ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ತುಂಗಭದ್ರ ನೀರಾವರಿ ಕಾರ್ಮಿಕರ ಸಂಘದ ತಾ. ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಮಾತನಾಡಿ ಸಂಘವು ಕಾರ್ಮಿಕರಿಗೆ ಸರಿಯಾಗಿ ವೇತನ , ಭವಿಷ್ಯನಿಧಿ ಮತ್ತು ಉದ್ಯೋಗಿ ರಾಜ್ಯ ವಿಮೆ, ದೊರಕಿಸಲು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಯರಮರಸ್ ವಲಯದ ವ್ಯಾಪ್ತಿಯಲ್ಲಿ ಒಟ್ಟು 748 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು 669 ಕಾರ್ಮಿಕರನ್ನು ಸಂಘದ ಸದಸ್ಯರನ್ನಾಗಿಸಲಾಗಿದೆ, ಬೇಸಿಗೆಯ ಅವಧಿಗೆ ನಿರಂತರವಾದ ಕೆಲಸ ಹಾಗೂ ಬಾಕಿ ಇರುವ ಭವಿಷ್ಯ ನಿಧಿ ಮತ್ತು ಕಾರ್ಮಿಕರ ರಾಜ್ಯ ವಿಮೆ ಬಾಕಿಯನ್ನು ಬಡ್ಡಿ ಸಮೇತ ವಸೂಲಿ ಮಾಡಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಸಹಕಾರ ದೊಂದಿಗೆ ರೈತರಿಗೆ ನೀರು ಹರಿಸಲು ಕಾರ್ಮಿಕರು ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ಸಿದ್ದಪ್ಪಗೌಡ,ಬಸವಲಿಂಗಪ್ಪ,ಚAದೂ ಸಾಬ್,ಮಹ್ಮದ್ ರಫಿ,ರಾಜಮಹ್ಮದ್.ಗುರಣ್ಣ ಸೇರಿದಂತೆ ಇನ್ನಿತರರು ಇದ್ದರು.