Tuesday, 27th July 2021

ಭಾರತದ ಆರ್ಚರಿ ಆಟಗಾರ್ತಿಯರ ಅಭ್ಯಾಸ ಆರಂಭ

ಟೋಕಿಯೋ: ಭಾರತದ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್​​ ಟೋಕಿಯೋದಲ್ಲಿ ತರಬೇತಿ ಆರಂಭಿಸಿದ್ದಾರೆ.

ಭಾನುವಾರ ಭಾರತದ ಮೊದಲ ಒಲಿಂಪಿಕ್ಸ್​ ಬ್ಯಾಚ್​ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್​ನಲ್ಲಿದ್ದ ಭಾರತದ ಈ ಇಬ್ಬರು ಸ್ಟಾರ್​ ಆರ್ಚರಿ ಆಟಗಾರರು ಇದೀಗ ತರಬೇತಿಗೆ ಅಣಿಯಾಗಿದ್ದಾರೆ.

ಆಟಗಾರರೆಲ್ಲ ಪ್ರಸ್ತುತ ಜಪಾನ್​ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿದ್ದಾರೆ. 88 ಆಟಗಾರರಿದ್ದ ಈ ಬ್ಯಾಚ್​ನ ಪ್ರತಿಯೊಬ್ಬ ಸದಸ್ಯರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್​ ಬಂದಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ 5 ವಿಭಾಗಗಳಲ್ಲಿ ಆರ್ಚರಿ ಪಂದ್ಯ ನಡೆಯಲಿದೆ.

ಪುರುಷರ ವಿಭಾಗ, ಮಹಿಳೆಯ ವಿಭಾಗ, ಪುರುಷರ ಗುಂಪು, ಮಹಿಳೆಯರ ಗುಂಪು ಹಾಗೂ ಮಿಶ್ರ ಡಬಲ್ಸ್​ನಲ್ಲಿ ಈ ಆರ್ಚರಿ ಪಂದ್ಯ ನಡೆಯಲಿದೆ. ಜುಲೈ 23ರಿಂದ ಯುಮೆನೋಶಿಮಾ ಪಾರ್ಕ್​ನ ಆರ್ಚರಿ ಮೈದಾನದಲ್ಲಿ ಆರಂಭವಾಗುವ ಈ ಪಂದ್ಯಗಳು ಜು.31ರವರೆಗೂ ನಡೆಯಲಿದೆ. ಆರ್ಚರಿ ವಿಭಾಗದಲ್ಲಿ ಭಾರತ ಇಲ್ಲಿಯ ವರೆಗೂ ಒಲಿಂಪಿಕ್ಸ್ ಪದಕವನ್ನ ಸಂಪಾದಿಸಿಲ್ಲ.

Leave a Reply

Your email address will not be published. Required fields are marked *