ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದ್ಯೋಗ

ದೇಶಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್ ಇಂಡಿಯಾ

ದೇಶಾದ್ಯಂತ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿ

ಅಮೆಜಾನ್ ಇಂಡಿಯಾ ಸಂಸ್ಥೆಯು ಮುಂಬರುವ ದೀಪಾವಳಿ ಹಾಗೂ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಸುಸಂದರ್ಭದಲ್ಲಿ ತನ್ನ ಇ-ಕಾಮರ್ಸ್ ಜಾಲದ ಮೂಲಕ ಭಾರತದಾದ್ಯಂತ ಸುಗಮ ಸೇವೆ ಗಳನ್ನು ಒದಗಿಸಲು ಸನ್ನದ್ಧವಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ದಾದ್ಯಂತ ತನ್ನ ಪ್ರಮುಖ ಕಾರ್ಯ ನಿರ್ವಹಣಾ ಕೇಂದ್ರಗಳು ಹಾಗೂ ಕ್ವಿಕ್ ಕಾಮರ್ಸ್ ಜಾಲ ದಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಾಗಿ ಘೋಷಣೆ ಮಾಡಿದೆ.

IBPS RRB recruitment 2026: ಗ್ರಾಮೀಣ ಬ್ಯಾಂಕ್‌ಗಳಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ಮುನ್ನ ಈ ಅಂಶಗಳನ್ನು ಗಮನಿಸಿ

ಗ್ರಾಮೀಣ ಬ್ಯಾಂಕ್‌ಗಳಲ್ಲಿದೆ ಉದ್ಯೋಗಾವಕಾಶ; ಹೀಗೆ ಅಪ್ಲೈ ಮಾಡಿ

Regional Rural Bank Recruitment 2026: ಐಬಿಪಿಎಸ್ ಗ್ರಾಮೀಣ ಬ್ಯಾಂಕ್ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗೆ ಅರ್ಜಿ ಅಹ್ವಾನಿಸಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲೂ ಅವಕಾಶವಿದೆ. ಅರ್ಜಿ ಸಲ್ಲಿಸುವ ಮುನ್ನ ಗಮನಿಸಬೇಕಾದ ವಿವರ ಇಲ್ಲಿದೆ.

Skill Development: ಸುಧಾರಿತ ಉತ್ಪಾದನಾ ಕ್ಷೇತ್ರಕ್ಕಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಲ್ಯಾಮ್ ರಿಸರ್ಚ್ ಆದ್ಯತೆ

ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಲ್ಯಾಮ್ ರಿಸರ್ಚ್ ಆದ್ಯತೆ

ಲ್ಯಾಮ್ ರಿಸರ್ಚ್ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಭಾರತ-ಆಧಾರಿತ ಸಾಮಾಜಿಕ ಹೊಣೆ ಗಾರಿಕೆ (ಸಿಎಸ್‌ಆರ್) ಉಪಕ್ರಮವಾಗಿ ಆರಂಭಿಸಲಾಗಿದ್ದು, ಇದು ಭಾರತದ ಸುಧಾರಿತ ಉತ್ಪಾದನಾ ಕ್ಷೇತ್ರದ ಪ್ರತಿಭಾ ಸಂಪನ್ಮೂಲವನ್ನು ಬಲಪಡಿಸಲು ಸಹಕಾರಿಯಾಗುವಂತೆ ತರಬೇತಿ ಮತ್ತು ಉದ್ಯೋಗ ನಿಯೋಜನಾ ಬೆಂಬಲ ಒದಗಿಸಲಿದೆ—ಕೌಶಲ್ಯಯುಕ್ತ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದು, ಉದ್ಯೋಗ ಸನ್ನದ್ಧತೆಯನ್ನು ಸುಧಾರಿಸುವುದು ಮತ್ತು ಹೆಚ್ಚು ಸಮಗ್ರ ಕಾರ್ಯ ಸ್ಥಳಗಳನ್ನು ಬೆಂಬಲಿಸುವುದು ಇದರ ಉದ್ದೇಶ

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾದ ಟೆಕ್ ದೈತ್ಯ ಒರಾಕಲ್; 10,000 ಉದ್ಯೋಗಿಗಳ ಭವಿಷ್ಯ ಅತಂತ್ರ

ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಯ್ತಾ ಟೆಕ್ ದೈತ್ಯ ಒರಾಕಲ್?

