Friday, 24th March 2023

ಅದ್ದೂರಿಯಾಗಿ ಬರಲಿದೆ ಕಾಂತಾರ

ಹೊಂಬಾಳೆ ಫಿಲಂಸ್ ನಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಸಿನಿಮಾ ಕಾಂತಾರಾ ತೆರೆಗೆ ಸಿದ್ಧವಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ದಕ್ಷಿಣ ಕನ್ನಡದ ಜಾನಪದ ಕಲೆಯ ದಂತಕತೆಯೇ ಅಡಕವಾಗಿದೆ. ಹಾಗಾಗಿ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

ಈಗಾಗಲೇ ಬಿಡುಗಡೆಯಾಗಿರುವ ಕಾಂತಾರ ಚಿತ್ರದ ಟ್ರೇಲರ್ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದ್ದು , ಚಿತ್ರದ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ. ಇದೇ 30 ರಂದು ಕಾಂತಾರ ಅದ್ದೂರಿಯಾಗಿ ತೆರೆಗೆ ಬರಲಿದೆ. ರಾಜ್ಯ ಮಾತ್ರವಲ್ಲ ವಿದೇಶ ಗಳಲ್ಲಿಯೂ ಕಾಂತಾರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಿಷಬ್ ಹಿಂದೆಂದು ಕಾಣದ ವಿಭಿನ್ನ ಗೆಟಪ್ ನಲ್ಲಿ ಕಂಗೊಳಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ.

ಬಹುಭಾಷಾ ನಟ ಕಿಶೋರ್ ಈ ಚಿತ್ರದಲ್ಲಿ ಅರಣ್ಯಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತುಳುನಾಡಲ್ಲಿ ಸಪ್ತಮಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಮನಸೂರೆಗೊಂಡ ನಟಿ ಸಪ್ತಮಿ ಗೌಡ, ಕಾಂತಾರ ಚಿತ್ರದಲ್ಲಿ ರಿಷಬ್ ಗೆ ಜತೆಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಸಪ್ತಮಿಗೆ ಸಂತಸ ತಂದಿದೆಯಂತೆ.

ಈ ಚಿತ್ರದಲ್ಲಿ ನನಗೆ ಚಾಲೆಂಜಿಂಗ್ ಪಾತ್ರವೇ ಸಿಕ್ಕಿದೆ. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದೆ. ಒಂದಷ್ಟು ಸಿನಿಮಾಗಳನ್ನು ನೋಡಿದೆ. ಜತೆಗೆ ಈ ಸಿನಿಮಾಗಾಗಿ ತುಳು ಭಾಷೆಯನ್ನು ಕಲಿತಿದ್ದೇನೆ. ಮೀನು ಸಾಂಬಾರ್ ಮಾಡುವುದನ್ನು ಕಲಿತು ಕೊಂಡಿದ್ದೇನೆ ಎಂದು ಸಪ್ತಮಿ ಸಂತಸದಿಂದ ನುಡಿಯುತ್ತಾರೆ.

error: Content is protected !!