ಬೆಂಗಳೂರು: ಆಟೋ ಚಾಲಕರ ಮಕ್ಕಳು ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸು ತ್ತಿದ್ದರೆ, ಅಂತಹ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಆದಿ ಚುಂಚನಗಿರಿ ಮಠ ವಹಿಸಿ ಕೊಳ್ಳಲು ಸಿದ್ಧವಿದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದರು.
ಚಿತ್ರರಂಗದ ಮೇರು ನಟ ದಿವಂಗತ "ಶಂಕರ್‌ನಾಗ್" ಅವರ ಜನ್ಮದಿನದ ಪ್ರಯುಕ್ತ "ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್", "ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ" ಹಾಗೂ "ವಿಷ್ಣು ಸೇನಾ ಸಮಿತಿ" ನೇತೃತ್ವದಲ್ಲಿ ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ ಆಯೋಜಿಸಿದ್ದ "೧೨ನೇ ವರ್ಷದ ಚಾಲಕರ ದಿನಾಚರಣೆ" ಹಾಗೂ ಸನ್ನಡತೆ ಚಾಲಕರಿಗೆ ಚಿನ್ನದ ಪದಕ ಪ್ರಧಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ, ಜಾಗತಿಕ ಮಟ್ಟ ದಲ್ಲಿ ಟೆಕ್ನಾಲಜಿ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದು, ಆಟೋ ಚಾಲಕರು ಸಹ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಕನಿಷ್ಠಪಕ್ಷ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಆಟೋ ಚಾಲಕರು ಮಕ್ಕಳ ಶಿಕ್ಷಣದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ, ಅವರಿಗೆ ನಮ್ಮ ಮಠ ಸದಾ ಜೊತೆಗೆ ನಿಲ್ಲಲಿದೆ ಎಂದರು.
ಇದನ್ನೂ ಓದಿ: Bangalore News: ಕನ್ನಡದಲ್ಲಿ ವಿಜ್ಞಾನದ ರಸದೌತಣ: ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಿಂದ ವಿಶೇಷ ಅಭಿಯಾನ!
ಆಟೋ ಅಭಿವೃದ್ಧಿ ನಿಗಮ ರಚಿಸಿ: ಆಟೋ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಿ ಸ್ವಾಮ್ಯದ "ಆಟೋ ಅಭಿವೃದ್ಧಿ ನಿಗಮ" ರಚಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ಹೇಳಿದರು.
ಕನ್ನಡ ಉಳಿಸುವ ಹಾಗೂ ಬೆಳೆಸುವ ಕೆಲಸವನ್ನು ಹೆಚ್ಚಾಗಿ ಮಾಡುತ್ತಿರುವವರೇ ಆಟೋ ಚಾಲಕರು, ಇವರ ಅಭಿವೃದ್ಧಿಗಾಗಿ ಸರ್ಕಾರವೇ "ಆಟೋ ಅಭಿವೃದ್ಧಿ ನಿಗಮ" ರಚಿಸುವ ಮೂಲಕ ಅವರ ಕುಟುಂಬವನ್ನು ಕಾಯಬೇಕು ಎಂದು ಹೇಳಿದರು.
ಇನ್ನು, ಅನಧಿಕೃತವಾಗಿ ವೈಟ್‌ಬೋರ್ಡ್ ಬೈಕ್ ಹಾಗೂ ಟ್ಯಾಕ್ಸಿಗಳು ಸಾರಿಗೆ ಸೇವೆ ನೀಡು ತ್ತಿರುವುದರಿಂದ ಆಟೋ ಚಾಲಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ವೈಟ್ ಬೋರ್ಡ್ ಟ್ಯಾಕ್ಸಿ ಹಾಗೂ ಬೈಕ್ ಸೇವೆಗಳನ್ನು ಬ್ಯಾನ್ ಮಾಡುವ ಅವಶ್ಯಕತೆ ಇದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು, ದೂರದೃಷ್ಟಿ ಹೊಂದಿದ್ದ ಶಂಕರ್ ನಾಗ್ ಅವರಿಗೆ ಮರಣೋತ್ತರ ಡಾಕ್ಟರೇಟ್ ಕೊಡಿಸವ ನಿಟ್ಟಿನಲ್ಲಿಯೂ ಸಹ ನನ್ನ ಬೆಂಬಲ ವಿದೆ ಎಂದು ಹೇಳಿದರು.
ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ವೈಟ್ ಬೋರ್ಡ್ ಸೇವೆಗಳನ್ನು ಬ್ಯಾನ್ ಮಾಡುವ ನಿಟ್ಟಿನಲ್ಲಿ ನಾವೆಲ್ಲಾ ಶಾಸಕರು ದನಿ ಎತ್ತಲಿದ್ದೇವೆ. ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೆಯೇ ಅನಧಿಕೃತವಾಗಿ ಸೇವೆ ನೀಡುತ್ತಿದ್ದಾರೆ, ಇದು ಸಾರ್ವಜನಿಕ ರಿಗೂ ಸಹ ಸುರಕ್ಷತೆ ವಿಷಯದಲ್ಲಿ ತೊಂದರೆಯಾಗುತ್ತಿದೆ, ಹೀಗಾಗಿ ವೈಟ್‌ಬೋರ್ಟ್ ಬೈಕ್ ಹಾಗೂ ಟ್ಯಾಕ್ಸ್ ಬ್ಯಾನ್ ಆಗಬೇಕು ಎಂದು ಹೇಳಿದರು.
ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷರಾದ ರಘು ನಾರಾ ಯಣ ಗೌಡ, ಕಳೆದ ೧೨ ವರ್ಷಗಳಿಂದ ಶಂಕರ್‌ನಾಗ್ ಅವರ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ಸನ್ನಡತೆ ಹೊಂದಿರುವ ೭ ಚಾಲಕರಿಗೆ ಚಿನ್ನದ ಪದಕ ನೀಡುವ ಮೂಲಕ ಆಟೋ ಚಾಲಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗು ತ್ತಿದೆ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ರಚಿತಾರಾಮ್, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ನಟ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್, ನಟ ವಿನೋದ್ ಪ್ರಭಾಕರ್,ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಚಿನ್ನದ ಪದಕ ವಿತರಣೆ: ಸನ್ನಡತೆ ಹೊಂದಿದ್ದ ೭ ಆಟೋ ಚಾಲಕ ಹಾಗೂ ಚಾಲಕಿ ಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಇದೇವೇಳೆ ಸಮಾರಂಭದಲ್ಲಿ ನೆರೆದಿದ್ದ ೪ ಸಾವಿರ ಆಟೋ ಚಾಲಕರಿಗೆ ಸಮಸ್ತ್ರ ವಿತರಿಸಲಾಯಿತು.