Wednesday, 21st October 2020

ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪನೆ

ಮತ ಸೆಳೆಯಲು ರಣತಂತ್ರ| ಜಿಪಂ ಅಧ್ಯಕ್ಷ ಗಾದಿ ಒಲಿಯುವುದೇ?

ತುಮಕೂರು: ಶಿರಾ ಉಪ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಕಾಡುಗೊಲ್ಲ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದೆ. ಶಿರಾ ತಾಲೂಕಿನಲ್ಲಿ 154 ಗೊಲ್ಲರಹಟ್ಟಿಗಳಿದ್ದು, ಸುಮಾರು 35 ಸಾವಿರ ಅಧಿಕ ಮತಗಳಿವೆ.

ಅಭ್ಯರ್ಥಿಗಳ ಗೆಲುವಿನಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕ. ಆದ್ದರಿಂದ ಸಿಎಂ ಯಡಿಯೂರಪ್ಪ ಜನಾಂಗದ ಬಹುದಿನದ ಕನಸಾಗಿದ್ದ ನಿಗಮ ಮಂಡಳಿಯನ್ನು ಘೋಷಣೆ ಮಾಡಿರುವುದು ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ. ಗೊಲ್ಲರಿಗೆ ಜಿಪಂ ಅಧ್ಯಕ್ಷ ಹುದ್ದೆ ಜಿಪಂ ಅಧ್ಯಕ್ಷ ಗಾದಿಯನ್ನು ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಯಶೋದಮ್ಮರಿಗೆ ಬಿಟ್ಟುಕೊಡಲು ಬಿಜೆಪಿ ರಣವ್ಯೂಹ ರಚಿಸಿದೆ.

ಜೆಡಿಎಸ್ ವಿರುದ್ದ ರಣತಂತ್ರ ರೂಪಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ಗೌಡ ಅವರು ಶೀಘ್ರವೇ ಕಾಡುಗೊಲ್ಲರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಸತೀಶ್ಗೆ ಕಾರ್ಯಾಧ್ಯಕ್ಷ ಸ್ಥಾನ 2018 ವಿಧಾನಸಭಾ ಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ಅವರು ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಸಾಸಲು ಸತೀಶ್ಗೆ ಟಿಕೆಟ್ ತಪ್ಪಿಸಿ ಪುತ್ರ ಸಂತೋಷ್ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿ ಯಾಗಿದ್ದರು. ಆಗಿನಿಂದಲೂ ಸತೀಶ್ ತ್ತು ಟಿಬಿಜೆ ನಡುವೆ ಶೀತಲ ಸಮರ ನಡೆಯುತ್ತಿತ್ತು.

ಈಗ ಚುನಾವಣಾ ಹಿನ್ನೆಲೆಯಲ್ಲಿ ಕಾಡುಗೊಲ್ಲರ ಮತಗಳನ್ನು ಸೆಳೆಯಲು ಸತೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ನಲ್ಲಿ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಕಾಡುಗೊಲ್ಲರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮುದಾಯದ ಮುಖಂಡರು ಸಿಎಂ ಯಡಿಯೂರಪ್ಪರನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *