸಿಗಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹತ್ತು ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.