Saturday, 21st May 2022

ಭದ್ರಾವತಿ 29ನೇ ವಾರ್ಡ್ ಚುನಾವಣೆ: ಗೆದ್ದ ಜೆಡಿಎಸ್‌

ಶಿವಮೊಗ್ಗ: ಭದ್ರಾವತಿ ನಗರಸಭೆ 29ನೇ ವಾರ್ಡ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಜೆಡಿಎಸ್ ಅಭ್ಯರ್ಥಿ ನಾಗರತ್ನ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ ಅವರು 1282 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲೋಹಿತಾ ನಂಜಪ್ಪ 832 ಮತಗಳು, ಬಿಜೆಪಿ ಪಕ್ಷದ ಅಭ್ಯರ್ಥಿ ರಮಾ ವೆಂಕಟೇಶ್ ಅವರು 70 ಮತಗಳನ್ನು ಪಡೆದುಕೊಂಡಿದ್ದಾರೆ.

ಬೂತ್ ನಂಬರ್ 111ರಲ್ಲಿ ಜೆಡಿಎಸ್ 243, ಕಾಂಗ್ರೆಸ್ 143, ಬಿಜೆಪಿ 15 ಮತ ಪಡೆದಿದೆ. ಬೂತ್ 112ರಲ್ಲಿ 420 ಮತ ಚಲಾವಣೆಯಾಗಿತ್ತು. ಜೆಡಿಎಸ್ 211, ಕಾಂಗ್ರೆಸ್ 195, ಬಿಜೆಪಿ 10 ಮತ ಪಡೆದಿವೆ. ಬೂತ್ 113ರಲ್ಲಿ 737 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ 485, ಕಾಂಗ್ರೆಸ್ 237, ಬಿಜೆಪಿ 12 ಮತಗಳು ಪಡೆದಿವೆ. ಬೂತ್ 114ರಲ್ಲಿ 641 ಮತಗಳು ಚಲಾವಣೆಯಾಗಿದ್ದವು. ಜೆಡಿಎಸ್ 343 ಕಾಂಗ್ರೆಸ್ 257, ಬಿಜೆಪಿ 33 ಮತ ಗಳಿಸಿದೆ.

16 ಮಂದಿ ನೋಟಾ ಮತಗಳನ್ನು ಚಲಾಯಿಸಿದ್ದಾರೆ. ಬೂತ್ ನಂಬರ್ 111ರಲ್ಲಿ 1, 112ರಲ್ಲಿ 4, 113ರಲ್ಲಿ 3, 114ರಲ್ಲಿ 8 ನೋಟಾ ಮತಗಳು ಚಲಾವಣೆಯಾಗಿದೆ. 29ನೇ ವಾರ್ಡ್ ನಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಾಬಲ್ಯ ವಿದೆ. ಈ ಹಿಂದೆ ಜೆಡಿಎಸ್ ಪಕ್ಷದ ಅನಿಲ್ ಕುಮಾರ್ ಅವರು ಈ ವಾರ್ಡ್ ನಿಂದ ಗದ್ದಿದ್ದರು. ಮೀಸಲಾತಿ ಬದಲಾದ ಹಿನ್ನೆಲೆ ಪತ್ನಿ ನಾಗರತ್ನ ಅವರನ್ನು ಕಣಕ್ಕಿಳಿಸಿದ್ದರು.

ಜೆಡಿಎಸ್ ಅಭ್ಯರ್ಥಿ ಗೆಲುವಿನಿಂದಾಗಿ ಭದ್ರಾವತಿ ನಗರಸಭೆಯಲ್ಲಿ ಜೆಡಿಎಸ್ ಹುಮ್ಮಸ್ಸು ಹೆಚ್ಚಾಗಿದೆ. 35 ವಾರ್ಡುಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್ 12, ಬಿಜೆಪಿ 4, ಪಕ್ಷೇತರರಾಗಿ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.