‘ಹರ್‍ರೀ-ಪುರ ‘(Hurrypur) ನೂತನ ಅಭಿಯಾನ ಆರಂಭಿಸಿದ ನವಿ ಯುಪಿಐ!
ಯಾವಾಗ ಉತ್ಪನ್ನ ಮತ್ತು ಕಲ್ಪನೆ ಪರಸ್ಪರ ಪೂರಕವಾಗಿದ್ದಾಗ ಅದು ಪರಿಪೂರ್ಣ ಸಂಯೋಜನೆ ಆಗುತ್ತದೆ. ಆರಂಭದಿಂದಲೇ ನವಿ ಯುಪಿಐ ನ ವಿಶೇಷತೆ ಅದರ ವೇಗ ಎಂಬುದು ನಮಗೆ ತಿಳಿದಿತ್ತು. ಅದೇ ಆಧಾರವಾಗಿ ನಾವು ಹರ್‍ರೀ-ಪುರ (Hurrypur) ಮತ್ತು ಅದರ ಸಂಪೂರ್ಣ ಲೋಕ ವನ್ನು ವಿವರವಾಗಿ ನಿರ್ಮಿಸಲು ಸಾಧ್ಯವಾಯಿತು.
-
ಬೆಂಗಳೂರು: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಣಕಾಸು ಸೇವಾ ಸಂಸ್ಥೆ ಗಳಲ್ಲೊಂದಾದ ನವಿ ಲಿಮಿಟೆಡ್ (ಹಳೆಯ ಹೆಸರು ನವಿ ಟೆಕ್ನಾಲಜೀಸ್ ಲಿಮಿಟೆಡ್), ತನ್ನ ಪ್ರಮುಖ ಉತ್ಪನ್ನ ನವಿ ಯುಪಿಐಗಾಗಿ ವೇಗದ ಪಾವತಿ, ಸರಳತೆ ಹಾಗೂ ತಡೆರಹಿತ ಡಿಜಿಟಲ್ ಪಾವತಿ ಸೌಲಭ್ಯವನ್ನು ಸಂಭ್ರಮಿಸುವ ಪ್ರಭಾವಶೀಲ, ಬಹು ಹಂತದ ಪ್ರಚಾರ ಅಭಿಯಾನ ಪ್ರಾರಂಭಿಸಿದೆ.
ಕ್ರಿಯೆಟಿವ್ ಏಜೆನ್ಸಿ ಸೈಡ್‌ವೇಸ್ ಜೊತೆಗಿನ ಸಹಯೋಗದಲ್ಲಿ ರೂಪುಗೊಂಡ ಈ ಅಭಿಯಾನವು ಪರದೆ, ರಸ್ತೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಇದರ ಮೂಲ ಕಲ್ಪನೆ ಸರಳವಾಗಿದ್ದು ಜಗತ್ತು ವೇಗವಾಗಿ ಸಾಗುತ್ತಿದೆ, ಹಾಗಾದರೆ ನಿಮ್ಮ ಪಾವತಿ ಗಳು ಕೂಡ ