Tuesday, 27th July 2021

ಕ್ಯಾಂಪ್ಕೊ ಸಂಸ್ಥೆಯ ‘ಜಾಕ್ ಫ್ರುಟ್  ಎಕ್ಲೇರ್ಸ್’ ಚಾಕೊಲೆಟ್ ಬಿಡುಗಡೆ

ಶಿರಸಿ : ಪ್ರಸಿದ್ಧ ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಹಲಸಿನ ಹಣ್ಣಿನಿಂದ ತಯಾರಿಸಲ್ಪಟ್ಟ ‘ಜಾಕ್ ಫ್ರುಟ್  ಎಕ್ಲೇರ್ಸ್’ ಎಂಬ ನೂತನ ಚಾಕೊಲೆಟ್ ಅನ್ನು ನಗರದ ಎಪಿಎಮ್ಸಿ ಯಾರ್ಡ ಸಮೀಪ ಇರುವ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಬಿಡುಗಡೆಗೊಳಸಲಾಯಿತು.

ಕ್ಯಾಂಪ್ಕೊ ನಿರ್ದೇಶಕ ಶಂಭುಲಿಂಗ ಹೆಗಡೆ ಚಾಕೊಲೆಟ್ ಬಿಡುಗಡೆಗೊಳಿಸಿ, ಕ್ಯಾಂಪ್ಕೊ ಅಡಿಕೆ, ಕೋಕೊ, ರಬ್ಬರ್ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. ಕಾಳು ಮೆಣಸಿಗೂ ಪ್ರಾಮುಖ್ಯತೆ ನೀಡಲಾಗಿದೆ. ಬೆಲ್ಲ, ಆಯುರ್ವೇದಿಕ್ ಗುಣದ ವಸ್ತುಗಳಿಂದ ಚಾಕೊಲೆಟ್ ತಯಾರಿಸುವ ಚಿಂತನೆ ಸಂಸ್ಥೆ ಹೊಂದಿದೆ. ಸಾವಯವ ಪದ್ಧತಿಯ ಚಾಕೊಲೆಟ್ ಇದಾಗಿದೆ ಎಂದರು.

ಸಂಸ್ಥೆಯ ಎಎಂಒ ಶಿವಮಾದ ನಾಯಕ, 24 ಬಗೆಯ ಚಾಕೊಲೆಟ್ ಈಗಾಗಲೆ ಮಾರುಕಟ್ಟೆಯಲ್ಲಿದೆ. ಇದು ಹೊಸ ರೂಪದ ಚಾಕೊಲೆಟ್ ಆಗಿದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಬೇಡಿಕೆ ಇದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಭರತ ಭಟ್, ಶಿರಸಿ ಭಾಗದ ವಿತರಕ ಗಜಾನನ ಹೆಗಡೆ ಇದ್ದರು.

Leave a Reply

Your email address will not be published. Required fields are marked *