Wednesday, 1st February 2023

ಜೆ.ಡಿ.ಪಾಳ್ಯ ಸಿ.ಎನ್.ಮಧು ಶಕ್ತಿ ಪ್ರದರ್ಶನ

ಮಧುಗಿರಿ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಧು ಚಾರಿಟೇಬಲ್ ಟ್ರೆಸ್ಟ್ನ ಅಧ್ಯಕ್ಷ ಜೆ.ಡಿ.ಪಾಳ್ಯ ಸಿ.ಎನ್.ಮಧು ಪಟ್ಟಣದಲ್ಲಿ ಶಕ್ತಿ ಪ್ರದರ್ಶನ ತೋರಿಸಿದರು.

ಪಟ್ಟಣದ ಬೈಪಾಸ್‌ನಲ್ಲಿರುವ ತಮ್ಮ ಕಚೇರಿಯಿಂದ ಕೊರಟಗೆರೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಬಳಿ ತಮ್ಮ ಬೆಂಬಲಿಗರೊAದಿಗೆ ತೆರಳಲು ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಸಹಸ್ರಾರು ಬೆಂಬಲಿಗರೊ0ದಿಗೆ ಕೊರಟಗೆರೆಗೆ ತೆರಳಿ ಈ ಬಾರಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರಟಗೆರೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬರುತ್ತಿದ್ದು ಜನಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ. ಅದಕ್ಕಾಗಿ ನನ್ನ ಅಭಿಮಾನಿಗಳಿಂದ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ. ಸುಮಾರು ೩ ಸಾವಿರದಷ್ಟು ಅಭಿಮಾನಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುತ್ತಿದ್ದು, ಮೊದಲು ಪಟ್ಟಣದ ಮಲ್ಲೇಶ್ವರ ಹಾಗೂ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿ ಅಲ್ಲಿಂದ ಕೊರಟಗೆರೆ ವರೆಗೂ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ.

ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದ್ದು, ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟಿದ್ದೇನೆ. ಈ ಬಾರಿ ಮಧುಗಿರಿಯಲ್ಲಿ ಕಮಲವನ್ನು ಅರಳಿಸುತ್ತೇವೆ ಎಂದ ಅವರು ನಾನೊಬ್ಬ ಸ್ಥಳೀಯ ಅಭ್ಯರ್ಥಿಯಾಗಿದ್ದು, ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಪಕ್ಷದ ಸಿದ್ದಾಂತವನ್ನು ತಿಳಿಸಲಾಗಿದೆ. ಮಧುಗಿರಿಯಲ್ಲಿ ಹಿಂದಿನಿ0ದ ಜೆಡಿಎಸ್-ಕಾಂಗ್ರೆಸ್ ನೆಲೆಯಿದ್ದು ಬಿಜೆಪಿ ನೆಪಮಾತ್ರಕ್ಕೆ ಅನ್ನುವಂತಿತ್ತು. ಆದರೆ ಈ ಬಾರಿ ನನಗೆ ಟಿಕೆಟ್ ನೀಡಿದರೆ ೫೦ ಸಾವಿರ ಅಂತರದಲ್ಲಿ ಗೆಲುವು ಸಾದಿಸುವ ವಿಶ್ವಾಸವಿದೆ ಎಂದರು.

ಮುಖಂಡ ಪುಟ್ಟರಾಜು ಮಾತನಾಡಿ, ಬಿಜೆಪಿಗೆ ಕ್ಷೇತ್ರದಲ್ಲಿ ನೆಲೆಯಿಲ್ಲ ಎನ್ನುವ ಕಾಲ ಈಗಿಲ್ಲ. ಸಿ.ಎನ್ ಮಧು ರವರು ಸ್ಥಳೀಯ ರಾಗಿದ್ದು, ಪ್ರತಿ ನಾಗರೀಕನ ಮನಸ್ಸಲ್ಲಿದ್ದಾರೆ. ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ಎಲ್ಲರ ನಿರೀಕ್ಷೆ ಮೀರಿ ಗೆಲ್ಲಲಿದ್ದಾರೆ. ಸಂಘಟನೆಯನ್ನು ಗಮನಿಸಿ ಮಧುರವರಿಗೆ ಪಕ್ಷ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

error: Content is protected !!