Wednesday, 14th April 2021

ತಂಡದಲ್ಲಿ ಹೆಸರು ನೋಡಿದ ನಂತರ ಅಳಲಾರಂಭಿಸಿದೆ: ಸೂರ್ಯ ಕುಮಾರ್‌ ಯಾದವ್‌

ಮುಂಬೈ: ನಾನು ಆಯ್ಕೆಯ ಬಗ್ಗೆ ತಿಳಿದುಕೊಂಡಿದ್ದರಿಂದ ತುಂಬಾ ಉತ್ಸುಕನಾಗಿದ್ದೆ. ಕೋಣೆಯಲ್ಲಿ ಮೂವಿ ನೋಡಲು ಪ್ರಯತ್ನಿಸುತ್ತಿದ್ದೆ. ಆಗ ಇಂಗ್ಲೆಂಡ್ ಟಿ 20 ಗಾಗಿ ಭಾರತೀಯ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಫೋನ್‌ನಲ್ಲಿ ನೋಟಿಫಿಕೇಷನ್ ಬಂತು. ತಂಡದಲ್ಲಿ ನನ್ನ ಹೆಸರನ್ನು ನೋಡಿದ ನಂತರ ನಾನು ಅಳಲು ಪ್ರಾರಂಭಿಸಿದೆ. ನಾನು ನನ್ನ ಹೆತ್ತವರು, ನನ್ನ ಹೆಂಡತಿ ಮತ್ತು ನನ್ನ ತಂಗಿಯ ಜೊತೆ ವೀಡಿಯೋ ಕಾಲ್ ಮಾಡಿ ವಿಷಯ ತಿಳಿಸಿದೆ. ನಾವೆಲ್ಲರೂ ತುಂಬಾ ಎಮೋಷನ್ ನಿಂದ ಅಳಲು ಪ್ರಾರಂಭಿಸಿದೆವು’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಸದಸ್ಯನಾಗಿರುವ ಸೂರ್ಯ ಕುಮಾರ್ ಯಾದವ್ ಹೇಳಿದರು.

ಮುಂಬರುವ ಮಾರ್ಚ್‌ನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಗಾಗಿ ಭಾರತೀಯ ತಂಡದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂರ್ಯ ಕುಮಾರ್ ಯಾದವ್ ರವರನ್ನು ಆಯ್ಕೆ ಮಾಡಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರ ಮೊದಲ ಪ್ರದರ್ಶನ ಶುರುವಾಗಲಿದೆ.

ಯಾದವ್ ಇತ್ತೀಚಿನ ಕೆಲ ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (ಎಂಐ) ಪರ ಆಡುವಾಗ ಅವರು 16 ಪಂದ್ಯಗಳಲ್ಲಿ 480 ರನ್ ಗಳಿಸಿದ್ದರು.

 

Leave a Reply

Your email address will not be published. Required fields are marked *