Friday, 7th October 2022

ಮೂವರು ನಟಿಯರಿಗೆ ಎನ್‌ಸಿಬಿ ನೋಟೀಸು

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ಕುರಿತಂತೆ, ಹಲವು ಖ್ಯಾತ ನಟಿಯರ ಹೆಸರು ಬೆಳಕಿಗೆ ಬರುತ್ತಿದೆ.

ಎನ್‌ಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ನಟಿ ದೀಪಿಕಾ ಪಡುಕೋಣೆ ಸೇರಿ ಮೂವರಿಗೆ ನೋಟೀಸು ನೀಡಿದೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ದಾ ಕಪೂರ್‌ಗೆ ವಿಚಾರಣೆಗೆ ಹಾಜರಾಗವಂತೆ ನೋಟೀಸು ನೀಡಿದೆ.

ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣ ಕುರಿತಂತೆ, ಈಗಾಗಲೇ ನಟಿ ರಿಯಾ ಚಕ್ರವರ್ತಿ ಜೈಲಲ್ಲಿದ್ದಾರೆ.