Oracle Layoffs: ವರ್ಷದ ಆರಂಭದಿಂದಲೂ ಸುದ್ದಿಯಲ್ಲಿರುವ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಒರಾಕಲ್ ಮತ್ತಷ್ಟು ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಈ ಉದ್ಯೋಗ ಕಡಿತ ಎಷ್ಟು ದೊಡ್ಡ ಪ್ರಮಾಣದಲ್ಲಿರಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಜಾಗತಿಕವಾಗಿ ಸುಮಾರು 7,000ದಿಂದ 10,000 ಉದ್ಯೋಗಗಳು ಕಡಿತಗೊಳ್ಳಬಹುದು ಎನ್ನಲಾಗಿದೆ. ಭಾರತೀಯರೂ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

KEA Recruitment: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; 4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ, ಇದೇ ತಿಂಗಳಲ್ಲಿ ಅಧಿಸೂಚನೆ!

4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ; ಇದೇ ತಿಂಗಳಲ್ಲಿ ಅಧಿಸೂಚನೆ!

Job News: ಪದವಿ ಹಾಗೂ ಪಿಯುಸಿ- ತತ್ಸಮಾನ ವಿದ್ಯಾರ್ಹತೆ ಹೊಂದಿರುವ ತಾಂತ್ರಿಕೇತರ ಹಾಗೂ ತಾಂತ್ರಿಕ- ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

KAS Recruitment 2026: 319 ಕೆಎಎಸ್‌ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಸೆ.7ರವರೆಗೆ ವಿಸ್ತರಣೆ

ಕೆಎಎಸ್‌ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಸೆ.7ರವರೆಗೆ ವಿಸ್ತರಣೆ

Gazetted Probationers Recruitment 2026: ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 319 ಹುದ್ದೆಗಳ ಭರ್ತಿ ಮಾಡಲು ಕೆಪಿಎಸ್‌ಸಿ ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ. 31ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಇನ್ನೂ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಭ್ಯರ್ಥಿಗಳ ಮನವಿ ಮೇರೆಗೆ ಆಯೋಗವು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಿಸಿದೆ.

ಬೆಂಗಳೂರಿನ ತ್ಯಾಜ್ಯ ಸಂಗ್ರಹಿಸುವ ಸಮುದಾಯಗಳ ನ್ಯಾನೋ ಉದ್ಯಮಿಗಳಿಗೆ ‘ಸಾಮೂಹಿಕ ಶಕ್ತಿ’ ಉಪಕ್ರಮದಿಂದ 2.5 ಪಟ್ಟು ಆದಾಯ ಹೆಚ್ಚಳ

‘ಸಾಮೂಹಿಕ ಶಕ್ತಿ’ ಉಪಕ್ರಮದಿಂದ 2.5 ಪಟ್ಟು ಆದಾಯ ಹೆಚ್ಚಳ

40 ಸಮುದಾಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಯಕ್ರಮವು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು, ಅಗತ್ಯ ಔಪಚಾರಿಕ ಅನುಸರಣೆಗಳನ್ನು ಪೂರ್ಣಗೊಳಿಸುವುದು, ಕಚ್ಚಾ ವಸ್ತುಗಳ ವೆಚ್ಚ ಕಡಿಮೆ ಮಾಡು ವುದು ಮತ್ತು ಹೊಸ ಮಾರುಕಟ್ಟೆಗಳಿಗೆ ಪ್ರವೇಶ ಕಲ್ಪಿಸುವ ಮೂಲಕ ನ್ಯಾನೋ ಉದ್ಯಮಗಳನ್ನು ಬಲಪಡಿಸುತ್ತಿದೆ

BOB Recruitment 2026: ಬ್ಯಾಂಕ್‌ ಆಫ್‌ ಬರೋಡದಲ್ಲಿದೆ ಬರೋಬ್ಬರಿ 2,482 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ ಬರೋಬ್ಬರಿ 2,482 ಹುದ್ದೆ

Bank Jobs: ಬ್ಯಾಂಕ್‌ ಆಫ್‌ ಬರೋಡ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,482 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೋಕಲ್‌ ಬ್ಯಾಂಕ್‌ ಆಫೀಸರ್‌ ಹುದ್ದೆ ಇದಾಗಿದ್ದು, ಕರ್ನಾಟಕದಲ್ಲಿ 418 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಕೊನೆಯ ದಿನ ಸೆಪ್ಟೆಂಬರ್‌ 7.

