Indigo Flights: ಇಂದು ಕೂಡ ಬೆಂಗಳೂರಿನಲ್ಲಿ 121 ಇಂಡಿಗೋ ವಿಮಾನ ರದ್ದು, ಹೋಟೆಲ್‌ಗಳ ದರ ಏರಿಕೆ
ಕಳೆದ ಒಂದು ವಾರದಿಂದ ಇಂಡಿಗೋ ವಿಮಾನಯಾನ ಸಂಸ್ಥೆ (Indigo Flights) ಸಾವಿರಾರು ಫ್ಲೈಟ್‌ಗಳು ರದ್ದು, ವಿಳಂಬ, ಮಾರ್ಗ ಬದಲಾವಣೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ಸಮಸ್ಯೆಯಿಂದ ಲಕ್ಷಾಂತರ ಪ್ರಯಾಣಿಕರು ದೇಶದಾದ್ಯಂತ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಪ್ರಯಾಣಿಕರು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.
ಇಂಡಿಗೋ ವಿಮಾನ ವ್ಯತ್ಯಯ -
ಬೆಂಗಳೂರು, ಡಿ.09 : ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ (Indigo Flights cancellation) ಉಂಟಾಗಿ ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು ಇಂದು ಕೂಡ ಬೆಂಗಳೂರಿನ ದೇವನಹಳ್ಳಿಯ (Kempegowda airport) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 121 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ವಿಮಾನ ರದ್ದು ಬಗ್ಗೆ ಸಂಸ್ಥೆ ಮುಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ನೀಡಿದೆ.
ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ ಹಾಗು ಅಮೃತಸರಕ್ಕೆ ತರಬೇಕಿದ್ದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಪ್ರಯಾಣಿಕರಿಗೆ ಮೊದಲೇ ಸಂದೇಶ ರವಾನಿಸಿದ್ದರಿಂದ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.
ಕಳೆದ ಒಂದು ವಾರದಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಸಾವಿರಾರು ಫ್ಲೈಟ್‌ಗಳು ರದ್ದು, ವಿಳಂಬ, ಮಾರ್ಗ ಬದಲಾವಣೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ಸಮಸ್ಯೆಯಿಂದ ಲಕ್ಷಾಂತರ ಪ್ರಯಾಣಿಕರು ದೇಶದಾದ್ಯಂತ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಪ್ರಯಾಣಿಕರು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ.
6 ೇ ದಿನವೂ ಮುಂದುವರಿದ ಇಂಡಿಗೋ ಸಮಸ್ಯೆ; 650 ವಿಮಾನ ಹಾರಾಟ ರದ್ದು
ಹೋಟೆಲ್‌ಗಳ ದರ ಏರಿಕೆ
ಈ ಸಂಕಷ್ಟದ ಮಧ್ಯೆ ದೊಡ್ಡ ನಗರಗಳ ಪಂಚತಾರಾ ಹೋಟೆಲ್‌ಗಳ ಮೇಲೆ ಭಾರೀ ಒತ್ತಡ ತಂದಿದ್ದು, ರೂಮ್ಗಳ ದರಗಳು ಒಂದೇ ರಾತ್ರಿಯಲ್ಲಿ 60 ರಿಂದ 70% ಏರಿಕೆಯಾಗಿ ಆಕಾಶಕ್ಕೇರಿವೆ. ಎಲ್ಲಾ ಪ್ರಮುಖ ನಗರಗಳಲ್ಲಿ ಹೋಟೆಲ್ ದರಗಳು ದುಬಾರಿಯಾಗಿದೆ. ₹12 ರಿಂದ 15 ಸಾವಿರದ ರೂಮ್ ಇವತ್ತು ₹45-55 ಸಾವಿರ ಆಗಿದೆ. ದೆಹಲಿಯ ತಾಜ್ ಪ್ಯಾಲೇಸ್, ITC ಮೌರ್ಯ, ಲೀಲಾ, ಒಬೆರಾಯ್ , ಮುಂಬೈಯ ತಾಜ್ ಮಹಲ್ ಪ್ಯಾಲೇಸ್, JW ಮ್ಯಾರಿಯಟ್, ಟ್ರೈಡೆಂಟ್ , ಬೆಂಗಳೂರಿನ ರಿಟ್ಜ್-ಕಾರ್ಲ್ಟನ್, ಶಾಂಗ್ರಿ-ಲಾ, ತಾಜ್ ವೆಸ್ಟ್ ಎಂಡ್, ಲೀಲಾ ಪ್ಯಾಲೇಸ್ ಸೇರಿ ಎಲ್ಲಾ ಪ್ರಮುಖ ನಗರಗಳ ಹೋಟೆಲ್ ದರ ಏರಿಕೆ ಮಾಡಲಾಗಿದೆ.
ಹಗುರವಾಗಿ ಪರಿಗಣಸಲ್ಲ: ಸಚಿವರ ಎಚ್ಚರಿಕೆ
ಇಂಡಿಗೋ ಸಮಸ್ಯೆಯಿಂದ ನರಳಿದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ರಿಲೀಫ್, 8 ವಿಶೇಷ ರೈಲು
ಇಂಡಿಗೋ ಏರ್‌ಲೈನ್ಸ್ ವಿಮಾನಗಳನ್ನು ಮತ್ತೆ ಹಳಿಗೆ ತರುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರೂ, ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಸಿಬ್ಬಂದಿ ಕೊರತೆಯಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಮತ್ತು ವಿಮಾನ ರದ್ದತಿಯ ನಡುವೆ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಇತರ ವಿಮಾನಯಾನ ಸಂಸ್ಥೆಗಳಿಗೆ "ಒಂದು ಮಾದರಿಯನ್ನು" ನೀಡಲು ವಿಮಾನಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ವಾಯುಯಾನ ಸಚಿವರು, ನೂರಾರು ವಿಮಾನಗಳ ರದ್ದತಿ ಮತ್ತು ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿರುವುದು ಹೊಸ ಪ್ರಯಾಣಿಕರ ಸುರಕ್ಷತಾ ಮಾನದಂಡಗಳ ಅನುಷ್ಠಾನದ ನಂತರ ಸಂಭವಿಸಿದ ಇಂಡಿಗೋದಲ್ಲಿನ 'ಆಂತರಿಕ ಬಿಕ್ಕಟ್ಟಿನಿಂದ' ಎಂದು ಹೇಳಿದ್ದಾರೆ. 'ನಾವು ಪೈಲಟ್‌ಗಳು, ಸಿಬ್ಬಂದಿ ಮತ್ತು ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸುತ್ತೇವೆ. ಇದನ್ನು ನಾವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸ್ಪಷ್ಟಪಡಿಸಿದ್ದೇವೆ. ಇಂಡಿಗೋ ತನ್ನ ಸಿಬ್ಬಂದಿ ಮತ್ತು ಪಟ್ಟಿಯನ್ನು ನಿರ್ವಹಿಸಬೇಕಾಗಿತ್ತು. ಆದರೆ ಅದು ಹಾಗೆ ಮಾಡಲಿಲ್ಲ. ಇದು ಪ್ರಯಾಣಿಕರಿಗೆ ಅಪಾರ ತೊಂದರೆ ಉಂಟುಮಾಡಿತು. ನಾವು ಈ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಪ್ರತಿ ವಿಮಾನಯಾನ ಸಂಸ್ಥೆಗೂ ಮಾದರಿಯಾಗುತ್ತೇವೆ. ಯಾವುದೇ ತಪ್ಪು ನಡೆದಿದ್ದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಈ ವಿಷಯದ ಬಗ್ಗೆ ಸರ್ಕಾರವು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.