ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬನ್ನೇರುಘಟ್ಟ ಸಫಾರಿ ವೇಳೆ ಚಿರತೆ ದಾಳಿ: ಭಯಾನಕ ವಿಡಿಯೊ ಇಲ್ಲಿದೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಗೆ ಮಹಿಳೆಯೊಬ್ಬರು ತೆರಳಿದ್ದ ಸಂದರ್ಭ ಚಿರತೆಯೊಂದು ದಾಳಿ ಮಾಡಿದೆ. ವಾಹನದ ಕಿಟಕಿ ಪಕ್ಕದಲ್ಲಿ ವೀಕ್ಷಣೆ ಮಾಡುತ್ತಿದ್ದಾಗ ಸಫಾರಿಗೆ ಹೊರಟಿದ್ದ ಮಿನಿ ಬಸ್‌ಗೆ ಚಿರತೆಯೊಂದು ಎರಗಿ ಮಹಿಳೆಯ ಕೈಗೆ ಗಾಯ ಗೊಳಿಸಿದ ಘಟನೆ ವರದಿಯಾಗಿದೆ. ಈ ಆಘಾತಕಾರಿ ದೃಶ್ಯದಿಂದಾಗಿ ಉದ್ಯಾನವನವು ನಾನ್-ಎಸಿ ಸಫಾರಿ ಬಸ್ ಸೇವೆಗಳನ್ನು ತಕ್ಷಣವೇ ಸ್ಥಗಿತಗೊಳಿಸಿದೆ.

ಬನ್ನೇರುಘಟ್ಟ ಸಫಾರಿ ವೇಳೆ ಚಿರತೆ ದಾಳಿ -ಸಂಗ್ರಹ ಚಿತ್ರ

ಬೆಂಗಳೂರು: ಪ್ರಾಣಿಗಳನ್ನು ವೀಕ್ಷಣೆ ಮಾಡುವುದಕ್ಕಾಗಿ ಹೆಚ್ಚಿನವರು ಸಫಾರಿಗೆ ತೆರಳುತ್ತಾರೆ. ಆದರೆ ಇಲ್ಲೊಂದು ಪ್ರವಾಸಿಗರಿಗೆ ಸಫಾರಿಗೆ ಹೋದ ಸಂದರ್ಭದಲ್ಲಿ ಮೈ ಜುಮ್ ಎನಿಸುವ ಘಟನೆಯೊಂದು ನಡೆದಿದೆ. ಹೌದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಗೆ ಮಹಿಳೆ ಯೊಬ್ಬರು ತೆರಳಿದ್ದ ಸಂದರ್ಭ ಚಿರತೆಯೊಂದು ದಾಳಿ ಮಾಡಿದೆ. ವಾಹನದ ಕಿಟಕಿ ಪಕ್ಕದಲ್ಲಿ ವೀಕ್ಷಣೆ ಮಾಡುತ್ತಿದ್ದಾಗ ಸಫಾರಿಗೆ ಹೊರಟಿದ್ದ ಮಿನಿ ಬಸ್‌ಗೆ ಚಿರತೆಯೊಂದು ಏಕಾಏಕಿ ಅಟ್ಯಾಕ್ ಮಾಡಿ ಮಹಿಳೆಯ ಕೈಗೆ ಗಾಯ ಗೊಳಿಸಿದ ಘಟನೆ ವರದಿಯಾಗಿದೆ. ಈ ಆಘಾತಕಾರಿ ದೃಶ್ಯದಿಂದಾಗಿ ಉದ್ಯಾನವನವು ನಾನ್-ಎಸಿ ಸಫಾರಿ ಬಸ್ ಸೇವೆಗಳನ್ನು ತಕ್ಷಣವೇ ಸ್ಥಗಿತಗೊಳಿಸಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು (Viral Video) ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.

