Tuesday, 5th July 2022

ಶಿಮ್ಲಾ ನ್ಯಾಯಾಲಯಕ್ಕೆ ಪ್ರಕರಣಗಳ ವರ್ಗಾವಣೆಗೆ ಕಂಗನಾ ಅರ್ಜಿ

ನವದೆಹಲಿ: ಮುಂಬೈ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಾಣಾವತ್‌ ಹಾಗೂ ಸಹೋದರಿ ರಂಗೋಲಿ ಚಂದೇಲ್ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ವಕೀಲ ನೀರಜ್ ಶೇಖರ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆ ತಮ್ಮ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳನ್ನು ದಾಖಲಿಸಿದೆ. ಮುಂಬೈನಲ್ಲಿ ವಿಚಾರಣೆಗಳು ಮುಂದುವರಿದರೆ ತಮ್ಮ ಜೀವಕ್ಕೆ ಅಪಾಯ ವಿದೆ ಎಂದು ವಾದಿಸಿದರು.

ನಟಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ವೈ-ಪ್ಲಸ್ ಭದ್ರತೆ ನೀಡಿದೆ. ಪ್ರಕರಣಗಳನ್ನು ಮುಂಬೈ ನಿಂದ ವರ್ಗಾಯಿಸದಿದ್ದರೆ ಅವರ ಜೀವಕ್ಕೆ ಅಪಾಯವಿದೆ” ಅರ್ಜಿಯಲ್ಲಿ ತಿಳಿಸಲಾಗಿದೆ.