Friday, 24th September 2021

ಎಬಿವಿಪಿ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.

ಮಾಜಿ ಯೋಧ ಮತ್ತು ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ ಮಾತನಾಡಿ ಸೈನಿಕರ ಬಲಿದಾನ ಮತ್ತು ಕರ್ತವ್ಯ ನಿಷ್ಠೆಯಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ದೇಶದಲ್ಲಿ ಯುದ್ದ, ಭೂಕಂಪ, ಕ್ಷಾಮ, ಬರಗಾಲ, ಪ್ರವಾಹ ಮುಂತಾದ ಯಾವುದೇ ತೊಂದರೆಗಳು ಎದುರಾದರೂ ಸೈನಿಕರು ತಕ್ಷಣ ಕಾರ್ಯ ಪ್ರವೃತ್ತರಾಗುತ್ತಾರೆ. ದೇಶವನ್ನು ಶತ್ರುಗಳಿಂದ ರಕ್ಷಿಸುವುದರ ಜೊತೆಗೆ ದೇಶದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ನಮಗಾಗಿ ತ್ಯಾಗ ಬಲಿದಾನಗಳನ್ನು ಮಾಡಿರುವ ಸೈನಿಕರ ಸೇವೆಯನ್ನು ನಾವು ಸದಾ ಸ್ಮರಿಸಬೇಕು ಮತ್ತು ಸೈನಿಕರನ್ನು ಗೌರವಿಸಬೇಕು ಎಂದು ತಿಳಿಸಿದರು.

ನಿವೃತ್ತ ಯೋಧರಾದ ಶಿವರಾಜು, ಓಂಕಾರಮೂರ್ತಿ, ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಶಿವಾನಂದ್, ಉಪನ್ಯಾಸಕ ಧನಂಜಯ್ ಮೂರ್ತಿ, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕುಮಾರ್ ಹಾಗು ಇತರರಿದ್ದರು.

Leave a Reply

Your email address will not be published. Required fields are marked *