Monday, 6th February 2023

ಜಯಂತ್ ಕಾಯ್ಕಿಣಿ ಅವರನ್ನ Giant ಕಾಯ್ಕಿಣಿ ಅಂತಾನೂ ಕರೀಬಹುದು

ತುಂಟರಗಾಳಿ

ಸಿನಿ ಗನ್ನಡ

ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನ್ ಮಹಾ ವಿಷ್ಯ ಬಿಡಿ. ಆಕೆ ನ್ಯಾಷನಲ್ ಕ್ರಷ್ ಅಂತೀರಾ? ಅದ್ಯಾರು ಆಕೆಗೆ ಕ್ರಷ್ ಅಂತ ಕರೆದ್ರೋ ಪಾಪ, ನಮ್ಮ ಜನ ಆಕೆಯನ್ನ ಅವಕಾಶ ಸಿಕ್ಕಾಗಲೆ ಸೋಷಿಯಲ್ ಮೀಡಿಯಾದಲ್ಲಿ ‘ಕ್ರಷ್’ ಮಾಡ್ತಾ ಇರ್ತಾರೆ. ರಶ್ಮಿಕಾ ಕೂಡಾ ಕಡಿಮೆ ಇಲ್ಲ. ಈ ರಶ್ಮಿಕಾ ಮಂದಣ್ಣನ ಬುದ್ಧಿ ಏನು ‘ಮಂದಾನಾ’ ಅನ್ನೋ ಥರಾ ಮಾತಾ ಡುವವರಿಗೆ ಅವಕಾಶಗಳನ್ನ ಕೊಡ್ತಾನೇ ಇರ್ತಾರೆ.

ಹಾಗಾಗಿ ಈಗ ‘ರಶ್ಮೀ ಕಾ ಮಾಮ್ಲಾ’ ಮತ್ತೆ ಚರ್ಚೆ ಯಲ್ಲಿದೆ. ಆಕೆ ಅದ್ಯಾವ ಶುಭ ಲಗ್ನದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡಳೋ ಆಗಿನಿಂದ ಕರುನಾಡ ಜನ ಆಕೆ ತಮಗೇ ಮೋಸ ಮಾಡಿದ್ದಾಳೆ ಅನ್ನೋ ಥರ ರೊಚ್ಚಿ ಗೆದ್ದು ಆಕೆಯನ್ನು ಟ್ರೋಲ್ ಮಾಡಲು ಕಾಯ್ತಾ ಇರ್ತಾರೆ. ಇಂಥ ಸಂದರ್ಭದಲ್ಲಿ ಆಕೆ ತನಗೆ ಮೊದಲು ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಸಿನಿಮಾ ನಿರ್ಮಾಪಕರ ಬಗ್ಗೆ ಬಾಯಲ್ಲಿ ಅವರ ಹೆಸರು ಹೇಳಿದ್ರೆ ಮುತ್ತು ಉದುರುತ್ತೆ ಅಂತ ಕೈ ತೋರಿಸಿ ಮಾತನಾಡಿದ್ದಾರೆ. ಹಾಗಾಗಿ ಈಗ ಎಲ್ಲರೂ ಅವರತ್ತ ಬೆರಳು ತೋರಿಸಿ ಮಾತನಾಡುತ್ತಿದ್ದಾರೆ.

ಆದರೆ ತೀರಾ ಮಧ್ಯದ ಬೆರಳು ತೋರಿಸಿ ಮಾತನಾಡುವ ಮಟ್ಟಕ್ಕೆ ಹೋಗಿಲ್ಲ ಬಿಡಿ. ಆದರೆ, ಈ ರಶ್ಮಿಕಾ ಮಂದಣ್ಣ ಅಂದ್ರೆ
ಯಾರು ಅಂತ ಜಗತ್ತಿಗೆ ಪರಿಚಯಿಸಿದ ನಿರ್ಮಾಪಕ, ನಿರ್ದೇಶಕರ ಹೆಸರು ಹೇಳೋಕೂ ಯಾವಾಗ ಆಕೆ ಹಿಂಜರಿದಳೋ ಆಗಿನಿಂದ ಆಕೆಯನ್ನ ಜರಿಯುವವರ ಸಂಖ್ಯೆ ಜಾಸ್ತಿ ಆಗಿದೆ. ಈ ಕಿರಿಕ್ ಪಾರ್ಟಿಯ ಬುದ್ಧಿಗೆ ನಟ ರಿಷಬ್ ಶೆಟ್ಟಿ ಏನೋ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದಾರೆ.

ಆದರೆ ಇಲ್ಲಿ ಎಲ್ಲರಿಗಿಂತ ಹೆಚ್ಚು ನೊಂದುಕೊಡಿರುವುದು ಸೋಷಿಯಲ್ ಮೀಡಿಯಾದ ಕೆಲವು ಫೆಮಿನಿಸ್ಟ್ ಗಳು ಮತ್ತು ಹೆಣ್ಣು
ಮಕ್ಕಳ ಬಗ್ಗೆ ಅನಗತ್ಯ ಕಾಳಜಿ ತೋರಿಸೋದನ್ನೇ ಕಾಯಕ ಮಾಡಿಕೊಂಡಿರೋ ಕೆಲವು ಗಂಡು ಮಕ್ಕಳು. ಇದೇ ಕಂಗನಾ
ರಣಾವತ್ ಎಂಬ ನಟಿಯನ್ನು ಆಕೆ ಮೋದಿ ಬೆಂಬಲಿಗಳು ಅನ್ನೋ ಕಾರಣಕ್ಕೆ ನಾನಾ ವಿಧವಾಗಿ ಆಡಿಕೊಂಡ ಇದೇ ಜನ ಈಗ ಹೆಣ್ಣಿನ ಬಗ್ಗೆ ಹಿಂಗೆ ಮಾತಾಡಬಾರದು ಅಂತ ರೊಚ್ಚಿಗೆದ್ದಿರೋದು ಮಾತ್ರ ಹಾಸ್ಯಾಸ್ಪದ.

ಯಾಕಂದ್ರೆ ಹೇಳಿ ಕೇಳಿ ಇದು ರಶ್ಮಿಕಾ ತಾನಾಗೇ ಪಡೆದುಕೊಂಡಿರುವ ರಿವಾರ್ಡ್. ಮಾತಿನ ಮೇಲೆ ಸ್ವಲ್ಪ ಹಿಡಿತ ಇದ್ದು, ಯಶಸ್ಸು ಸಿಕ್ಕ ಮೇಲೆ ಹೆಗಲ ಮೇಲೆ ತಲೆ ನಿಂತಿದ್ರೆ ಯಾರೂ ಅವರನ್ನ ಹೀಯಾಳಿಸುತ್ತಿರಲಿಲ್ಲ ಅನ್ನೋದು ಮಾತ್ರ ಸತ್ಯ. ನಾನು ಯಾರಿಗೂ ಕೇರ್ ಮಾಡಲ್ಲ, ನಂಗೆ ಯಾರೂ ಬೇಡ ಅಂತೆ ಯಶಸ್ಸು ಸಿಗೋಕೆ ಮುಂಚೆ ಮಾತಾಡಿದ್ರೆ ಅದು ತಾಕತ್ತು. ಹತ್ತಿದ ಏಣಿ ಒದೆಯೋದು ಎಲ್ಲಾ ಅಯೋಗ್ಯರಿಗೂ ಗೊತ್ತು.

ಲೂಸ್ ಟಾಕ್
ಅರವಿಂದ್ ಕೇಜ್ರಿವಾಲ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಜನಗಳಿಗೆ ಉಚಿತ ಸೌಲಭ್ಯ ಕೊಟ್ಟು ದಿಲ್ಲಿ, ಪಂಜಾಬ್‌ನಲ್ಲಿ ಗೆದ್ದ ನಿಮ್ಮ ಮೇಲೆ ಎಲ್ಲರ ಕಣ್ಣು ಬಿದ್ದಿದೆಯಲ್ಲ?
-ಕಣ್ಣು ಬಿದ್ರೆ ಏನ್ ಬಿಡಿ, ನಮ್ಮತ್ರ ಪೊರಕೆ ಇದೆ, ದೃಷ್ಠಿ ತೆಗೆಸಿಕೊಳ್ತೀನಿ.

ಅದ್ಸರಿ, ಈ ರೀತಿ ಫ್ರೀಯಾಗಿ ಸೌಲಭ್ಯ ಕೊಡೋದು ತಪ್ಪು ಅಂತಾರಲ್ಲ ಕೆಲವರು?
-ಅಯ್ಯೋ, ಫ್ರೀ ಸ್ಟೈಲ್ ಬಾಕ್ಸಿಂಗ್ ಎ ಇರುತ್ತಲ್ಲ, ಆ ಥರ ನಮ್ಮದು ಫ್ರೀ ಸ್ಟೈಲ್ ಪೊಲಿಟಿಕ್ಸ, ಇದರಲ್ಲೇನು ತಪ್ಪು?

ನಾವು ಹಿಂಗೆ ಫ್ರೀ ಕೊಡಲ್ಲ, ಈ ಥರ ಉಚಿತವಾಗಿ ಕೊಡೋದು ಉಚಿತವಲ್ಲ ಅಂತ ಮೋದಿನೂ ಹೇಳ್ತಾ ಇದ್ದಾರಲ್ಲ?  -ಅಯ್ಯೋ, ದೇವರು ಕೊಡಲಿಲ್ಲ ಅಂದ ಮಾತ್ರಕ್ಕೆ ಪೂಜಾರಿನೂ ಕೊಡಬಾರದು ಅಂತ ರೂಲ್ ಇದೆಯಾ?

ಅದ್ಸರಿ, ಎಲೆಕ್ಷನ್ ಟೈಮಲ್ಲಿ ನೀವು ಟೆಂಪಲ್ ರನ್ ಮಾಡಲ್ವಾ?
-ಅವೆ ಇಲ್ಲ, ಎರೂ ಚುನಾವಣೆ ಹತ್ರ ಬಂದ್ರೆ ದೇವರಿಗೆ ಹರಕೆ ಹೊತ್ಕೊತಾರೆ, ನಾವು ಪೊರಕೆ ಎತ್ಕೊತೀವಿ.

ಸರಿ ನಿಮ್ಮ ಪಕ್ಷಕ್ಕೆ ಪೊರಕೆ ಗುರುತು ಇಟ್ಟಿದ್ದು ಯಾಕೆ?
-‘ಗುಡಿಸಲು’ ಮುಕ್ತ ದೇಶ ಮಾಡೋಣ ಅಂತ.

ನೆಟ್ ಪಿಕ್ಸ್
ಮಧ್ಯರಾತ್ರಿ ಖೇಮು ಆಟೋ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಹೆಂಗಸು ನಿಂತ್ಕೊಂಡು ಕೈ ತೋರಿಸಿ ಅಡ್ಡ ಹಾಕಿದಳು. ಹೆಣ್ಣುಮಗಳು ಅಂತ ಗಾಡಿ ನಿಲ್ಲಿಸಿದ ಖೇಮು. ಅವಳ ಮುಖ ಯಾಕೋ ತುಂಬಾ ಗಂಭೀರವಾಗಿತ್ತು. ಅಲ್ಲದೆ,
ಕಂಪ್ಲೀಟ್ ವೈಟ್ ಸೀರೆ ಹಾಕಿಕೊಂಡಿದ್ದಳು. ಮೈಮೇಲೆ ಒಂದೂ ಆಭರಣ ಇರಲಿಲ್ಲ. ಈ ರೋಡಲ್ಲಿ ದೆವ್ವಗಳ ಕಾಟ ಅಂತ ಗೊತ್ತಿದ್ರೂ ಯಾಕಪ್ಪಾ ನಿಲ್ಲಿಸಿದೆ ಅಂತ ಒಳಗೊಳಗೇ ಹೆದರಿಕೊಂಡ ಖೇಮು. ಆದರೆ ಆ ಹೆಣ್ಣು ಅಣ್ಣಾ ತುಂಬಾ ತಡ ಆಗಿದೆ ಕರ್ಕೊಂಡ್ ಹೋಗಿ ಅಂದಾಗ, ಇಲ್ಲ ಅನ್ನೋಕಾಗದೆ ಕೂರಿಸಿಕೊಂಡ.

ಹಿಂದೆ ಕೂತಿರೋದು ದೆವ್ವ ಅನ್ನೋ ಭಯದ ಗಾಡಿ ಓಡಿಸುತ್ತಿದ್ದ ಖೇಮು. ತಗ್ಗು ದಿನ್ನೆ, ಹಂಪ್‌ಗಳ ಮೇಲೂ ಅವನಿಗೆ ಗಮನ ಇರಲಿಲ್ಲ. ಬೇಗ ಮನೆಗೆ ತಲುಪಿದರೆ ಸಾಕು ಅಂತ ಸ್ಪೀಡಾಗಿ ಹೋಗುತ್ತಿದ್ದ ಖೇಮು. ಸ್ವಲ್ಪ ದೂರ ಹೋದ ಮೇಲೆ ಸುಮ್ಮನೆ ಅನುಮಾನದಿಂದ ಹಿಂದೆ ತಿರುಗಿ ನೋಡಿದರೆ, ಹುಡುಗಿಯ ಮುಖದಲ್ಲಿ ಒಂದಿಷ್ಟು ಕೆಂಪನೆ ಬಣ್ಣ ಕಾಣುತ್ತಿತ್ತು. ಅದು ರಕ್ತ
ಅಂತ ಗೊತ್ತಾಯಿತು ಖೇಮುಗೆ. ಮತ್ತೆ ಮುಂದೆ ಹೋಗಿ, ಮತ್ತೆ ತಿರುಗಿ ನೋಡಿದ.

ಹೀಗೆ ಪ್ರತಿ ಸಾರಿ ತಿರುಗಿ ನೋಡಿದಾಗಲೂ ಆಕೆಯ ಮುಖದ ಮೇಲಿನ ರಕ್ತ ಜಾಸ್ತಿ ಆಗ್ತಾ ಬಂತು. ಖೇಮುಗೆ ಹಾರ್ಟ್ ಅಟ್ಯಾಕ್ ಆಗೋದೊಂದ್ ಬಾಕಿ. ಕೊನೆಗೆ ಆಕೆಯ ಮುಖ ಸಂಪೂರ್ಣ ರಕ್ತ ಆಗಿದ್ದನ್ನು ನೋಡಿ, ಥಟ್ಟನೆ ಆಟೋ ನಿಲ್ಲಿಸಿ, ದಯವಿಟ್ಟು ನನ್ನ ಬಿಟ್ಟು ಬಿಡು, ನನಗೆ ಹೆಂಡ್ತಿ ಮಕ್ಳಿದ್ದಾರೆ. ಅಂದ.

ಅದಕ್ಕೆ ಆಕೆ ಗಂಭೀರವಾಗಿ ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು, ‘ಅಯ್ಯೋ, ನಿನ್ ಮುಖ ಮುಚ್ಚಾ, ಅವಾಗಿಂದ ಅಷ್ಟೊಂದ್ ಸ್ಪೀಡಾಗಿ ಓಡಿಸ್ತಾ ಇದೀಯಾ. ಹಂಪ್, ತಗ್ಗು ಬಂದಾಗ ಸಡನ್ ಆಗಿ ಬ್ರೇಕ್ ಹಾಕ್ತೀಯಾ, ಪ್ರತಿ ಸಾರಿ ನೀನು ಬ್ರೇಕ್ ಹಾಕಿದಾಗಲೂ ನನ್ನ ಮುಖ ಮುಂದಿನ ಮೆಟಲ್ ಬಾರ್‌ಗೆ ಹೊಡೆದುಕೊಂಡು ಹಿಂಗೆ ರಕ್ತ ಬರ್ತಾ ಇದೆ. ಬೇಗ ಆಸ್ಪತ್ರೆಗೆ ಕರ್ಕೊಂಡ್ ಹೋಗು’

ಲೈನ್ ಮ್ಯಾನ್

ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಜಯಂತ್ ಕಾಯ್ಕಿಣಿ ಅವರನ್ನ ಏನಂತ ಕರೀಬಹುದು?

-ಎಜಿZಠಿ ಕಾಯ್ಕಿಣಿ

ಫ್ರಿಜ್‌ನಲ್ಲಿ ಡೆಡ್ ಬಾಡಿ ಇಡೋ ಗಂಡ ಹೆಂಡತಿಯರ ಯುದ್ಧ
-ಶೀತಲ ಸಮರ

ಹಳೆ ಗಾದೆ- ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಹೊಸಗಾದೆ- ಗಂಡ ಹೆಂಡಿರ ಜಗಳ ಕೊಂದು ಮಲಗಿಸುವ ತನಕ

ಕೊಂದುಫ್ರಿಜ್ ನಲ್ಲಿ ಇಡುವ ಇವರಿಬ್ಬರ ನಡುವಿನ ಯುದ್ಧ
-ಕೋಲ್ಡ ವಾರ್
ಈ ರೀತಿಯ ಕೊಲೆಗಳಿಗೆ ಹೆಸರು
-‘ಕೋಲ್ಡ್’ ಬ್ಲಡೆಡ್ ಮರ್ಡರ್
ನಿಜವಾದ ರಸಿಕ ಅಂದ್ರೆ ಯಾರು?
-ಸನ್ನಿ ಲಿಯೋನ್ ಹಾಡುಗಳನ್ನು ಬರೀ ಕೇಳಿಯೂ ಖುಷಿ ಪಡೋನು
ಎಲೆಕ್ಷನ್ ಹಿಂದಿನ ದಿನ ಹಾಕಿಸುವ ಬಿರಿಯಾನಿ ಊಟ
-ಓಟ್ ಮೀಲ್ಸ್
ಚಳಿ ಕಚಗುಳಿ
ಸೋಮು- ಈ ಚಳಿಗೆ ನನ್ ಮೊಬೈಲ್ ಕೂಡಾ ನಡುಗ್ತಿದೆ
ಖೇಮು- ಓವರ್ ಆಕ್ಟಿಂಗ್ ಮಾಡ್ಬೇಡ, ಮುಚ್ಕೊಂಡ್ ವೈಬ್ರೇಷನ್ ಮೋಡ್ ಆಫ್ ಮಾಡು

ಕಲಿಯುಗದ ಜ್ಞಾನೋದಯ
ಅರ್ಧ ರಾತ್ರಿಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋದವನು – ಬುದ್ಧ
ಛಾ ಸಿಕ್ಕರೂ ಹೋಗದವನು – ಬುದ್ದು
ಬಿಜೆಪಿ ಮಂತ್ರ
ಮೋದಿ- ಭಾರತ ಗೋವುಗಳ ನಾಡು
ಬೊಮ್ಮಾಯಿ- ನಮ್ಮದು ‘ಕರು’ನಾಡು

error: Content is protected !!