Wednesday, 1st December 2021

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಇನ್ನಿಲ್ಲ

ಚಿಕ್ಕಮಗಳೂರು : ಕ್ರೈಂ ವರದಿಗಾರಿಕೆಯಲ್ಲಿ ಹೆಸರನ್ನು ಮಾಡಿ, ಗುರ್ತಿಸಿಕೊಂಡಿದ್ದ ಸುನೀಲ್ ಹೆಗ್ಗರವಳ್ಳಿ(43) ಹೃದಯಾಘಾತದಿಂದ ಸೋಮವಾರ ನಿಧನರಾಗಿ ದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ನಿವಾಸಿಯಾಗಿದ್ದ ಸುನೀಲ್, ಕನ್ನಡ ಪತ್ರಿಕಾ ರಂಗದಲ್ಲಿ ಕ್ರೈಂ ವರದಿಗಾರಿಕೆಯಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದವರು. ಇಂತಹ ಅವರು, ಕಳೆದ ವರ್ಷ ತಮ್ಮ ಹುಟ್ಟೂರಿ ಹೆಗ್ಗರವಳ್ಳಿಯಲ್ಲಿ ಮನೆ ನಿರ್ಮಿಸಿ, ಬೆಂಗಳೂರಿನಿಂದ ಬಂದು ಅಲ್ಲಿಯೇ ನೆಲೆಸಿದ್ದರು.

ಹೀಗೆ ಹುಟ್ಟೂರಿನಲ್ಲಿದ್ದ ಸುನೀಲ್ ಹೆಗ್ಗರವಳ್ಳಿಗೆ ಮಧ್ಯಾಹ್ನ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಕೂಡಲೇ ಕುಟುಂಬಸ್ಥರು ಗೋಣಿ ಬೀಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ಅವರ ನಿಕಟವರ್ತಿಗಳು ತಿಳಿಸಿದ್ದಾರೆ.