Thursday, 23rd March 2023

ಕಪಿಲೆ ಹರಿದಳು ಕಡಲಿಗೆ

* ಎಂ.ಎಸ್.ವೆಂಕಟರಾಮಯ್ಯ 94481 68097

ಕನ್ನಡದ ಹೆಸರಾಂತ ವಾಗ್ಮಿಿಗಳೂ, ಪಾಂಡಿತ್ಯಪೂರ್ಣ ಹಾಗೂ ಚಿತ್ತಾಾಕರ್ಷಕ ಭಾಷಣಕಾರರೂ ಆದ ಪ್ರೊೊ. ಮಲೆಯೂರು ಗುರುಸ್ವಾಾಮಿಯವರು ರಚಿಸಿರುವ ‘ಕಪಿಲೆ ಹರಿದಳು ಕಡಲಿಗೆ’ (2017) ಕಾದಂಬರಿಯು, ಒಂದೆಡೆ ದುರಂತನಾಯಕಿಯ ಚಿತ್ರಣ ಎನಿಸಿದರೆ, ಇನ್ನೊೊಂಡೆದೆ ಜೀವನ ಚರಿತ್ರೆೆಯಾಗಿ ಅಸಾಮಾನ್ಯ ಕೃತಿ ಎನಿಸುತ್ತದೆ. ಕಪಿಲೆಯು ನಂಜನಗೂಡಿನ ಮೂಲಕ ಹರಿದು, ಕಾವೇರಿ ನದಿ ಸೇರಿ, ಅಂದಿನ ಮೈಸೂರು ಪ್ರಾಾಂತ್ಯ ಮತ್ತು ಮದರಾಸ್ ಪ್ರೆೆಸಿಡೆನ್ಸಿಿಗಳಲ್ಲಿ ಹರಿದು, ಸಮುದ್ರ ಸೇರುವಂತೆಯೇ ಕಥಾನಾಯಕಿ ಬೆಂಗಳೂರು ನಾಗರತ್ನಮ್ಮ ನಂಜನಗೂಡಿನಲ್ಲಿ ಹುಟ್ಟಿಿ, ಮೈಸೂರು ಬೆಂಗಳೂರುಗಳಲ್ಲಿ ವಾಸಿಸಿ, ಮದ್ರಾಾಸಿನಲ್ಲಿ ನೆಲೆನಿಂತು, ಕೊನೆಗೆ ತಂಜಾವೂರು ಬಳಿಯ ತಿರುವಾಯೂರಿನಲ್ಲಿ (19.5.1952) ತಮ್ಮ ಯಾತ್ರೆೆ ಮುಗಿಸುತ್ತಾಾರೆ.ಈ ಕೃತಿ ಆ ಕಾಲದಲ್ಲಿ ನಂಜನಗೂಡು, ಮೈಸೂರು, ಬೆಂಗಳೂರುಗಳು ಹೇಗಿದ್ದವು ಎಂಬುದರ ಚಿತ್ರಣ ನೀಡುತ್ತದೆ.

ಕಾದಂಬರಿಯ ಒಂದು ಪಾತ್ರವಾಗಿ ಬರುವ ಜಮೀನ್ದಾಾರ್ ಸರಸ್ವತಿದೇವಿ ಹೇಳುವಂತೆ ಕಥಾನಾಯಕಿ ಬೆಂಗಳೂರು ನಾಗರತ್ನಮ್ಮ ಅಲಿಯಾಸ್ ನಾಗರತ್ನಮ್ಮಾಾಳ್, ಎಲ್ಲೆೆಗಳೇ ಇಲ್ಲದ ಸಂಗೀತ ಸಾಮ್ರಾಾಜ್ಯದ ಒಡತಿ. ಲೇಖಕ ಮಲೆಯೂರು ಗುರುಸ್ವಾಾಮಿ ಅವರು ದೇವದಾಸಿ ಸಮುದಾಯದ ಮೂಲದ ಬಗ್ಗೆೆ ಬೆಳಕು ಚೆಲ್ಲಿದ್ದಾರೆ. ಜನಸಾಮಾನ್ಯರು ಮೂಗು ಮುರಿಯುವ ಈ ಸಮುದಾಯ, ರಾಜರುಗಳ ಕಾಲದಲ್ಲಿ ವಿವಿಧ ವರ್ಗ, ಜಾತಿಗಳ, ಕುಟುಂಬಗಳಲ್ಲಿನ ಸುಂದರ ಹಾಗೂ ಕಲಾ ಪ್ರತಿಭೆಯುಳ್ಳ ಯುವತಿಯರನ್ನು ಕಲಾ ಪ್ರದರ್ಶನಕ್ಕಾಾಗಿ, ರಾಜರ ಮನೋರಂಜನೆಗಾಗಿ ಅರಮನೆಗೆ ಸೇರಿಸಿಕೊಳ್ಳುತ್ತಿಿದ್ದರು ವಾಡಿಕೆಯಾಗಿತ್ತು. ಮುಂದೆ ರಾಜರ ಆಳ್ವಿಿಕೆ ಕೊನೆಗೊಂಡ ನಂತರ, ದೇವಸ್ಥಾಾನಗಳಲ್ಲಿ ದೇವರ ಸೇವೆ ಎಂಬ ನೃತ್ಯ ಮಾಡಲು, ದೀಪಧಾರಿಣಿಯರಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿಿತ್ತು. ದೇವದಾಸಿಯರು ಸಾಮಾನ್ಯ ರೀತಿ ಮದುವೆ ಆಗುವಂತಿರಲಿಲ್ಲ. ಅವರು ಗಣ್ಯರ ಅನಧಿಕೃತ ಉಪಪತ್ನಿಿಯಾಗಿಯೋ ಬಾಳುವೆ ಸವೆಸುತ್ತಿಿದ್ದರು. ಗೌರಿಘಟ್ಟದ ರಸ್ತೆೆಯ ಪುಟ್ಟಲಕ್ಷ್ಮಮ್ಮ ಸುಬ್ಬರಾಯರು ಉಪಪತ್ನಿಿ ಆದದ್ದು ಹೀಗೆ.

 

ನಂಜನಗೂಡಿನ ಪುಟ್ಟಲಕ್ಷ್ಮಮ್ಮನವರ ಮಗಳು ರತ್ನಳ ಪ್ರವೇಶದಿಂದ ನಾಗರತ್ನಮ್ಮನವರ ಅಂತ್ಯದವರೆಗೆ, ನಾಗರತ್ನಮ್ಮ ಓದುಗರನ್ನು ಆವರಿಸಿಕೊಂಡಿರುತ್ತಾಾರೆ. ರತ್ನಳ ಬಾಳು ಹಸನಾಗುವ ಸುವರ್ಣವಕಾಶ ಮೊದಲು ತಪ್ಪಿಿದ್ದು, ಆಕೆಗೆ ಜನ್ಮ ಕೊಟ್ಟ ವಕೀಲ ಸುಬ್ಬರಾಯರಿಂದಲೇ. ದೇವದಾಸಿ ಸಮುದಾಯದ ಪುಟ್ಟಲಕ್ಷ್ಮಮ್ಮ ನವರನ್ನು ಪ್ರೀತಿಸಿ ತಮ್ಮ ಉಪಪತ್ನಿಿಯಾಗಿ ಹೊಂದಿದ ಸುಬ್ಬರಾಯರು ಆರ್ಥಿಕವಾಗಿ ರತ್ನಳಿಗೆ ನೆರವಾದರೂ, ಆದರೆ ಸಾಮಾಜಿಕವಾಗಿ ಅವಳನ್ನು ಕೈಬಿಟ್ಟರು. ಮಗುವನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ತಂದೆಯ ಹೆಸರನ್ನು ಸುಬ್ಬರಾಯರು ಎಂದು ದಾಖಲಿಸಿದ್ದರೆ ರತ್ನಾಾಳ ಬದುಕಿಗೆ ನೆಲೆ ಒದಗಿಸಿದಂತಾಗುತ್ತದೆ. ಅವಳಿಗೆ ದೇವದಾಸಿ ಸಮುದಾಯದ ಹಣೆಪಟ್ಟಿಿ ಕಳೆದಿರತ್ತಿಿತ್ತು. ಕಥೆಯು ಮುಂದುವರಿದಂತೆ ಮದ್ರಾಾಸಿನಲ್ಲಿದ್ದಾಗ ಅತ್ಯಂತ ಪ್ರಭಾವಶಾಲಿ ಲೇಖಕರು ದೇವದಾಸಿ ಸಮುದಾಯದ ಬಗ್ಗೆೆ ಅವಹೇಳನ ಮಾಡುವ, ಅದಕ್ಕೆೆ ಪ್ರತಿಯಾಗಿ ನಾಗರತ್ನಮ್ಮ ದೇವದಾಸಿಯರ ಪರವಾಗಿ ಕೋರ್ಟ್ ಮೆಟ್ಟಿಿಲೇರುವ ಪರಿಸ್ಥಿಿತಿ, ಸೋಲು, ಅವಮಾನ ಎಲ್ಲವೂ ತಪ್ಪುುತ್ತಿಿತ್ತು.

ನಾಗರತ್ನಮ್ಮನವರ ಅದೃಷ್ಟ ವೆಂದರೆ, ಆಕೆ ಬಾಲ್ಯದಿಂದ ಮದ್ರಾಾಸ್ ವಾಸ್ತವ್ಯದ ವರೆಗೆ ಉತ್ತಮ ಗುರುಗಳಲ್ಲಿ ಸಂಗೀತಾಭ್ಯಾಾಸ, ಭಾಷಾಭ್ಯಾಾಸ, ವಿದ್ಯಾಾಭ್ಯಾಾಸ ಮಾಡಲು ಸಾಧ್ಯವಾದದ್ದು. ನಂಜನಗೂಡಿನ ಚಿಕ್ಕಲಿಂಗಯ್ಯ, ಮೈಸೂರಿನ ಗಿರಿಭಟ್ಟರ ತಮ್ಮಯ್ಯ, ಬಿಡಾರಂ ಕೃಷ್ಣಪ್ಪನವರು, ಬೆಂಗಳೂರಿನ ಮುನಿಸ್ವಾಾಮಪ್ಪ, ಮದ್ರಾಾಸಿನ ನಾಟ್ಯಾಾಚಾರ್ಯ ವೆಂಕಟಾಚಾರ್ಯ ಮೊದಲಾದವರು,ನಾಗರತ್ನಮ್ಮನವರನ್ನು ವಿದ್ಯಾಾ ಸುಂದರಿಯಾಗಿಸುವಲ್ಲಿ ಆಕೆ ‘ತ್ಯಾಾಗರತ್ನ’ ಎನಿಸಿಕೊಳ್ಳುವಲ್ಲಿ ಶಿಕ್ಷಣ ನೀಡಿದ ಮಹಾನುಭಾವರು.

ಅನೇಕಾನೇಕ ಚಾರಿತ್ರಿಿಕ ಘಟನೆಗಳು ನಾಗರತ್ನಮ್ಮನವರ ಜೀವಿತಾವಧಿಯಲ್ಲಿ ನಡೆದುಹೋಗುತ್ತವೆ. ಅವರಿನ್ನೂ ಬಾಲೆಯಾಗಿ ಮೈಸೂರಿಗೆ ಬಂದು ಸಂಗೀತಾಭ್ಯಾಾಸದಲ್ಲಿ ಇದ್ದಾಗಲೇ ಮಹಾರಾಜರು ಚಾಮರಾಜ ಒಡೆಯರು ಕೊಲ್ಕೋೋತಾ ಪ್ರವಾಸದಲ್ಲಿದ್ದಾಗ ಕಾಲದಲ್ಲಿ ಡಿಫ್ತೀರಿಯಾದಿಂದಾಗಿ ನಿಧನರಾದರು. ಬೆಂಗಳೂರಿನ ವಾಸ್ತವ್ಯದ ದಿನಗಳಲ್ಲಿ ನಾಗರತ್ನಮ್ಮನವರನ್ನು ಅತಿಯಾಗಿ ಹಚ್ಚಿಿಕೊಂಡಿದ್ದ ಆಶ್ರಯದಾತ ಎನಿಸಿದ್ದ ಜಸ್ಟಿಿಸ್ ನರಹರಿ ರಾವ್ ಅವರ ಮೇಲಿನ ಒಲವನ್ನು ಅತಿರೇಕದ ಅನಿಸುವಷ್ಟು ಬಳಸಿಕೊಂಡರೂ, ಕತೆಯಲ್ಲಿ ಎಲ್ಲಿಯೂ ಅಶ್ಲೀಲ ಎನಿಸುವಂಥದ್ದು ಕಾಣಬರುವುದಿಲ್ಲ.

