Monday, 30th January 2023

ಸಂದರ್ಶನ

ವಿನುತಾ ಹೆಗಡೆ ಕಾನಗೋಡು ಶಿರಸಿ

ಮೊದಲ ಬಾರಿಗೆ ಯಲ್ಲಾಾಪುರ ಕ್ಷೇತ್ರದ ಚುನಾವಣೆಗೆ ಕಾಂಗ್ರೆೆಸ್ ಜಿಲ್ಲಾಾಧ್ಯಕ್ಷ ಭೀಮಣ್ಣ ನಾಯ್ಕ ಸ್ಪರ್ಧಿಸಿದ್ದು, ಕಾಂಗ್ರೆೆಸ್‌ನಿಂದ ಯಲ್ಲಾಪುರ ಕ್ಷೇತ್ರಕ್ಕೆೆ ಹೊಸ ಮುಖ ನೀಡಿದೆ. ಜಿಲ್ಲಾಧ್ಯಕ್ಷರಾಗಿ ಭೀಮಣ್ಣ ಅವರು ಜಿಲ್ಲೆಯ ಜನತೆಗೆ ಚಿರಪರಿಚಿತರಾಗಿದ್ದರೂ ಈ ವಿಧಾನಸಭೆಗೆ ಹೊಸಬರು. ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದಾರೆ. ಸಂದರ್ಭದಲ್ಲಿ ತಮ್ಮ ಮನದ ಮಾತುಗಳನ್ನು ವಿಶ್ವವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

* ಸ್ವಕ್ಷೇತ್ರ ಬಿಟ್ಟು ಯಲ್ಲಾಾಪುರ ಕ್ಷೇತ್ರಕ್ಕೆೆ ಯಾವ ವಿಶ್ವಾಾಸದಿಂದ ಸ್ಪರ್ಧಿಸುತ್ತಿಿದ್ದೀರಿ?
ಶಿರಸಿ-ಸಿದ್ದಾಪುರ ನನ್ನ ಸ್ವಕ್ಷೇತ್ರವಾಗಿರಬಹುದು ಆದರೆ ಯಲ್ಲಾಾಪುರ ಕ್ಷೇತ್ರ ನನಗೆ ಹೊಸದಲ್ಲ. 11 ವರ್ಷದಿಂದ ಜಿಲ್ಲಾಧ್ಯಕ್ಷನಾಗಿ ಬೂತ್ ಮಟ್ಟದಿಂದ ಕೆಲಸ ಮಾಡಿದ್ದೇನೆ ಹಾಗೂ ನಮ್ಮ ಹಿಂದಿನ ಸಿದ್ಧರಾಮಯ್ಯ ಸರಕಾರ ಅನೇಕ ಅಭಿವೃದ್ಧಿಿ ಯೋಜನೆ ನೀಡಿದೆ. ಅದು ಜನರ ಮನಸ್ಸಿಿನಲ್ಲಿದೆ. ಅನ್ನಭಾಗ್ಯ ಯೋಜನೆಯಿಂದ ಪ್ರತಿಯೊಬ್ಬರು ಕಾಂಗ್ರೆೆಸ್ ನೆನೆಸುತ್ತಾಾರೆ. ಅಲ್ಲದೇ ಮುಂಡಗೋಡ ಮತ್ತು ಭಾಗ ಮೊದಲಿನಿಂದಲೂ ಕಾಂಗ್ರೆೆಸ್ ಬೆನ್ನೆೆಲುಬಾಗಿದೆ. ಯಲ್ಲಾಾಪುರದಲ್ಲಿ ಸಂಘಟನೆ ಭದ್ರವಾಗಿದೆ. 40-45 ದಿನಗಳಿಂದ ಪ್ರವಾಸ ಕೈಗೊಂಡಿದ್ದೇನೆ. ಎಲ್ಲ ಕಡೆ ಬಂದಿರುವ ಮಾತು ’ ಎರಡು ಬಾರಿ ಶಾಸಕರಾಗಿ ಒಂದು ನಿಮಗದ ಅಧ್ಯಕ್ಷರಾಗಿದ್ದರೂ ಸರಕಾರವನ್ನು ಕೆಡವಿದರು. ಈ ಆಕ್ರೋೋಶ ಕ್ಷೇತ್ರದ ಜನರಲ್ಲಿದೆ. ಕಷ್ಟ ಪಟ್ಟು ಓಡಾಡಿ ಮತ ಕೊಡಿಸಿದ್ದರೂ ನಮಗೆ ಹೇಳದೇ ರಾಜೀನಾಮೆ ನೀಡಿದರು ಎಂಬ ಆಕ್ರೋೋಶವಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿ 2500 ಕೋಟಿ ನೀಡಿದ್ದರು. ಕುಮಾರಸ್ವಾಾಮಿ ಸತ್ಕಾಾರದಲ್ಲಿ 400 ಕೋಟಿಗೂ ಅಧಿಕ ನೀಡಿದರು. ನಿಗಮ ಅಧ್ಯಕ್ಷರನ್ನಾಾಗಿ ಮಾಡಿದರು. ಆದರೆ ಇದೆಲ್ಲವನ್ನೂ ಬಿಟ್ಟು ಯಾವ ಸ್ವಾಾರ್ಥಕ್ಕಾಾಗಿ ನಮ್ಮನ್ನೆೆಲ್ಲಾ ದೂರ ಮಾಡಿ ಹೋಗಿದ್ದಾರೆ ತಿಳಿಯುತ್ತಿಿಲ್ಲ. ಆದರೆ ನಾವು ಕಾಂಗ್ರೆೆಸ್ ಪಕ್ಷದವರು. ಇಲ್ಲೇ ಮುಂದುವರಿಯುತ್ತೇವೆ. ಬಿಜೆಪಿಯಿಂದ ಮತ ಕೇಳಲು ಬಂದಾಗ ಯಾಕೆ ಹೀಗೆ ಮೋಸ ಮಾಡಿದ್ದಿರಿ ಎಂದು ಕೇಳುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಇದರಿಂದ ನನಗೆ ವಿಶ್ವಾಾಸ ಹೆಚ್ಚಾಾಗಿದೆ.

* ಮನೆ ಮನೆಗೆ ತೆರಳಿ ಯಾವ ರೀತಿ ಮತದಾರರನ್ನು ಮನವೊಲಿಸುತ್ತೀರಿ?
ಮನೆ ಮನೆಗೆ ತೆರಳಿ ಈ ನಾವು ಹೇಳುವುದು ಕಾಂಗ್ರೆೆಸ್ ಸರ್ಕಾರದ ಅಭಿವೃದ್ಧಿಿ ಆಗಿರುವುದು. ಅನ್ನಭಾಗ್ಯ, ಶೈಕ್ಷಣಿಕ ಅಭಿವೃದ್ಧಿಿ ಕುರಿತು, ಉತ್ತಮ ಸರಕಾರ ನೀಡಿರುವುದನ್ನು ಮತ್ತು ಪಕ್ಷಾಂತರಗಳಿಗೆ ಅವಕಾಶ ನೀಡಬಾರದು. ಯುವಕರಿಗೆ ಇಂತಹ ಚಂಚಲ ಮನಸ್ಸು ಬರಬಾರದು ಎಂದು ತಿಳಿಸುತ್ತೇವೆ. ನಮ್ಮ ಜಿಲ್ಲೆೆ ಮತ್ತು ಯಲ್ಲಾಪುರ ಕ್ಷೇತ್ರ ಪ್ರಜ್ಞಾವಂತರ ಕ್ಷೇತ್ರ. ಆದ ಕಾರಣ ರಾಜಕಾರಣ ಸ್ಥಿಿರ ಆಗಿ ಇರಬೇಕಾಗದಲ್ಲಿ ಕಾಂಗ್ರೆೆಸ್ ಗೆಲ್ಲಿಸಬೇಕು. ಪಕ್ಷಾಂತರಿಗಳಿಗೆ ಅವಕಾಶ ಮಾಡಿಕೊಡಬಾರದು. ಕಾಂಗ್ರೆೆಸ್ ಗೆಲ್ಲಿಸಬೇಕು ಎನ್ನುವುದನ್ನು ಮನದಟ್ಟು ಮಾಡುತ್ತೇವೆ.

* ಶಿರಸಿಯಲ್ಲಿ ಭೀಮಣ್ಣ ಯಲ್ಲಾಪುರದಲ್ಲಿ ಗೆಲ್ಲುತ್ತಾಾರೆಯೇ ಎಂಬ ಮಾತಿದೆ?
ಶಿರಸಿಯಲ್ಲಿ ಗೆದ್ದಿಲ್ಲ ಎಂದರೆ ಒಂದು ಲೆಕ್ಕ ಹಾಕಬೇಕು. ಸೋಲು-ಗೆಲುವು ಸಹಜ. ಆದರೆ ಶಿರಸಿಯಲ್ಲಿ ಈ ಹಿಂದೆ ಬಿದ್ದ ಮತಗಳು ಎಷ್ಟು? ನಾನು ನಿಂತಾಗ ಬಿದ್ದ ಮತಗಳು ಎಷ್ಟು? ಎಂದು ಲೆಕ್ಕ ಹಾಕಬೇಕು. ಆ ಆಧಾರದಲ್ಲಿ ನೋಡಬೇಕು. 53 ಸಾವಿರಗಳಷ್ಟು ಮತ ನೀಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ನಿಜವಾದ ಪ್ರಜಾಪ್ರಭುತ್ವದಲ್ಲಿ ಗೆಲುವು ಸಾಧಿಸಿಲ್ಲ. ಕಳೆದ ಬಾರಿ 43 ಸಾವಿರ ಮತ ಪಡೆದಿದ್ದ ಜೆಡಿಎಸ್ ಬಾರಿ 23 ಸಾವಿರ ಪಡೆಯಿತು. ಉಳಿದ ಮತಗಳು ಬಿಜೆಪಿಗೆ ಹೋಗುವಂತೆ ಆಯಿತು ಎನ್ನುವುದು ನಮ್ಮ ಮಾತಾಗಿದೆ. ಆದ ಕಾರಣ ಶಿರಸಿಯಲ್ಲಿ ನನ್ನ ಸೋಲು ಎಂದಲ್ಲ. ಹೆಚ್ಚಿಿನ ಮತಗಳನ್ನು ಕಾಂಗ್ರೆೆಸ್ ಗೆ ನೀಡಿದ್ದೇನೆ ಎಂಬ ಹೆಮ್ಮೆೆ ನನಗಿದೆ.

* ನಿಮ್ಮ ಅಸ್ತ್ರ ಅನರ್ಹ ಶಾಸಕರು ಮತ್ತು ಅಭಿವೃದ್ಧಿಿ ಮಾತ್ರವೇ?
ಅನರ್ಹ ಶಬ್ದ ಸುಪ್ರೀಂಕೋರ್ಟ್ ನೀಡಿದೆ. ಪ್ರಜ್ಞಾಾವಂತ ಮತದಾರರಿಗೆ ಅರ್ನಹರಿಗೆ ಅವಕಾಶ ನೀಡಬಾರದು ಎಂಬುದನ್ನು ನಾನು ಕೇಳಿಕೊಳ್ಳುತ್ತೇನೆ. ವಿದ್ಯಾಾವಂತರು, ಸುಸಂಸ್ಕೃತರು ಈ ಚಿಂತನೆ ನಡೆಸಬೇಕು.

