Thursday, 1st December 2022

ಪಂಜಾಬ್‌ನಲ್ಲಿ ನಟಿ ಕಂಗನಾ ಕಾರಿಗೆ ರೈತರಿಂದ ಮುತ್ತಿಗೆ

ಚಂಡಿಗಡ: ಶುಕ್ರವಾರ ಪಂಜಾಬ್‌ನ ಕಿರಾತ್‌ಪುರದಲ್ಲಿ ತಮ್ಮ ಕಾರನ್ನು ರೈತರು ಮುತ್ತಿಗೆ ಹಾಕಿದ್ದರು ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.

ನಟಿಯ ಕಾರನ್ನು ದೊಡ್ಡ ಸಂಖ್ಯೆಯಲ್ಲಿದ್ದ ರೈತರು ಸುತ್ತುವರೆದಿರುವುದನ್ನು ಆ ಪ್ರದೇಶದಲ್ಲಿನ ದೃಶ್ಯದಿಂದ ಕಂಡುಬಂದಿದೆ. ಜನಸಂದಣಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯೂ ಅಲ್ಲಿ ಕಂಡುಬರಲಿಲ್ಲ ಎಂದು ವರದಿಯಾಗಿದೆ.

ಚಂಡೀಗಢ-ಉನಾ ಹೆದ್ದಾರಿಯಲ್ಲಿರುವ ಕಿರಾತ್‌ಪುರ ಸಾಹಿಬ್‌ನ ಬುಂಗಾ ಸಾಹಿಬ್‌ನಲ್ಲಿ ಈ ಘಟನೆ ನಡೆದಿದೆ.

ಕಂಗನಾ ಕಾರಿನ ಮೇಲೆ ನಡೆದಿರುವ ದಾಳಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾ ಯತ್ ಹೇಳಿದ್ದಾರೆ. ಘಟನೆಯ ವಿವರಗಳನ್ನು ಪಡೆದ ನಂತರವೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ರೈತರ ಪ್ರತಿಭಟನೆ ಕುರಿತ ಪೋಸ್ಟ್‌ಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ನಟಿ ಕಂಗನಾ ಮಂಗಳ ವಾರ ಹೇಳಿದ್ದರು. ರಣಾವತ್ ಅವರು ರೈತರ ಚಳವಳಿಯ ವಿರುದ್ಧ ಟೀಕೆ ಮಾಡುತ್ತಾ ಬಂದಿದ್ದಾರೆ.