ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳೆಗೆ ಸಂಕೀರ್ಣ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆಯನ್ನು ಸಕ್ರಿಯಗೊಳಿಸಿದ ಸುಧಾರಿತ ರೊಬೊಟಿಕ್ ತಂತ್ರಜ್ಞಾನ

ಶಸ್ತ್ರಚಿಕಿತ್ಸೆಯ ನಂತರ ಕೇವಲ 12 ಗಂಟೆಗಳಲ್ಲೇ ರೋಗಿಯನ್ನು ವೆಂಟಿಲೇಟರ್‌ ನಿಂದ ಬಿಡುಗಡೆ ಮಾಡಿ ಅವರಿಗೆ ನಡೆಯಲು ಅನುವು ಮಾಡಿಕೊಡಲಾಯಿತು. ಆ ನಂತರ ಬಹಳ ಬೇಗ ವಾರ್ಡ್‌ ಗೆ ಸ್ಥಳಾಂತರಿಸಿ, ಶಸ್ತ್ರಚಿಕಿತ್ಸೆಯ ಮೂರನೇ ದಿನವೇ ಮನೆಗೆ ಡಿಸ್ ಚಾರ್ಜ್ ಮಾಡಲಾಯಿತು. ಒಂದು ವಾರದ ಫಾಲೋ- ಅಪ್‌ ನಡೆಸಲಾಗಿದ್ದು, ಈ ಹಂತದಲ್ಲಿ ಅವರು ಯಾವುದೇ ಸಮಸ್ಯೆಗಳಿಲ್ಲದೆ ಚೆನ್ನಾಗಿಯೇ ಇದ್ದರು

ಇನ್ಫೆಕ್ಟಿವ್ ಎಂಡೋಕಾರ್ಡೈಟಿಸ್ ಮತ್ತು ಇನ್ನಿತರ ಸಂಕೀರ್ಣ ಸಮಸ್ಯೆಗಳಿದ್ದ, ತೀವ್ರಥರದ ಅಪಾಯ ಎದುರಿಸುತ್ತಿದ್ದ 53 ವರ್ಷದ ರೋಗಿಗೆ ಚಿಕಿತ್ಸೆ ನಿಡಲಾಗಿದ್ದು, ಚಿಕಿತ್ಸೆಯ ಬಳಿಕ ಕೇವಲ ಮೂರೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.

ಬೆಂಗಳೂರು: ಅಪೋಲೋ ಹಾಸ್ಪಿಟಲ್ ನ ವೈದ್ಯರ ತಂಡವು ಇನ್ಫೆಕ್ಟಿವ್ ಎಂಡೋಕಾರ್ಡೈಟಿಸ್ ಮತ್ತು ಇನ್ನಿತರ ಸಂಕೀರ್ಣ ಸಮಸ್ಯೆಗಳಿದ್ದ ಮತ್ತು ತೀವ್ರಥರದ ಅಪಾಯ ಎದುರಿಸುತ್ತಿದ್ದ 53 ವರ್ಷದ ರೋಗಿಗೆ ಅತ್ಯಾಧುನಿಕ ದಿ ವಿನ್ಸಿ Xi ಸರ್ಜಿಕಲ್ ಸಿಸ್ಟಂ ಬಳಸಿ ಅತ್ಯಂತ ಅಪರೂಪದ ಮತ್ತು ಅತಿ ಸಂಕೀರ್ಣವಾದ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ, ಮಹತ್ವದ ವೈದ್ಯಕೀಯ ದಾಖಲೆ ಮಾಡಿದೆ.

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರು ಮತ್ತು ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಸಾತ್ಯಕಿ ನಂಬಾಲ ಅವರ ನೇತೃತ್ವ ದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಈ ವಿಶಿಷ್ಟ ಶಸ್ತ್ರ ಚಿಕಿತ್ಸೆಯು ಭಾರತದಲ್ಲಿ ಸಂಕೀರ್ಣ ಬಹು-ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಕನಿಷ್ಠ ಆಕ್ರಮಣಕಾರಿ ರೋಬೋಟಿಕ್ ಸಹಾಯದ ಹೃದಯ ಶಸ್ತ್ರಚಿಕಿತ್ಸಾ ವ್ಯಾಪ್ತಿಗೆ ತಂದಿದ್ದು, ಈ ವಿಭಾಗದಲ್ಲಿ ಬಹುದೊಡ್ಡ ಮೈಲು ಗಲ್ಲು ಸಾಧನೆ ಮಾಡಿದೆ. 

ಇದನ್ನೂ ಓದಿ: Bangalore Cabs KSP App: ಕ್ಯಾಬ್​ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್​ ಅಂಟಿಸಲು ಸೂಚನೆ; ಪೊಲೀಸರಿಂದ ಹೊಸ ಮಾರ್ಗ ಸೂಚಿ ಬಿಡುಗಡೆ

ಭಾರತದಲ್ಲಿ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆ ದಶಕದ ಹಿಂದೆಯೇ ನಡೆದಿದ್ದರೂ ಆ ಆರಂಭಿಕ ಪ್ರಯತ್ನಗಳು ಮೊದಲ ತಲೆಮಾರಿನ ರೋಬೋಟಿಕ್ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದವು. ಇದೀಗ ಅಪೋಲೋ ಬೆಂಗಳೂರು ರೋಬೋಟಿಕ್ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿ, ಹೈ-ಡೆಫಿನಿಷನ್ ದೃಶ್ಯ ವ್ಯವಸ್ಥೆ, ಸುಧಾರಿತ ಉಪಕರಣಗಳು ಮತ್ತು ಹೆಚ್ಚು ಸೂಕ್ಷ್ಮವಾದ ಶಸ್ತ್ರಚಿಕಿತ್ಸಾ ಕಾರ್ಯವಿಧಾನದ ಮೂಲಕ ಈ ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಇಂದಿನ ಅತ್ಯಾಧುನಿಕ ರೋಬೋಟಿಕ್ ವ್ಯವಸ್ಥೆಯಲ್ಲಿ ನಡೆಸಿ ಮತ್ತೆ ಹೊಸ ಮಾನದಂಡ ಹಾಕಿಕೊಟ್ಟಿದೆ.

ಆಸ್ಪತ್ರೆಗೆ ದಾಖಲಾಗಿದ್ದ 53 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಇನ್ಫೆಕ್ಟಿವ್ ಎಂಡೋ ಕಾರ್ಡೈಟಿಸ್‌ ನಿಂದಾಗಿ ಅವರ ಆರ್ಟಿಕ್ ಮತ್ತು ಮೈಟ್ರಲ್ ಕವಾಟಗಳು ತೀವ್ರವಾಗಿ ಹಾನಿಗೊಳ ಗಾಗಿದ್ದವು. ಇದರ ಜೊತೆಗೆ ರುಮಟಾಯ್ಡ್ ಆರ್ಥ್ರೈಟಿಸ್, ಸ್ಥೂಲಕಾಯ, ಥೈರಾಯ್ಡ್ ಕಾರ್ಯದೋಷ ಮತ್ತು ಈ ಹಿಂದೆ ಸ್ಟ್ರೋಕ್ ಆಗಿದ್ದ ಇತಿಹಾಸ ಇದ್ದ ಕಾರಣ ಅವರಿಗೆ ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಹೆಚ್ಚು ಅಪಾಯಕಾರಿಯಾಗಿತ್ತು.

robotic double valve replacement (1)

