ಮಂಡ್ಯ: ಕೆ.ಆರ್.ಪೇಟೆ ಜನ ತುಂಬಾ ಪ್ರಜ್ಞಾವಂತರು. ಕಳೆದ ಚುನಾವಣೆಯಂತ ವಾತಾವರಣ ಈಗ ಇಲ್ಲ. ಈ ಚುನಾವಣೆಯಲ್ಲಿ ಜನ ಸಂಪೂರ್ಣ ಬದಲಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆೆಸ್ ಗೆದ್ದೇ ಗೆಲ್ಲುತ್ತದೆ. ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆೆಸ್ ಗೆಲ್ಲಲಿದೆ. ಕೊರತೆಯಿರಬಹುದು, ಆದರೆ ಪ್ರಚಾರದಲ್ಲಿ ಹಿಂದುಳಿದಿಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಾಮಿ ಹೇಳಿದ್ದಾಾರೆ.
ಕೈ ಅಭ್ಯರ್ಥಿ ಜತೆ ಪ್ರಚಾರ ನಡೆಸದ ಆರೋಪಕ್ಕೆೆ ಸ್ಪಷ್ಟನೆ ನೀಡಿದ ಚೆಲುವರಾಯಸ್ವಾಾಮಿ, ನಾಗಮಂಗಲದಲ್ಲಿ ಭೀಕರ ಅಪಘಾತವಾಗಿತ್ತು. ಆ ಅಪಘಾತದಲ್ಲಿ 8 ಮಂದಿ ಮೃತಪಟ್ಟಿಿದ್ದರು. ಹೀಗಾಗಿ ಅಲ್ಲಿದ್ದ ಕಾರಣ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಮೊನ್ನೆೆ ಸಿದ್ದರಾಮಯ್ಯನವರ ಜತೆ ಪ್ರಚಾರ ಮಾಡಿದ್ದೆವು. ನಾಳೆಯಿಂದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು. ಇದೇ ವೇಳೆ, ಎಚ್ಡಿಕೆ ವಿರುದ್ಧ ಚೆಲುವರಾಯಸ್ವಾಾಮಿ ಕಿಡಿಕಾರಿದರು. ಮಾಜಿ ಸಿಎಂ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಮಂಡ್ಯ ಜನರ ಸಂಕಷ್ಟಕ್ಕೆೆ ಜೆಡಿಎಸ್ ಕಾರಣ. ಯಾಕೆಂದರೆ ಮಂಡ್ಯದಲ್ಲಿ 2 ಸಕ್ಕರೆ ಕಾರ್ಖಾನೆಗಳು ಸ್ಥಗಿತ ಆಗಿವೆ. ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಕೊಡಲಿಲ್ಲ. ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ್ದ ಎಂಟೂವರೆ ಸಾವಿರ ಕೋಟಿ ಹಣಕ್ಕೆೆ ದಾಖಲೆ ನೀಡಬೇಕು. ಲೋಕಸಭೆ ಸೋಲಿನ ಬಳಿಕ ಮಂಡ್ಯ ಮರೆತದ್ದು ಯಾಕೆ ಅಂತಾ ಹೇಳಬೇಕು? ಎಂದರು.