Wednesday, 5th October 2022

ಕಂಗನಾಗೆ ಜೈ: ಬಿಎಂಸಿ ಕಾರ್ಯಾಚರಣೆಗೆ ತಡೆ

*ನಟಿ ಕಂಗನಾ ಮುಂಬೈ ಕಚೇರಿ ಕಟ್ಟಡ ಧ್ವಂಸ: ಬಾಂಬೆ ‘ಹೈ’ ತಡೆಯಾಜ್ಞೆ

ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಸೇರಿದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನಟಿ ಕಂಗನಾ ರಾಣಾವತ್ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುವ ಮುನ್ನವೇ ಕಟ್ಟಡ ಧ್ವಂಸದ ಬಗ್ಗೆ ಬಿಎಂಸಿ ನೋಟಿಸ್ ಜಾರಿಗೊಳಿಸಿತ್ತು. ಬೆಳಗ್ಗೆ ಕಂಗನಾ ಪರ ವಕೀಲ ಬಾಂಬೆ ಹೈಕೋರ್ಟ್ ಗೆ ಬಿಎಂಸಿ ಕಾರ್ಯಾಚರಣೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಎಂಸಿ ಕಾರ್ಯಾಚರಣೆಗೆ ತಡೆ ನೀಡಿದ್ದು, ನಾಳೆ ಮಧ್ಯಾಹ್ನ 3ಗಂಟೆಗೆ ವಿಚಾರಣೆ ಮುಂದೂಡಿದೆ ಎಂದು ತಿಳಿಸಿದೆ.

ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮುಂಬೈಗೆ ಆಗಮಿಸಿದ್ದು, ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿತ್ತು.  ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿರುವ ನಟಿ ಕಂಗನಾ ರನೌತ್ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಒಡೆಯು ತ್ತಿರುವುದಾಗಿ ಕಂಗನಾ ಟ್ವೀಟ್ ನಲ್ಲಿ ತಿಳಿಸಿದ್ದರು. ಮುಂಬೈ ಯಾರ ಆಸ್ತಿ ಎಂದು ಕಂಗನಾ ಮತ್ತೊಮ್ಮೆ ಕಿಡಿಕಾರಿದ್ದರು.