Sunday, 17th October 2021

ಸೆನ್ಸಾರ್ ಮುಗಿಸಿದ ಕಪೋ ಕಲ್ಪಿತಂ

ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಕಪೋ ಕಲ್ಪಿತಂ’ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ.

ಚಿತ್ರದ ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ, ಅದಕ್ಕೆ ಮತ್ತಷ್ಟು ವಿಚಾರ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಅದನ್ನೇ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಯುವಕರ ತಂಡವೊಂದು ಪ್ರವಾಸಕ್ಕಾಗಿ ದೂರದ ಊರಿಗೆ ತೆರಳುತ್ತಾರೆ. ಅಲ್ಲಿ ಒಂಟಿ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಆ ಮನೆಯಲ್ಲಿ ದೆವ್ವ, ಭೂತದ ಕಾಟ ಆರಂಭವಾಗುತ್ತದೆ. ಅದರಿಂದ ಹೇಗೆ ತಪ್ಪಿಸಿಕೊಂಡು ಪಾರಾಗುತ್ತಾರೆ ಎಂಬುದೇ ಚಿತ್ರದ ಸಾರಾಂಶವಾಗಿದೆ.

ಸಮಿತ್ರಾ ರಮೇಶ್‌ಗೌಡ ಕಥೆ , ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಜತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದ, ಪ್ರೀತಮ್ ಮಕ್ಕಿಹಾಲಿ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಆ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 

Leave a Reply

Your email address will not be published. Required fields are marked *