Wednesday, 5th October 2022

ದೀಪಿಕಾಗೆ ಕಂಗನಾ ಟ್ವೀಟ್ ತರಾಟೆ

ಮುಂಬೈ: ನಟಿ ದೀಪಿಕಾ ಪಡುಕೋಣೆಯ ಡ್ರಗ್ಸ್ ಕುರಿತ ಆನ್‍ಲೈನ್‍ ಚಾಟ್‍ ಹೆಚ್ಚು ವೈರಲ್ ಆಗುತ್ತಿದ್ದಂತೆ, ನಟಿ ಕಂಗನಾ ರಾಣಾವತ್ ಅವರು ದೀಪಿಕಾರ ಮಾನಸಿಕ ಸ್ಥಿತಿ ಕುರಿತು ಕಮೆಂಟ್ ಮಾಡಿದ್ದಾರೆ.

ಟ್ವೀಟರ್ ಖಾತೆಯಲ್ಲಿ, ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಕ್ಕಳು ತಮ್ಮ ಮ್ಯಾನೇಜರ್ ಗೆ ಡ್ರಗ್ಸ್ ಇದ್ಯಾ (ಮಾಲ್ ಹೈ ಕ್ಯಾ?) ಎಂದು ಡ್ರಗ್ಸ್ ಗಾಗಿ ಬೇಡಿಕೆ ಇಡುತ್ತಾರೆ ಎಂದು ದೀಪಿಕಾಳನ್ನು ಉದ್ದೇಶಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಕಳೆದ ಸೋಮವಾರ ರಾತ್ರಿ ‘ಕೆ’ ಎಂಬ ಹೆಸರಿನ ವ್ಯಕ್ತಿಯೊಂದಿಗೆ ದೀಪಿಕಾ ವಾಟ್ಸಾಪ್ ಚಾಟ್ ನಡೆದಿರುವುದು ಹೆಚ್ಚು ವೈರಲ್ ಆಗಿದ್ದು, ಎನ್ಸಿಬಿ ವಿಚಾರಣೆಗೆ ಸಮನ್ಸ್‌ ನೀಡುವ ಸಾಧ್ಯತೆ ಇದೆ.

’ಕ” ಎಂದರೆ ಕರಿಷ್ಮಾ ಪ್ರಕಾಶ್. ಇವರಿಗೆ ಈಗಾಗಲೇ ಎನ್‍‍ಸಿಬಿಯಿಂದ ಸಮನ್ಸ್ ಬಂದಿದೆ.