Tuesday, 29th September 2020

ಜಪಾನ್‍ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ

ಜಪಾನ್: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ಶಿಂಜೋ ಅಬೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇವರ ಸ್ಥಾನಕ್ಕೆ ಆಡಳಿತ ಪಕ್ಷದ ಯೋಶಿಹಿದೆ ಸುಗಾ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮೂಲಕ ಜಪಾನ್ ನ ಮುಂದಿನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಯಾರು ಆಯ್ಕೆ ಯಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ಇಂತಹ ಆಯ್ಕೆಗಾಗಿ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಯಿಂದ ಮತದಾನ ಕೂಡ ನಡೆಯಿತು.

ಇದರಲ್ಲಿ ಯೋಶಿಹಿದೆ ಸುಗಾ ಅವರು 534 ಮತಗಳಲ್ಲಿ 377 ಮತ ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.  ಹೀಗಾಗಿ, ಜಪಾನ್ ನ ಮುಂದಿನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *