Friday, 27th May 2022

ಮಾನಹಾನಿ ಪ್ರಕರಣ: ನಟಿ ಕಂಗನಾ ರಾಣಾವತ್‌’ಗೆ ನೋಟಿಸ್‌

ಮುಂಬೈ:‌ ಲೇಖಕ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಮುಂಬೈ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಕಂಗನಾ ಅವರಿಗೆ ಶುಕ್ರವಾರ ಜುಹು ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಟಿವಿ ಸಂದರ್ಶನ ಗಳಲ್ಲಿ ತನ್ನ ವಿರುದ್ಧ ಮಾನಹಾನಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆಕ್ಷೇಪಿಸಿರುವ ಅಖ್ತರ್‌ ಅವರು, ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಕಂಗನಾ ವಿರುದ್ಧ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾ ಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ್ ಸಿಂಗ್‌ ಪ್ರಕರಣದಲ್ಲಿ ಕಂಗನಾ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದರು ಹಾಗೂ ಹೃತಿಕ ರೋಷನ್‌ ಜತೆಗಿನ ಸಂಬಂಧ ಬಗ್ಗೆ ಮೌನವಾಗಿರಲು ಬೆದರಿಕೆ ಹಾಕಿದ್ದೇರೆಂದು ಸುಳ್ಳು ಆರೋಪ ಮಾಡಿದ್ದಾಗಿ ಅಖ್ತರ್ ದೂರಿನಲ್ಲಿ ತಿಳಿಸಿದ್ದಾರೆ.