Tuesday, 7th December 2021

45-25ರ ನಡುವೆ ಬೆಸೆದ ಬಾಂಧವ್ಯದ ಬಂಧನ

ತುಮಕೂರು: ಕಳೆದ ಮೂರ್ನಾಲ್ಕು ದಿನದಿಂದ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ 45 ವರ್ಷದ ಗಂಡು, 25 ವಯಸ್ಸಿನ ಹೆಣ್ಣಿನ ಮದುವೆಯ ವಿಚಾರಕ್ಕೆ ತೆರೆಬಿದ್ದಿದ್ದು. ದಾಂಪತ್ಯದ ನಡುವಿನ ಕುತೂಹಲ ಕಥೆಯನ್ನು ತಿಳಿಸಿದೆ.

ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಶಂಕರ(45) ಮೇಘನಾ (25) ವಿವಾಹವಾದ ನವ ಜೋಡಿ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈ ಬಗ್ಗೆ ಪರ ವಿರೋಧ ಅಭಿಪ್ರಾಯ ಕೇಳಿಬಂದಿತ್ತು.

45-25ರ ನಡುವಿನ ಮದುವೆಯ ಕುತೂಹಲವೇನು?
45 ವರ್ಷವಾದರೂ ಹೆಣ್ಣು ಸಿಗದೆ ಶಂಕರಗೆ ಮದುವೆ ಆಗಿರಲಿಲ್ಲ. ಮೇಘನಾಳಿಗೆ ಈ ಮೊದಲೇ ಮದುವೆ ಆಗಿದ್ದು, ಪತಿ ಬಿಟ್ಟು ಹೋಗಿದ್ದ ಎಂದು ತಿಳಿದುಬಂದಿದೆ. ಶಂಕರ ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿ ಮದುವೆಯೇ ಬೇಡ ನಿರ್ಧರಿಸಿ ದ್ದರು. ಈ ವೇಳೆ ಸ್ವತಃ ಮೇಘನಾ ಅವರು ಶಂಕರ ಅವರನ್ನು ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇದಕ್ಕೆ ಒಪ್ಪಿಕೊಂಡ ಶಂಕರ ಅವರು ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ದ್ದಾರೆ. ಈ ಜೋಡಿಯ ಪೋಟೋ ಗಳು ಸಖತ್ ವೈರಲ್ ಆಗಿವೆ.

ನಕಾರಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದ ನೆಟ್ಟಿಗರು ವಾಸ್ತವತೆ ತಿಳಿದು 45-25ರ ನಡುವೆ ಬೆಸೆದ ಬಾಂಧವ್ಯದ ಬಂಧನಕ್ಕೆ ಶುಭ ಹಾರೈಸಿದ್ದಾರೆ.