Friday, 30th September 2022

ಭಾರತಕ್ಕೆ 155 ರನ್‌ ಗಳ ಭರ್ಜರಿ ಗೆಲುವು

ಹ್ಯಾಮಿಲ್ಟನ್: ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವೆಸ್ಟ್‌ ಇಂಡೀಸ್‌ ವಿರುದ್ಧ 155 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್‌ ನ ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿ ಕೊಂಡಿತು. ಬಳಿಕ 8 ವಿಕೆಟ್‌ ನಷ್ಟಕ್ಕೆ 317 ರನ್‌ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಆರಂಭಿಕ ಸ್ಮೃತಿ ಮಂಧಾನ ಬರೋಬ್ಬರಿ 13 ಬೌಡರಿ, 2 ಸಿಕ್ಸರ್‌ ಭಾರಿಸಿ ಒಟ್ಟು 123 ರನ್‌ ಸಿಡಿಸಿದರು. ಹರ್ಮನ್‌ ಪ್ರೀತ್ ಕೌರ್‌ 107 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸ್‌ ಮೂಲಕ 109 ರನ್‌ ಗಳಿಸಿಕೊಟ್ಟರು.

318 ರನ್‌ ಗಳ ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡ ಶುಭಾರಂಭ ನೀಡಿದರೂ, ಎಲ್ಲಾ ವಿಕೆಟ್‌ ನಷ್ಟಕ್ಕೆ 162 ರನ್‌ ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಆರಂಭದಲ್ಲಿ ಜೊತೆಯಾಟವಾಡಿದ ಡಿಯಾಂಡ್ರಿ ದೊತ್ತಿನ್‌ ಮತ್ತು ಹೀಲಿ ಮ್ಯಾಥ್ಯೂಸ್‌ ಶತಕ ನೀಡಿ ದರು. ದೊತ್‌ಇನ್‌ 46 ಬಾಲ್‌ ಗಳಲ್ಲಿ 62 ರನ್‌ ಗಳಿಸಿದರೆ, ಮ್ಯಾಥ್ಯೂಸ್‌ 30 ಎಸೆತಗಳಲ್ಲಿ 43 ರನ್‌ ಪಡೆದರು.

ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಂಡ ವಿಂಡೀಸ್‌ ಪಡೆ ಭಾರತದೆದುರು ಸೋಲನುಭವಿಸಿತು.