Wednesday, 28th July 2021

ಯಡಿಯೂರಪ್ಪ ಸೇರಿ ಆರು ಮಂದಿ ವಿರುದ್ದ ’ಇಡಿ’ ಗೆ ದೂರು

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಅಧಿಕಾರದ ದುರುಪಯೋಗಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ ದಲ್ಲಿ ದೂರು ದಾಖಲಾಗಿದೆ.”

ಬಿಎಸ್ ಯಡಿಯೂರಪ್ಪನವರ ಮೊಮ್ಮಗ ಶಶಿಧರ್ ಮರಡಿ ಎಂಬವರು ಡೆವಲಪರ್ ಚಂದ್ರಕಾಂತ ರಮಲಿಂಗಂ ಎಂಬುವವ ರಿಂದ 12 ಕೋಟಿ‌ ಪಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ . ಅವರಿಬ್ಬರ ನಡುವಿನ ವಾಟ್ಸಪ್ ಚಾಟ್ ನ್ನು ಇಡಿ ಗೆ ಸಲ್ಲಿಸ ಲಾಗಿದೆ.

ಬಿಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ ಮತ್ತು ವಿರೂಪಾಕ್ಷಪ್ಪ ಯಮಕನಮರಡಿ ಎಂಬವರ ವಿರುದ್ಧ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *