Friday, 2nd December 2022

ಎಫ್‌ಐಆರ್‌ ರದ್ದು ಮಾಡುವಂತೆ ಕಂಗನಾ ಹೈಕೋರ್ಟ್ ಮೊರೆ

Kangana Ranaut

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಣಾವತ್, ತನ್ನ ವಿರುದ್ಧದ ಎಫ್‌ಐಆರ್‌ ರದ್ದು ಮಾಡುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಕಂಗನಾ ಸಿಖ್‌ ಸಮುದಾಯವನ್ನು ಖಲಿಸ್ತಾನಿಗಳಿಗೆ ಹೋಲಿಕೆ ಮಾಡಿ ಮಾಡಿರುವ ಪೋಸ್ಟ್‌ಗೆ ವಿರುದ್ದವಾಗಿ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಕೋರಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇನ್ನು ವಕೀಲ ರಿಜ್ವಾನ್‌ ಸಿದ್ಧಿಕಿಯು ಕಂಗನಾ ಪರ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ನವೆಂಬರ್‌ 21 ರಂದು ನಾನು ಮಾಡಿದ ಪೋಸ್ಟ್‌ ವಿರುದ್ಧವಾಗಿ ಪ್ರಕರಣ ದಾಖಲು ಮಾಡಿರುವುದು ಅವಮಾನಕರ ಹಾಗೂ ಅನುಚಿತವಾಗಿದೆ,” ಎಂದು ಉಲ್ಲೇಖಿಸಿದ್ದಾರೆ.

ನಾನು ನನ್ನ ಮೂಲಭೂತ ಹಕ್ಕಾದ ವಾಕ್‌ ಸ್ವಾತಂತ್ರ್ಯ ಪ್ರಕಾರವಾಗಿ ಪೋಸ್ಟ್‌ ಮಾಡಿದ್ದ ಕ್ಕಾಗಿ ನನ್ನ ವಿರುದ್ಧ ದುರುದ್ದೇಶ ಪೂರ್ವವಾಗಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮುಂಬೈ ಪೊಲೀಸರ ಎಫ್‌ಐಆರ್‌ ಕುರಿತಾಗಿ ಕಂಗನಾ ಆರೋಪ ಮಾಡಿದ್ದಾರೆ.

ಅಪರಾಧ ಮಾಡುವ ಉದ್ದೇಶದಿಂದ ಯಾವುದೇ ಕೆಲಸ ಮಾಡುವುದು ಅಪರಾಧ ವಾಗುತ್ತದೆ. ಆದರೆ ನನ್ನ ಪ್ರಕರಣದಲ್ಲಿ ಅಪರಾಧ ಮಾಡುವ ಉದ್ದೇಶ ಎಲ್ಲೂ ಇಲ್ಲ ಎಂದಿದ್ದಾರೆ ಕಂಗನಾ.

ಮುಂಬೈನ ವಕೀಲರಾದ ಅಮರ್‌ಜೀತ್‌ ಸಿಂಗ್‌ ಕುಶ್ವಂತ್‌ಸಿಂಗ್‌ ಸಂಧು, ಮಂಜಿಂದರ್‌ ಸಿಂಗ್‌ ಸಿರ್ಸಾ ಹಾಗೂ ಜಸ್ಪಾಲ್‌ ಸಿಂಗ್‌ ಸಿದ್ಧು ಕಂಗನಾ ರಣಾವತ್‌ ವಿರುದ್ಧ ನೀಡಿರುವ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಎಫ್‌ಐಆರ್‌ ಅನ್ನು ದಾಖಲು ಮಾಡಿದ್ದಾರೆ.