Sunday, 27th November 2022

ಬಿಡದಂತೆ ಕಾಡುವ ಕಪಾಲ

ವಿನಯ್ ವಿದುನಂದನ್ ನಿರ್ದೇಶನದ ಕುತೂಹಲಕರ ಹಾರರ್, ಥ್ರಿಲ್ಲರ್ ಕಥಾಹಂದರದ ಕಪಾಲ ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಈಗಾಗಲೇ ಬಿಡುಗಡೆ ಯಾಗಿರುವ ಟ್ರೇಲರ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.

ಅಭಿಮನ್ಯು ಪ್ರಜ್ವಲ್, ಪ್ರತೀಕ್ಷಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಅನಿವಾಸಿ ಕನ್ನಡತಿ ಸೌಮ್ಯಾ.ಕೆ. ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಕಪಾಲ ಟೈಟಲ್ ಕೇಳಿದಾಕ್ಷಣ ಇದು ಥ್ರಿಲ್ಲರ್ ಕಥೆಯ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಅಂತೆಯೇ ಚಿತ್ರದಲ್ಲಿ ಹಾರರ್ ಕಥೆಯೂ ಬೆರೆತಿದೆ. ಒಂಟಿಯಾಗಿರುವ ದೊಡ್ಡ ಮನೆಯಲ್ಲಿ ತಂಗುವ ನಾಯಕ. ಆತನನ್ನು ಬಿಡದೆ ಕಾಡುವ ನಿಗೂಢ ಘಟನೆಗಳು. ಹೀಗೆ ಕಾಡುವ ಅಚ್ಚರಿಯ ಸಂಗತಿಗಳಿಗೂ, ನಾಯಕ ನಿಗೂ ಏನು ಸಂಬಂಧ, ಈ ಸಂದಿಗ್ಧ ಸ್ಥಿತಿಯಿಂದ ನಾಯಕ ಹೇಗೆ ಪಾರಾಗುತ್ತಾನೆ.

ಎಂಬುದನ್ನು ಚಿತ್ರದಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ನಾಯಕನಾಗಿ ಅಭಿಮನ್ಯು ಪ್ರಜ್ವಲ್ ನಟಿಸಿದ್ದಾರೆ. ಇದು ಬರೀ ಹಾರರ್ ಕಥೆಯಲ್ಲ. ಒಳ್ಳೆಯ ಲವ್ ಸ್ಟೋರಿ ಕೂಡ ಚಿತ್ರ ದಲ್ಲಿದೆ. ಸಂಪೂರ್ಣ ಮನರಂಜನೆ ನೀಡುವ ಚಿತ್ರವಿದು. ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆ ಇಲ್ಲಿದೆ. ಅದು ಈಗಿನ ಕಾಲದ ಯುವಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ನಾನು ಟಿವಿ ಛಾಯಾಗ್ರಹಕನ ಪಾತ್ರ ಮಾಡಿದ್ದೇನೆ ಎನ್ನುತ್ತಾರೆ ಅಭಿಮನ್ಯು.

ಯಮುನಾ ಶ್ರೀನಿಧಿ ಹಾಗೂ ಪ್ರತೀಕ್ಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರತೀಕ್ಷಾ ನಿರೂಪಕಿಯ ಪಾತ್ರದಲ್ಲಿ ಬಣ್ಣ ಹಚ್ಚಿದರೆ, ಯಮುನಾ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಪಾಲ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ರಿಲೀಸ್
ಆಗುತ್ತಿದೆ.

ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಇಂದಿನ ಟ್ರೆಂಡ್‌ಗೆ ತಕ್ಕಂತೆ ಚಿತ್ರವೊಂದನ್ನು ನಿರ್ದೇಶಿಸಬೇಕು ಎಂಬ ಆಸೆಯಿತ್ತು. ಅಂತೆಯೇ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ದಶಕಗಳ ಹಿಂದೆ ನಡೆದ ಘಟನೆಯೊಂದು ಇಂದಿನ
ಯುವಜನಾಂ ಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.ಅದಕ್ಕೆ
ಥ್ರಿಲ್ಲರ್, ಹಾರರ್ ಅಂಶಗಳನ್ನು ಬೆರೆಸಿ ತೆರೆಗೆ ತರಲಾಗಿದೆ.
-ವಿನಯ್ ವಿದುನಂದನ್ ನಿರ್ದೇಶಕ