* ಮನೆ ಮನೆ ಪ್ರಚಾರಕ್ಕೆೆ ಹೋದ ಸಂದರ್ಭದಲ್ಲಿ ಭೀಮಣ್ಣ ಅವರು ಏನು ಎಂದು ತಿಳಿಸುತ್ತಿಿರೋ ಅಥವಾ ಹೆಬ್ಬಾಾರ್ ಏನು ಎಂದು ಹೇಳುತ್ತಿಿರೋ?
ಭೀಮಣ್ಣ 11 ವರ್ಷ ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷನಾಗಿ ಯಾವುದೇ ಕಪ್ಪುು ಚುಕ್ಕೆೆ ಇಲ್ಲದೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅದೇ ರೀತಿ ಬಂಗಾರಪ್ಪ ಸಾಹೇಬರ ಆಶೀರ್ವಾದಿಂದ ಮಲೆನಾಡು ಶಿಕ್ಷಣ ಸಂಸ್ಥೆೆಯನ್ನು ಮುನ್ನಡೆಸಿ ಕೊಂಡು ಬಂದಿದ್ದೇನೆ. ಶಿರಸಿ ಎಂಇಎಸ್ ಶಿಕ್ಷಣ ಸಂಸ್ಥೆೆಯಲ್ಲೂ ಕೆಲಸ ಮಾಡುತ್ತಾಾ ಬಂದಿದ್ದೇನೆ. ಗುರು ಮಠದಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗೆ ಸಾಮಾಜಿಕವಾಗಿ ಹಲವಾರು ರಂಗದಲ್ಲಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಇದುವರೆಗೂ ಯಾವುದೇ ಒಂದು ಕಪ್ಪುು ಚುಕ್ಕೆೆ ಇಲ್ಲದೇ ಯಾರಿಗೂ ನೋವು ಕೊಡದೇ ನಾನು ಪ್ರಾಾಮಾಣಿಕವಾಗಿ ಬಂದಿರುವ ವ್ಯಕ್ತಿಿ ನಾನು.

* ಗೆಲ್ಲುವ ವಿಶ್ವಾಾಸದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿಿದ್ದೀರಾ?
ಕಾಂಗ್ರೆೆಸ್ ಈ ಹಿಂದೆ ಇಲ್ಲಿ ಏಳು ಬಾರಿ ಗೆದ್ದಿದೆ. ಆ ನಿಟ್ಟಿಿನಲ್ಲಿ ಕಾಂಗ್ರೆೆಸ್‌ನಿಂದ ನಾನು ಗೆಲ್ಲುತ್ತೇನೆ ಎನ್ನುವುದಕ್ಕಿಿಂತ ಕ್ಷೇತ್ರದ ಮತದಾರರ, ಮುಖಂಡರ ಗೆಲುವು ನನ್ನ ಗೆಲುವು. ಹಾಗೆ ಕಾರ್ಯಕರ್ತರಲ್ಲಿ ಪಕ್ಷ ಮತ್ತು ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂಬ ಅನಿಸಿಕೆ ಇದೆ. ಅವರ ಅನಿಸಿಕೆ ಮುಖಾಂತರ ಹೇಳುವುದು ನಾನು ಗೆದ್ದೆ ಗೆಲ್ಲುತ್ತೇನೆ.

* ಮತದಾರರಿಗೆ ನಿಮ್ಮ ಮಾತು?
ಯಲ್ಲಾಾಪುರ ಕ್ಷೇತ್ರದ ಕಾಂಗ್ರೆೆಸ್ ಅಭ್ಯರ್ಥಿಯಾಗಿ ಈ ಅನರ್ಹ ಶಾಸಕರ ವಿರುದ್ಧವಾಗಿ ಮತದಾನ ಮಾಡುತ್ತಿಿರುವ ಜನರ ಬೆಂಬಲ ನನಗಿದೆ. ಅಧಿಕಾರದ ಶಕ್ತಿಿ ನೀಡಿದಾಗ ಜನರ ಜತೆ ಸೇರಿ ಗ್ರಾಾಮೀಣ, ಪಟ್ಟಣ ಎಂದು ಭೇದಭಾವ ಮಾಡದೇ ಎಲ್ಲರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಕಾಂಗ್ರೆೆಸ್‌ನ ಚಿನ್ಹೆೆಗೆ ಮತ ನೀಡಿ ಎಂದು ಕೇಳಿಕೊಳ್ಳುತ್ತೇನೆ.

error: Content is protected !!