ನಾಗರತ್ನಮ್ಮ ನವರಿಂದ ನಡೆಸಲ್ಪಟ್ಟ ಸತ್ಕಾಾರ್ಯಗಳು ಅನೇಕ. ಮೇಲುಕೋಟೆಯಲ್ಲಿ ಯಾತ್ರಿಿಕರಿಗಾಗಿ ಮಂಟಪ ನಿರ್ಮಾಣ, ಮೈಸೂರಿನಲ್ಲಿ ಬಿಡಾರಂ ಕೃಷ್ಣಪ್ಪ ರಾಮಮಂದಿರ ನಿರ್ಮಾಣ, ತಿರುವಾರೂರಿನಲ್ಲಿ ತ್ಯಾಾಗರಾಜ ಭಾಗವತರ ಸಮಾಧಿ ಪುನರುಜ್ಜೀವನ ಹಾಗೂ ನೂತನ ಮಂಟಪ ನಿರ್ಮಾಣ ಮುಂತಾದವು ಅವರ ಹೆಸರನ್ನು ಚಿರಸ್ಥಾಾಯಿಯಾಗಿಸಿವೆ.

ಸಂಗೀತ ನೃತ್ಯಗಳಲ್ಲಿ ಖ್ಯಾಾತಿಯೇ ಮಾಹಿತಿ ಬಂದಂತಹ ನಾಗರತ್ನಮ್ಮ ಅವರಿಗೆ ಕೆಲವು ಅಹಿತಕರ ಘಟನೆಗಳು ಉತ್ಸಾಾಹ ಹಾಗೂ ಮನೋಸ್ಥೈರ್ಯವನ್ನು ಕುಗ್ಗಿಿಸಿ ಬಿಡುತ್ತದೆ. ಮನೆಯಲ್ಲಿ ಸಾಕಿಕೊಂಡ ಶಾರದಾ ಮುಗ್ಧಳಾದರೂ, ಅವಳ ತಂದೆ ತಾಯಿ ಆಸ್ತಿಿ ಲಪಟಾಯಿಸಲು ನಾಗರತ್ನಮ್ಮನವರಿಗೆ ವಿಷಪ್ರಾಾಶನ ಮಾಡಲು ಪ್ರಯತ್ನಿಿಸುವುದು ಉಂಡ ಮನೆಗೆ ದ್ರೋಹ ಬಗೆವುದನ್ನು ನೆನಪಿಸುತ್ತದೆ. ದೇವದಾಸಿ ಸಮುದಾಯವೆಂಬ ಕಾರಣದಿಂದ, ಜನರು ತಿರುವಾಯೂರಲ್ಲಿ ನಾಗರತ್ನಮ್ಮನವರನ್ನು ಅವಮಾನಿಸುತ್ತಾಾರೆ. ಕಚೇರಿಗಳಲ್ಲಿ ಯಾವಾಗಲೂ ಜೊತೆ ಇರುತ್ತಿಿದ್ದ ಪಕ್ಕದವರು ಸಹ ಅವರಿಂದ ದೂರ ಹೋಗುತ್ತಾಾರೆ. ತ್ಯಾಾಗರಾಜರ ಸಮಾಧಿಯ ಸುತ್ತ ಹಾಕಿದ್ದ ಚಪ್ಪರಕ್ಕೆೆ ಬೆಂಕಿ ಹಚ್ಚುತ್ತಾಾರೆ. ರಾಷ್ಟ್ರೀಯ ಆಂದೋಲನೋಪಾದಿಯಲ್ಲಿ, ದೇವದಾಸಿಯರನ್ನು ದೇವಸ್ಥಾಾನಗಳಿಂದ ಹೊರಹಾಕುವ, ಅವರ ಉದ್ಧಾಾರದ ಸೋಗಿನಲ್ಲಿ ಅಬಲೆಯರನ್ನಾಾಗಿಸುವ, ಕೀಳಾಗಿ ಕಾಣುವ ಪ್ರಯತ್ನಗಳು ನಾಗರತ್ನಮ್ಮನವರನ್ನು ಜರ್ಜರಿತ ಗೊಳಿಸುತ್ತವೆ.

ನಾಗರತ್ನಮ್ಮನವರು ಬನ್ನಿಿ ಬಾಯಿ ರಾಮಚಂದ್ರರಾವ್ ಎಂಬವರ ಆಶ್ರಯದಲ್ಲಿ ಸುಖವಾದ ಜೀವನ ನಡೆಸುತ್ತಿಿದ್ದರೂ ಸದಾಕಾಲ ನಾಗರತ್ನಮ್ಮರ ನೆರಳಿನಂತೆ ಸೇವೆಯಲ್ಲಿ ತೊಡಗಿರುತ್ತಾಾರೆ. ಅವರು ತಿರುವಯ್ಯಾಾರಿನಲ್ಲಿ ನಾಗರತ್ನಮ್ಮ ಅವರಿಗೆ ಪರಿಚಯ ದೇವದಾಸಿ ಸಮುದಾಯದ ಯುವ ಸಂಗೀತಗಾರರ್ತಿ ಎಂ.ಎಸ್.ಸುಬ್ಬಲಕ್ಷ್ಮಿಿಯವರು -ಮುಂದೆ ಅವರು ಸದಾಶಿವ ಅಯ್ಯರ್ ಅವರ ಪತ್ನಿಿಯಾಗಿ ಸಂಗೀತ ಸಾಮ್ರಾಾಜ್ಞಿಿಯಾಗಿ, ಅಂತಾರಾಷ್ಟ್ರೀಯ ಖ್ಯಾಾತಿಯ ಕರ್ನಾಟಕ ಸಂಗೀತದ ದಂತಕತೆಯಾದದ್ದು ಎಲ್ಲರಿಗೂ ತಿಳಿದ ವಿಷಯ. ಜಸ್ಟಿಿಸ್ ನರಹರಿ ರಾಯರು ನಾಗರತ್ನಮ್ಮನವರಿಗೆ ಬಾಲು ಕೊಡುವ ಸಾಧ್ಯತೆಯನ್ನು ಯೋಚಿಸಲಿಲ್ಲ. ಹಾಗೆ ಮಾಡಿದ್ದರೆ, ನಾಗರತ್ನಮ್ಮನವರು ಮನೋಕ್ಲೇಷ ಉಂಟಾಗುವ ಸನ್ನಿಿವೇಶಗಳಿಂದ ದೂರವಿರಲು ಸಾಧ್ಯವಿತ್ತು. ‘ಕಪಿಲೆ ಹರಿದಳು ಕಡಲಿಗೆ’ ಕಾದಂಬರಿ ಮನೋಲ್ಲಾಾಸ ಹಾಗೂ ಮನಕಲಕುವ ಸನ್ನಿಿವೇಶಗಳ ಯಥಾವತ್ ಚಿತ್ರಣವಾಗಿ ಮನಸ್ಸಿಿನಲ್ಲಿ ಬಹಳ ಕಾಲ ಉಳಿಯುತ್ತದೆ.

error: Content is protected !!