Monday, 30th January 2023

ನೇತಾಜಿ ಸುಭಾಶ್ಚಂದ್ರ ಭೋಸ್ ಕ್ರೀಡಾಂಗಣದಲ್ಲಿ ೭೬ ನೇಯ ಸ್ವಾತಂತ್ರ್ಯ ದಿನ

ಕೋಲಾರ: ತಾಲ್ಲೂಕಿನ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರದ ನೇತಾಜಿ ಸುಭಾಶ್ಚಂದ್ರ ಭೋಸ್ ಕ್ರೀಡಾಂಗಣದಲ್ಲಿ ೭೬ ನೇಯ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸ್ಥಾವರದ ಜನರಲ್ ಮ್ಯಾನೇಜರ್ ವ್ಹಿ.ಕೆ ಪಾಂಡೆ ಧ್ವಜಾರೋಹಣ ನೆರವೇರಿಸಿದರು. ವಿದ್ಯುತ್ ಸ್ಥಾವರದ ಜಿ.ಜಿ.ಎಂ ವಿಜಯ ಕೃಷ್ಣನ್ ಪಾಂಡೆ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಮಹಾನ್ ನಾಯಕರುಗಳ ತ್ಯಾಗ ಬಲಿದಾನವನ್ನು ಸ್ಮರಿಸಿದರು ಹಾಗೂ ಎನ್.ಟಿ.ಪಿ.ಸಿ ಯ ವಿವಿಧ ಸಾಧನೆಗಳನ್ನು ಸಂದರ್ಭದಲ್ಲಿ ಈ ಹೇಳಿದರು.

ಈ ಸಂದರ್ಭದಲ್ಲಿ ಕಿಲ್ಕಾರಿ ಪ್ಲೇ ಸ್ಕೂಲ್, ಬಾಲಭವನ ವಿದ್ಯಾರ್ಥಿಗಳು ಕರಾಟೆ ಆತ್ಮರಕ್ಷಣಾ ಕಲೆಯನ್ನು ಪ್ರದರ್ಶಿಸಿದರು.
ವಿದ್ಯುತ್ ಸ್ಥಾವರದ ನೌಕರರು ಮತ್ತು ಕುಟುಂಬದ ಸದಸ್ಯರು ಸಿ.ಆಯ್.ಎಸ್.ಎಫ್ ಸಿಬ್ಬಂದಿ ಬಿ.ಬಿ.ಪಿ.ಎಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಾತಂತ್ರ್ಯ ದಿನದ ಆಚರಣೆಗೆ ಸಾಕ್ಷಿಯಾದರು.

error: Content is protected !!