ಈ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಚಿಕಿತ್ಸಾ ತಂಡವು ರೋಗಿಯ ಶಸ್ತ್ರಚಿಕಿತ್ಸೆ ನಡೆಸಲು ದಿ ವಿನ್ಸಿ Xi ಸರ್ಜಿಕಲ್ ಸಿಸ್ಟಂ ಬಳಸಿ ಕನಿಷ್ಠ ಆಕ್ರಮಣಕಾರಿ ರೋಬೋಟಿಕ್ ವಿಧಾನ ವನ್ನು ಆಯ್ಕೆ ಮಾಡಿಕೊಂಡಿತು. ಟ್ರಾನ್ಸ್‌ ಈಸೋಫೇಜಿಯಲ್ ಎಕೋಕಾರ್ಡಿಯೋಗ್ರಾಫಿ (ಟಿಇಇ) ಮಾರ್ಗದರ್ಶನದಲ್ಲಿ ಏಕಕಾಲದಲ್ಲಿ ಆರ್ಟಿಕ್ ಮತ್ತು ಮೈಟ್ರಲ್ ಕವಾಟಗಳನ್ನು ಜೈವಿಕ ಕವಾಟ ಗಳಿಗೆ (ಬಯೋ ಪ್ರಾಸ್ಥೆಟಿಕ್ ವಾಲ್ವ್ ಗಳು) ಯಶಸ್ವಿಯಾಗಿ ಬದಲಾವಣೆಯನ್ನು ಮಾಡಲಾಯಿತು. ಎದೆಯ ಮಧ್ಯಭಾಗದಲ್ಲಿ ದೊಡ್ಡ ಗಾಯ (ಮಿಡ್ ಲೈನ್ ಸ್ಚೆರ್ನೋಟಮಿ) ಮಾಡದೆಯೇ ಕೇವಲ ಚಿಕ್ಕ ಕೀಹೋಲ್ ನಂತಹ ಸೂಕ್ಷ್ಮ ತೂತುಗಳ ಮೂಲಕ ಇಡೀ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ವಿಶೇಷ ವಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ಕೇವಲ 12 ಗಂಟೆಗಳಲ್ಲೇ ರೋಗಿಯನ್ನು ವೆಂಟಿಲೇಟರ್‌ ನಿಂದ ಬಿಡುಗಡೆ ಮಾಡಿ ಅವರಿಗೆ ನಡೆಯಲು ಅನುವು ಮಾಡಿಕೊಡಲಾಯಿತು. ಆ ನಂತರ ಬಹಳ ಬೇಗ ವಾರ್ಡ್‌ ಗೆ ಸ್ಥಳಾಂತರಿಸಿ, ಶಸ್ತ್ರಚಿಕಿತ್ಸೆಯ ಮೂರನೇ ದಿನವೇ ಮನೆಗೆ ಡಿಸ್ ಚಾರ್ಜ್ ಮಾಡಲಾಯಿತು. ಒಂದು ವಾರದ ಫಾಲೋ- ಅಪ್‌ ನಡೆಸಲಾಗಿದ್ದು, ಈ ಹಂತದಲ್ಲಿ ಅವರು ಯಾವುದೇ ಸಮಸ್ಯೆಗಳಿಲ್ಲದೆ ಚೆನ್ನಾಗಿಯೇ ಇದ್ದರು. ಈ ಪ್ರಕರಣವು ಹೆಚ್ಚು ಸಂಕೀರ್ಣ ಸಂದರ್ಭಗಳು ಎದುರಾದಾಗ ರೋಬೋ ಟಿಕ್ ಹೃದಯ ಶಸ್ತ್ರಚಿಕಿತ್ಸೆಯ ಸುರಕ್ಷತೆ, ನಿಖರತೆ ಮತ್ತು ರೋಗಿಕೇಂದ್ರಿತ ಪ್ರಯೋ ಜನಗಳು ಹೇಗೆ ನೆರವಿಗೆ ಬರುತ್ತವೆ ಎಂಬುದನ್ನು ತೋರಿಸಿಕೊಟ್ಟಿದೆ.

ಈ ಕುರಿತು ಮಾತನಾಡಿರುವ ಡಾ. ಸಾತ್ಯಕಿ ನಂಬಾಲ, ರಾಷ್ಟ್ರೀಯ ನಿರ್ದೇಶಕರು, ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆ, ಅಪೋಲೋ ಆಸ್ಪತ್ರೆಗಳು ಅವರು, “ಈ ಸಾಧನೆ ಕೇವಲ ಅಪೋಲೋ ಆಸ್ಪತ್ರೆ ಸಮೂಹಕ್ಕೆ ಮಾತ್ರವಲ್ಲ, ಏಷ್ಯಾದ ಹೃದಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿಯೇ ಬಹು ದೊಡ್ಡ ಮೈಲುಗಲ್ಲಾಗಿದೆ. ಈ ಹಿಂದೆ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಪ್ರಯತ್ನಗಳು ನಡೆದಿದ್ದವು, ಆದರೆ ಇಂದು ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆಯಲ್ಲಿ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಮಾಡುವ ಮೂಲಕ ಅತ್ಯುನ್ನತ ನಿಖರತೆ, ನಿಯಂತ್ರಣ ಮತ್ತು ಸುರಕ್ಷತೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ಸಾಧನೆಯಿಂದ ಸಂಕೀರ್ಣ ಬಹು-ಕವಾಟ ಶಸ್ತ್ರಚಿಕಿತ್ಸೆಯಲ್ಲಿ ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಏನೆಲ್ಲ ಮಾಡಬಹುದು ಎನ್ನುವುದನ್ನು ನಾವು ತೋರಿಸಿದ್ದೇವೆ” ಎಂದು ಹೇಳಿದರು.

ಈ ಕುರಿತು ಮಾತನಾಡಿದ ಬೆಂಗಳೂರಿನ ಅಪೋಲೋ ಹಾಸ್ಪಿಟಲ್ಸ್ ನ ಕ್ಯಾತ್ ಲ್ಯಾಬ್ ನಿರ್ದೇಶಕರು ಮತ್ತು ಹೃದ್ರೋಗ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಗಿರೀಶ್ ಬಿ. ನವಸುಂದಿ ಅವರು, “ಈ ಶಸ್ತ್ರಚಿಕಿತ್ಸೆಯ ಯಶಸ್ಸು ಆಧುನಿಕ ರೋಬೋಟಿಕ್ ತಂತ್ರಜ್ಞಾನವು ಹೇಗೆ ಹೃದಯ ಶಸ್ತ್ರಚಿಕಿತ್ಸೆಯ ಸ್ವರೂಪವನ್ನೇ ಬದಲಾಯಿಸುತ್ತಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಸಂಕೀರ್ಣ ಹೃದಯ ಕವಾಟ ರೋಗಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಕನಿಷ್ಠ ಆಕ್ರಮಣಕಾರಿ ರೋಬೋಟಿಕ್ ಸಹಾಯದ ಚಿಕಿತ್ಸೆಯ ಅಪಾರ ಸಾಧ್ಯತೆಗಳನ್ನು ಇದು ತೋರ್ಪ ಡಿಸುತ್ತದೆ ಮತ್ತು ರೋಗಿಗೆ ಕಡಿಮೆ ಗಾಯ, ಅತ್ಯಲ್ಪ ರಕ್ತ ನಷ್ಟ ಮತ್ತು ತ್ವರಿತ ಚೇತರಿಕೆಯ ಮೂಲಕ ಚಿಕಿತ್ಸೆ ಒದಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ” ಎಂದು ಹೇಳಿದರು.

ಕರ್ನಾಟಕದ ಅಪೋಲೋ ಹಾಸ್ಪಿಟಲ್ಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಅಕ್ಷಯ್ ಓಲೇಟಿ ಅವರು ಮಾತನಾಡಿ, “ಅಪೋಲೋ ಆಸ್ಪತ್ರೆಗಳು ಯಾವಾಗಲೂ ವೈದ್ಯಕೀಯ ವಿಭಾಗದಲ್ಲಿನ ಹೊಸತನ ಮತ್ತು ಶ್ರೇಷ್ಠತೆಯಲ್ಲಿ ಮುಂಚೂಣಿಯಲ್ಲಿ ನಿಂತಿವೆ. ಅತ್ಯಾಧುನಿಕ ರೋಬೋಟಿಕ್ ವ್ಯವಸ್ಥೆಗಳನ್ನು ಅತ್ಯಂತ ಕುಶಲ ಶಸ್ತ್ರಚಿಕಿತ್ಸಾ ತಂಡದೊಂದಿಗೆ ಸಂಯೋಜಿಸಿ ಅತೀ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ ನಡೆಸುವ ಮೂಲಕ ಆಸ್ಪತ್ರೆಯು ಇದೀಗ ಮಹತ್ತರ ಸಾಧನೆ ಮಾಡಿದೆ.

ಡಾ. ಸತ್ಯಕಿ ಮತ್ತು ಅವರ ತಂಡ ಈವರೆಗೆ 3,000ಕ್ಕೂ ಹೆಚ್ಚು ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, 600ಕ್ಕೂ ಹೆಚ್ಚು ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಗಳನ್ನೂ ಮಾಡಿದೆ. ಈ ಅಪೂರ್ವ ಅನುಭವ ಹೊಂದಿರುವ ತಂಡವು ಇದೀಗ ಈ ಮೈಲುಗಲ್ಲು ಸಾಧನೆ ಮಾಡಿದೆ. ಈ ಸಾಧನೆಯು ನಿಖರತೆಯಿಂದ ಕೂಡಿದ, ಹೊಸ ಕಾಲದ ಹೃದಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಯಾವಾಗಲೂ ಜಾಗತಿಕ ಮಟ್ಟದ ಫಲಿತಾಂಶಗಳನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಈ ಮುಂದಿನ ತಲೆಮಾರಿನ ರೋಬೋಟಿಕ್ ಡಬಲ್ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆಯು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಆಧುನಿಕ ರೊಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯಲ್ಲಿನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಸಾಧಾರಣ ಶಸ್ತ್ರಚಿಕಿತ್ಸಾ ಕೌಶಲ್ಯದೊಂದಿಗೆ ಸಂಯೋಜಿಸುವ ಮೂಲಕ, ಅತೀ ಸಂಕೀರ್ಣ ಮತ್ತು ಹೆಚ್ಚು ಅಪಾಯ ಹೊಂದಿರುವ ರೋಗಿಗಳಿಗೂ ಸುರಕ್ಷಿತ, ವೇಗದ ಮತ್ತು ಹೆಚ್ಚು ಪರಿಣಾಮಕಾರಿ ಚಿಕಿತ್ಸಾ ಪರಿಹಾರಗಳನ್ನು ನೀಡುವಲ್ಲಿ ಅಪೋಲೋ ನಿರಂತರವಾಗಿ ಹೊಸ ಮಾನದಂಡಗಳನ್ನು ಹಾಕಿ ಕೊಡುತ್ತಾ ಬರುತ್ತಿರುವುದನ್ನು ಈ ಪ್ರಕರಣ ಸ್ಪಷ್ಟಪಡಿಸಿದೆ.