RRB Recruitment 2026: ರೈಲ್ವೆ ನೇಮಕಾತಿ ಮಂಡಳಿಯಿಂದ 4,029 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅರ್ಹತೆ, ವಯೋಮಿತಿ, ಅಪ್ಲೈ ಮಾಡುವ ವಿವರ ಇಲ್ಲಿದೆ

ರೈಲ್ವೆ ನೇಮಕಾತಿ ಮಂಡಳಿಯಿಂದ 4,029 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Railway Recruitment Board: ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಬರೋಬ್ಬರಿ 4,029 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಎಂಜಿನಿಯರ್‌, ಡಿಪೋಟ್‌ ಮೆಟೀರಿಯಲ್‌ ಸೂಪರಿಟೆಂಡೆಂಟ್‌ ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 13.

India Post GDS Recruitment 2026: ಅಂಚೆ ಇಲಾಖೆಯಲ್ಲಿ 25,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಕರ್ನಾಟಕದ ವಿಭಾಗವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ

ಅಂಚೆ ಇಲಾಖೆಯಲ್ಲಿ 25,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job News: ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್‌ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ ಹಾಗೂ ಡಾಕ್ ಸೇವಕ್ ಹುದ್ದೆಗಳು ಸೇರಿ ಒಟ್ಟು 25,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ಕುರಿತ ವಿವರ ಇಲ್ಲಿದೆ.

FDA, SDA Exam: ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ; ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!

ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!

Competitive Exam Rules: ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು 2026 ಅನ್ನ ರೂಪಿಸಿ ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ನೇಮಕಾತಿ ಪರೀಕ್ಷೆಯಲ್ಲಿ ಹಲವು ಹೊಸ ಮಾನದಂಡಗಳನ್ನು ಅಳವಡಿಸಲಾಗಿದೆ. ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಮತ್ತು ಮೆರಿಟ್‌ ಪಟ್ಟಿಯಲ್ಲಿ ಅಂಕ ಪಡೆಯಲು ಕನಿಷ್ಠ ಅಂಕ ನಿಗದಿ ಮಾಡಲಾಗಿದೆ.

GTTC Diploma ಓದಿದವರಿಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ; ಸರ್ಕಾರದಿಂದ ಮಹತ್ವದ ಆದೇಶ

GTTC Diploma ಓದಿದವರೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ

VAO Recruitment: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿನ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಗ್ರೂಪ್‌ ಸಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಜಿಟಿಟಿಸಿ ನಡೆಸುತ್ತಿರುವ 3+1 (1 ವರ್ಷದ ಇಂಟರ್ನ್‌ಶಿಪ್‌ ಸೇರಿದಂತೆ) ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್‌ ಪೂರೈಸಿದವರೂ ಅಪ್ಲೈ ಮಾಡಬಹುದು ಎಂದು ತಿಳಿಸಿದೆ.

BNYS: ಆಧುನಿಕ ಆರೋಗ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ವೃತ್ತಿ ಅವಕಾಶಗಳತ್ತ ಯುವಕರ ಹೆಜ್ಜೆ

BNYS: ಬೆಳೆಯುತ್ತಿರುವ ವೃತ್ತಿ ಅವಕಾಶಗಳತ್ತ ಯುವಕರ ಹೆಜ್ಜೆ

BNYS ಪದವಿಯು ಆಧುನಿಕ ವೈದ್ಯಕೀಯ ವಿಜ್ಞಾನದ ಜ್ಞಾನವನ್ನು ಭಾರತದ ಪಾರಂಪರಿಕ ಪ್ರಕೃತಿ ಚಿಕಿತ್ಸೆ, ಯೋಗ ಹಾಗೂ ಇತರ ಔಷಧರಹಿತ ಚಿಕಿತ್ಸಾ ವಿಧಾನಗಳೊಂದಿಗೆ ವೈಜ್ಞಾನಿಕವಾಗಿ ಸಮನ್ವಯ ಗೊಳಿಸುವ ಸಮಗ್ರ ಶಿಕ್ಷಣ ಮಾದರಿಯಾಗಿದೆ. “Best of the West” ಮತ್ತು “Best of the East” ಪರಿಕಲ್ಪನೆ ಗಳ ಅತ್ಯುತ್ತಮ ಅಂಶಗಳನ್ನು ಒಗ್ಗೂಡಿಸುವುದು ಇದರ ಪ್ರಮುಖ ವೈಶಿಷ್ಟ್ಯ.

SBI Recruitment 2026: ಎಸ್‌ಬಿಐಯಲ್ಲಿದೆ 9,124 ಜೂನಿಯರ್ ಅಸೋಸಿಯೇಟ್ ಹುದ್ದೆ; ಹೀಗೆ ಅಪ್ಲೈ ಮಾಡಿ

ಎಸ್‌ಬಿಐಯಲ್ಲಿದೆ 9,124 ಜೂನಿಯರ್ ಅಸೋಸಿಯೇಟ್ ಹುದ್ದೆ

Bank Jobs: ಎಸ್‌ಬಿಐ 2026ನೇ ಸಾಲಿನ Junior Associate (Customer Support & Sales) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ದೇಶಾದ್ಯಂತ ಒಟ್ಟು 9,124 ಹುದ್ದೆಗಳಿವೆ. ಕರ್ನಾಟಕದಲ್ಲಿ 760 ರೆಗ್ಯುಲರ್ ಮತ್ತು 39 ಬ್ಯಾಕ್‌ಲ್ಯಾಗ್‌ ಹುದ್ದೆಗಳು ಸೇರಿ ಒಟ್ಟು 799 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಅವಕಾಶವಿದೆ.

KAS Exam Age Relaxation: ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; 5 ವರ್ಷ ವಯೋಮಿತಿ ಸಡಿಲಿಸಿ ಕೆಪಿಎಸ್‌ಸಿ ಆದೇಶ

ಕೆಎಎಸ್‌ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; 5 ವರ್ಷ ವಯೋಮಿತಿ ಸಡಿಲಿಕೆ

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಜನವರಿಯಲ್ಲಿ ಒಪ್ಪಿಗೆ ನೀಡಿತ್ತು. ನಂತರ ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಇದೀಗ ಕೆಎಎಸ್‌ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಿರುವುದಾಗಿ ಕೆಪಿಎಸ್‌ಸಿ ಮಾಹಿತಿ ನೀಡಿದೆ.

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ

ಎನ್‌ಸಿಆರ್ ಮೂಲದ ಅಶೋಕ ವಿಶ್ವವಿದ್ಯಾಲಯವು 2025–26ನೇ ಸಾಲಿನ ಪ್ಲೇಸ್‌ಮೆಂಟ್‌ನಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ಉದ್ಯೋಗದ ನಿರೀಕ್ಷೆಯಲ್ಲಿದ್ದ ಎಲ್ಲ ವಿದ್ಯಾರ್ಥಿ ಗಳಿಗೂ ಭರ್ಜರಿ ಉದ್ಯೋಗಾವಕಾಶಗಳು ಒಲಿದು ಬಂದಿದ್ದು, ವಿದ್ಯಾರ್ಥಿಯೊಬ್ಬರು ಬರೋಬ್ಬರಿ 42.5 ಲಕ್ಷ ರೂ.ಗಳ ವಾರ್ಷಿಕ ವೇತನದ ಪ್ಯಾಕೇಜ್ ಪಡೆದಿದ್ದಾರೆ.

1,538 ಕ್ಲರ್ಕ್ ಹುದ್ದೆಗಳಿಗೆ ಎಸ್‌ಬಿಐಯಿಂದ ಅರ್ಜಿ ಆಹ್ವಾನ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ

ಎಸ್‌ಬಿಐನಲ್ಲಿ 1,538 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Bank Jobs: ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗಾಗಿ ಕಾಯುತ್ತಿರುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಈ ಬಾರಿ ಸಾಮಾನ್ಯ ನೇಮಕಾತಿಗಿಂತ ಭಿನ್ನವಾದ ಅವಕಾಶವೊಂದು ಬಂದಿದೆ. ದೇಶಾದ್ಯಂತ ಒಟ್ಟು 1,538 ಹುದ್ದೆಗಳು ಪ್ರಕಟವಾಗಿದ್ದು, ಕರ್ನಾಟಕದಲ್ಲಿ 120 ಹುದ್ದೆಗಳಿವೆ. ಅವು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲು.