ಸಫಾರಿ ವಾಹನದ ಕಿಟಕಿಯ ಪಕ್ಕ ಕುಳಿತಿದ್ದ ಚೆನ್ನೈನ ವಹೀದಾ ಬಾನು (50) ಎಂಬ ಮಹಿಳೆಯ ಕೈಗೆ ಚಿರತೆ ಕಚ್ಚಿ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು ಬಳಿಕ, ಆಸ್ಪತ್ರೆಗೆ ದಾಖಲಿಸಲಾಗಿದೆ‌. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಹೀದಾ ಬಾನು ತಮ್ಮ ಕುಟುಂಬದೊಂದಿಗೆ ಬನ್ನೇರುಘಟ್ಟ ಸಫಾರಿ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಸಫಾರಿ ವಾಹನದ ಕಿಟಕಿಯಲ್ಲಿ ಪ್ರಾಣಿಗಳನ್ನು ವೀಕ್ಷಣೆ ಮಾಡುವಾಗ ರಸ್ತೆಯಲ್ಲಿ ಇದ್ದ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ಆದರೆ ತಕ್ಷಣ ಅಕ್ಕಪಕ್ಕದವರು ಮಹಿಳೆಯ ಕೈ ಹಿಡಿದು ಎಳೆದುಕೊಂಡಿದ್ದಾರೆ.

ಬನ್ನೇರುಘಟ್ಟ ಸಫಾರಿ ವೇಳೆ ಚಿರತೆ ದಾಳಿ: ವಿಡಿಯೊ ಇಲ್ಲಿದೆ



ಇದೇ ಮೂರು ತಿಂಗಳ ಹಿಂದೆಯಷ್ಟೇ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದ್ದು, ಬಾಲಕನೋರ್ವನ ಕೈಗೆ ಗಾಯವಾಗಿತ್ತು. ಪ್ರಾಣಿಗಳು ಪ್ರವಾಸಿಗರೊಂದಿಗೆ ನೇರ ಸಂಪರ್ಕಕ್ಕೆ ಬರದಂತೆ ತಡೆಯಲು ಸಫಾರಿ ವಾಹನಗಳಿಗೆ ಲೋಹದ ತಂತಿ ಜಾಲರಿಯನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಚಿರತೆ ಸಣ್ಣ ಅಂತರದ ಮೂಲಕ ತನ್ನ ಪಂಜವನ್ನು ತಲುಪಿ ಮಹಿಳೆಯ ಕೈಗೆ ಕಚ್ಚಿ ಗಾಯಗೊಳಿಸಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರೇ ಶಾಕ್ ಆಗಿದ್ದಾರೆ. ನೆಟ್ಟಿಗರೊಬ್ಬರು ಕ್ರೂರ ಪ್ರಾಣಿಗಳ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು ಸಫಾರಿ ತೆರಳುವ ಮುನ್ನ ಎಚ್ಚರದಿಂದಿರಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಸುರಕ್ಷತೆ ಇದ್ದರೆ ಮಾತ್ರ ಇದಕ್ಕೆಲ್ಲ ಸಿದ್ದರಾಗಿರಬೇಕು‌‌ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:Viral Video: ಊಬರ್ ಚಾಲಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ; ಕಿಡಿಕಾರಿದ ನೆಟ್ಟಿಗರು!

ಪ್ರವಾಸಿಗರ ಹಿತ ದೃಷ್ಟಿಯಿಂದ, ಪಾರ್ಕ್ ಅಧಿಕಾರಿಗಳು ನಾನ್-ಎಸಿ ಸಫಾರಿ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಎಲ್ಲ ಬಸ್‌ಗಳ ಸುರಕ್ಷತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅವುಗಳ ಲೋಪಗಳನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಉದ್ಯಾನವನದ ಅಧಿಕಾರಿ ಮಾತನಾಡಿ, "ಈ ಹಿಂದೆ ಚಿರತೆ ದಾಳಿಯ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿತ್ತು. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ಸಿಬ್ಬಂದಿಗೆ ಮತ್ತೆ ಸೂಚನೆ ನೀಡಲಾಗಿದೆʼʼ ಎಂದಿದ್ದಾರೆ.