Aryabhata International Award: ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಚೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್
“ಉದ್ಯಮಶೀಲತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು” ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪುಷ್ಪಕ್ ಪ್ರಕಾಶ್ ಅವರು ಚೆಕ್ ಗಣರಾಜ್ಯದ ಗೌರವ ರಾಯಭಾರಿಯಾಗಿ ಭಾರತ ಮತ್ತು ಚೆಕ್ ಗಣರಾಜ್ಯ ಸೇರಿದಂತೆ ಹಲವು ದೇಶಗಳ ನಡುವೆ ಬಲವಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
-
ಬೆಂಗಳೂರು: ಪುಷ್ಪಕ್ ಏರೋಸ್ಪೇಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪಕ್ ಪ್ರಕಾಶ್ ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ 2026ಗೆ ಭಾಜನರಾಗಿದ್ದಾರೆ.
“ಉದ್ಯಮಶೀಲತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು” ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪುಷ್ಪಕ್ ಪ್ರಕಾಶ್ ಅವರು ಚೆಕ್ ಗಣರಾಜ್ಯದ ಗೌರವ ರಾಯಭಾರಿಯಾಗಿ ಭಾರತ ಮತ್ತು ಚೆಕ್ ಗಣರಾಜ್ಯ ಸೇರಿದಂತೆ ಹಲವು ದೇಶಗಳ ನಡುವೆ ಬಲವಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪ್ರಯತ್ನಗಳು ಕೈಗಾರಿಕಾ, ಸಾಂಸ್ಕೃತಿಕ ಮತ್ತು ವ್ಯಾಪಾರ ವಲಯದ ಸಹಕಾರವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾ ನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ದೇಶದ ಏರೋಸ್ಪೇಸ್ ಮತ್ತು ರಕ್ಷಣಾ ತಯಾರಿಕಾ ಕ್ಷೇತ್ರಕ್ಕೆ, ನಿರ್ದಿಷ್ಟವಾಗಿ ಅಂತರಿಕ್ಷ ಮತ್ತು ಕಾರ್ಯತಂತ್ರ ಯೋಜನೆಗಳಿಗೆ ಪುಷ್ಪಕ್ ಪ್ರಕಾಶ್ ಅವರು ನಿರಂತರ ಕೊಡುಗೆ ನೀಡಿದ್ದಾರೆ. ಪುಷ್ಪಕರ್ ಏರೋಸ್ಪೆಸ್ ಅಂಡ್ ಡಿಫೆನ್ಸ್ ಸಂಸ್ಥೆ ತನ್ನ ಯಶಸ್ವೀ 35ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಮನ್ನಣೆ ದೊರೆತಿದೆ.
ಕಳೆದ ಹಲವು ದಶಕಗಳಿಂದ ಸಂಸ್ಥೆಯು ಚಂದ್ರಯಾನ, ಮಂಗಳಯಾನ, ಆದಿತ್ಯ-ಎಲ್1, ಕಾರ್ಟೋಸ್ಯಾಟ್, ಜಿ.ಎಸ್.ಎ.ಟಿ ಹಾಗೂ ಐ.ಆರ್.ಎನ್.ಎಸ್.ಎಸ್ ಸೇರಿದಂತೆ ಇಸ್ರೋ ಮತ್ತು ರಕ್ಷಣಾ ಯೋಜನೆಗಳಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಪುಷ್ಪಕ್ ಸಂಸ್ಥೆಯು ಪಿ.ಎಸ್.ಎಲ್.ವಿ, ಜಿ.ಎಸ್.ಎಲ್.ವಿ ಹಾಗೂ ಎಲ್.ವಿ.ಎಂ3 [ಮಾರ್ಕ್-3] ಉಡಾವಣಾ ವಾಹನಗಳ ಕಾರ್ಯಕ್ರಮಗಳಲ್ಲಿ ಸಹ ಮಹತ್ವದ ಕೊಡುಗೆ ನೀಡಿದೆ. ಮುಂದಿನ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಮಿಷನ್ನಲ್ಲಿಯೂ ಸಂಸ್ಥೆ ತನ್ನ ಪಾತ್ರ ನಿರ್ವಹಿಸುತ್ತಿದೆ. ದೇಶ ನಿರ್ಮಾಣಕ್ಕೆ ಸಂಬಂಧಿಸಿದ ಅಂತರಿಕ್ಷ ಯೋಜನೆಗಳ ಕೊಡುಗೆಗಾಗಿ ಪುಷ್ಪಕ್ ಸಂಸ್ಥೆಗೆ ಇಸ್ರೋದಿಂದ ಹಲವು ಬಾರಿ ಗೌರವ ಸ್ವೀಕರಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪುಷ್ಪಕ್ ಪ್ರಕಾಶ್, ಈ ಪ್ರಶಸ್ತಿ ಇನ್ನಷ್ಟು ನಿಷ್ಠೆ, ಹೊಸತನ ಮತ್ತು ಗುಣಮಟ್ಟದೊಂದಿಗೆ ಏರೋಸ್ಪೇಸ್, ರಕ್ಷಣಾ ಮತ್ತು ಅಂತರಿಕ್ಷ ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸಲು ಪ್ರೇರಣೆ ದೊರೆತಿದೆ. ಬೆಂಗಳೂರು ವಿಶ್ವದ ಅಗ್ರಗಣ್ಯ ನಗರವಾಗಿದ್ದು, ಬೆಂಗಳೂರು, ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಲು ಶ್ರಮಿಸುವುದಾಗಿ ಹೇಳಿದರು.