Monday, 6th February 2023

ಪಂಚಶೀಲ ನಗರದ ಪುರಸಭೆ ಉದ್ಯಾನವನ ಖರೀದಿ ತಪ್ಪಿಸಲು ಆಗ್ರಹ: ಶಿವಾಂದ ಮೂರಮನ್ 

ಇಂಡಿ: ಪಟ್ಟಣದ ಪಂಚಶೀಲ ನಗರದ ವಾರ್ಡ ನಂ೧೮ರಲ್ಲಿಡಾ. ಬಿ.ಆರ್.ಅಂಬೇಡ್ಕರ ಉದ್ಯಾನವನ ಬೇರೆಯವರು ಖರೀದಿ ಮಾಡಲು ಬಂದಿರುತ್ತಾರೆ ಇದನ್ನು ಕೂಡಲೆ ತಡೇಗಟ್ಟಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಮನ್ವಯ ಸಮಿತಿ,ರಿ ತಾಲೂಕಾ ಸಂಚಾಲಕ ಶಿವಾನಂದ ಮೂರಮನ ಹಾಗೂ ಪಂಚಶೀಲ ನಗರದ ಮುಖಂಡರು, ಪದಾಧಿಕಾರಿಗಳು ವಿಜಯಪೂರ ನಾಗರಿಕ ಹಕ್ಕು ಜಾರಿ ನಿರ್ದೇನಾಲಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಾರ್ಡ ನಂ,೧೮ರಲ್ಲಿ ಕಳೇದ ೧೮ -೨೦ ವರ್ಷಗಳಿಂದ ಪಂಚಶೀಲನಗರದಲ್ಲಿ ಪುರಸಭೆ ಯಿಂದ ಉದ್ಯಾನ ವನ ನಿರ್ಮಿಸಿದ್ದು ಇದಕ್ಕೆ ಡಾ. ಬಿ.ಆರ್ ಅಂಬೇಡ್ಕರ ಉದ್ಯಾನವನ ಎಂದು ಹೆಸರಿಸಲಾಗಿದೆ. ಪುರಸಭೆಯಿಂದ ಸುಮಾರು ೧೦ಲಕ್ಷ ಖರ್ಚು ಮಾಡಿ ಕಂಪೌ0ಡ ಕಟ್ಟಿ ಒಳಭಾಗ ಬೋರವೇಲ್ ಕೊರೇಯಿಸಲಾಗಿದೆ. ಕಳೆದ ೫-೬ ವರ್ಷಗಳ ಹಿಂದೆ ಬಡಾವಣೆ ನಿವಾಸಿಗಳು ಈ ಉದ್ಯಾನದ ನೀರು ಬಳಕೆ ಮಾಡುತ್ತಿದ್ದರು.

ಅಲ್ಲದೆ ಇದೆ ಉದ್ಯಾವನ ವನದಲ್ಲಿ ಚಿಕ್ಕಮಕ್ಕಳಿಗೆ ಆಟದ ಸಾಮುಗ್ರೀ, ವ್ಯಾಯಾಮ ಕ್ಕಾಗಿ ಇತರೆ ವಸ್ತುಗಳು ನಿರ್ಮಿಸಿ ಪಚಶೀಲ ನಗರದ ನಿವಾಸಿಗಳಿಗೆ ಅನುಕೂಲ ಮಾಡಿದ್ದಾರೆ ಆದರೆ ಇಂದು ಬೇರೆಯವರು ಖರೀದಿಸಲು ಹೊರಟ್ಟಿರುವುದು ಕಾನೂನು ಬಾಹಿರ ಕ್ರಮ ವಾಗಿದ್ದು ಕೂಡಲೆ ಸಂಬoದಿಸಿದ ಅಧಿಕಾರಿಗಳು ಮಾರಾಟ ವಾಗುವುದಾಗಲಿ ಬೇರೆಯವರು ಪರಭಾರೆ ಮಾಡದಂತೆ ಕ್ರಮಕೈಗೋಳ್ಳಬೇಕು. ಒಂದು ವೇಳೆ ಬೇರೆ ರೀತಿಯಿಂದ ಅಡ್ಡದಾರಿ ಹಿಡಿದರೆ ಉಗ್ರಪ್ರತಿಭಟನೆ, ಹೋರಾಟ ಮಾಡಲಾಗುವುದು. ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಂಜು ರೇವಣ್ಣವರ್, ರವಿ ಹಾದಿಮನಿ, ರಾಹುಲ್ ಮನಗೂಳಿ, ಸಂಜು ಹೊಸಮನಿ, ಚೇತನ ರಾಠೋಡ, ರವಿ ಹೊಸಮನಿ, ವಿಕ್ರಮ ನಾಯಿಕ, ಆಕಾಶ ಮನಗೂಳಿ, ಸಿದ್ಧಾರೂಢ ವಠಾರ, ಸಾಗರ ದೇವಣಗಾಂವ್ ಸೇರಿದಂತೆ ಪಂವಶೀಲ ನಗರದ ನಿವಾಸಿ ಗಳು ಮನವಿಯಲ್ಲಿದ್ದರು.

 
Read E-Paper click here

 

error: Content is protected !!