Sunday, 27th November 2022

ಬೀರಲಿಂಗೇಶ್ವರ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ

ಕೋಲಾರ: ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ದಿನಾಂಕ 27 ರಂದು ಬೆಳಿಗ್ಗೆ 8 ಗಂಟೆಗೆ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ದೇವರ ಅಭಿಷೇಕ, 9 ಗಂಟೆಗೆ ಗಂಗಾ ಶಿತಾಳ ಸ್ನಾನ ಹಾಗೂ ಒಡ್ಡಿವಾಲಗದೊಂದಿಗೆ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 3 ಗಂಟೆಗೆ ದೇವರ ಪಲ್ಲಕ್ಕಿಗಳ ಮೆರವಣಿಗೆ ದೇವಸ್ಥಾನಕ್ಕೆ ಆಗಮನ, ಸಾಯಂಕಾಲ 4-30 ಗಂಟೆಗೆ ಹಳ್ಳದಗೆಣ್ಣೂರ ಗ್ರಾಮದ ಅಧಿಕಾರಿ ಶಂಕರ್ ಬೆಳ್ಳುಬ್ಬಿ (ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ) ಇವರಿಗೆ ಸನ್ಮಾನ, ಸಾಯಂಕಾಲ 5-30 ಗಂಟೆಗೆ ಆಧ್ಯಾತ್ಮಿಕ ಪ್ರವಚನ ಹಾಗೂ ರಾತ್ರಿ 9 ಗಂಟೆಗೆ ಡೊಳ್ಳಿನ ಪದಗಳು ಜರುಗುವವು ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.