KSET 2026: ಸಹಾಯಕ ಪ್ರಾಧ್ಯಾಯಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ

ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ

KSET 2026: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (ಕೆಸೆಟ್) ಅನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

SBI Recruitment 2026: ಎಸ್‌ಬಿಐಯಲ್ಲಿದೆ ಬರೋಬ್ಬರಿ 1,576 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಇಂದೇ ಅಪ್ಲೈ ಮಾಡಿ

ಎಸ್‌ಬಿಐಯಲ್ಲಿದೆ ಬರೋಬ್ಬರಿ 1,576 ಹುದ್ದೆ

Bank Jobs: ಸಾರ್ವಜನಿಕ ವಲಯದ ಭಾರತದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 1,576 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜ್ಯೂನಿಯರ್‌ ಅಸೋಸಿಯೇಟ್‌, ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌, ಡೆಪ್ಯುಟಿ ಮ್ಯಾನೇಜರ್‌ ಸೇರಿ ಹಲವು ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್‌ 27.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ 11,403 ‘ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Banking Recruitment: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 11,403 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 1,414 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರಿನಲ್ಲಿ ಬೃಹತ್ 'ಜಿಸಿಸಿ' ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ 'ಡಿಪ್ಯೂ ಸಿಂಥೆಸ್', 500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

'ಜಿಸಿಸಿ' ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ 'ಡಿಪ್ಯೂ ಸಿಂಥೆಸ್'

ರೋಗಿಗಳಿಗೆ, ವೈದ್ಯಕೀಯ ಪಾಲುದಾರರಿಗೆ ಹಾಗೂ ಶಸ್ತ್ರಚಿಕಿತ್ಸಕರಿಗೆ ಅತ್ಯಾಧುನಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರವು ಕೆಲಸ ಮಾಡಲಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಡೆವಲಪ್ಮೆಂಟ್, ಡೇಟಾ ಮತ್ತು ಕೃತಕ ಬುದ್ಧಿಮತ್ತೆ, ಎಂಟರ್‌ಪ್ರೈಸ್ ಅಪ್ಲಿಕೇಶನ್ಸ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ನವೀನ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಜಿಸಿಸಿ ವೇದಿಕೆಯಾಗಲಿದೆ.

ಉದ್ಯೋಗಾಂಕ್ಷಿಗಳ ಗಮನಕ್ಕೆ...: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೊಮ್ಮೆ ವಿಸ್ತರಣೆ

ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KEA Recruitment: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಹೊಸ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆಗಸ್ಟ್‌ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನ ಆಗಸ್ಟ್‌ 21.

10 ವರ್ಷಗಳಲ್ಲಿ ಕೇಂದ್ರದಿಂದ 17 ಕೋಟಿ ಉದ್ಯೋಗ ಸೃಷ್ಟಿ; ಯುಪಿಎ ಅವಧಿಗಿಂತ 6 ಪಟ್ಟು ಹೆಚ್ಚು: ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ

10 ವರ್ಷಗಳಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ: ಕೇಂದ್ರ ಸರ್ಕಾರದಿಂದ ಮಾಹಿತಿ

17 Crore Jobs Created in 10 Years: 2014 ಮತ್ತು 2024ರ ನಡುವೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ಇದು ಯುಪಿಎ ಅವಧಿಯಲ್ಲಿನ ಬೆಳವಣಿಗೆಗಿಂತ ಸುಮಾರು ಆರು ಪಟ್ಟು ಹೆಚ್ಚು ಎಂದು ಅವರು ವಿವರಿಸಿದರು.

6 ನಗರ 10,000 ಟೆಕ್ಕಿಗಳು: ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ 'ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್'! ಏನಿದರ ಉದ್ದೇಶ?

ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ 'ಓಪನ್‌ಎಐ ಕೋಡೆಕ್ಸ್‌ ಹ್ಯಾಕಥಾನ್'!

'ಓಪನ್ಎಐ ಕೋಡೆಕ್ಸ್' ಎಂಬುದು ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಅತ್ಯಾಧುನಿಕ ಎಐ ಕೋಡಿಂಗ್ ಪ್ಲಾಟ್‌ ಫಾರ್ಮ್ ಆಗಿದೆ. ಉದ್ಯೋಗಿಗಳು ಈ ವೇದಿಕೆಯನ್ನು ಬಳಸಿಕೊಂಡು ಹೊಸ ತಂತ್ರಜ್ಞಾನಗಳನ್ನು ಕಲಿಯಲು, ಪ್ರಯೋಗಗಳನ್ನು ಮಾಡಲು ಮತ್ತು ನೈಜ ವ್ಯಾಪಾರ-ವ್ಯವಹಾರಗಳ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಈ ಹ್ಯಾಕಥಾನ್ ಅವಕಾಶ ಕಲ್ಪಿಸಿದೆ.

Loading...