Friday, 7th May 2021

ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಖ್ಯಾತಿಯ, ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಪತಿ ರಾಮು(52) ಕರೋನಾ ವೈರಸ್ ಸೋಂಕು ತಗುಲಿ ನಿಧನರಾದರು.

ಒಂದು ವಾರದ ಹಿಂದೆ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಉಸಿರಾಟದ ಸಮಸ್ಯೆಗೂ ಒಳಗಾಗಿದ್ದರು. ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಅಸುನೀಗಿದ್ದಾರೆ.

‘ರಾಜಕೀಯ’ ಸಿನಿಮಾ ಮೂಲಕ ನಿರ್ಮಾಪಕರಾದ ಅವರು ಗೋಲಿಬಾರ್, ಲಾಕಪ್​ ಡೆತ್ ಚಿತ್ರಗಳ ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. ಕಲಾಸಿಪಾಳ್ಯ, ಸಿಬಿಐ ದುರ್ಗಾ, ಎಕೆ-47, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಪ್ರಜ್ವಲ್​ ದೇವರಾಜ್​ ಅಭಿನಯದ ‘ಅರ್ಜುನ್​ ಗೌಡ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *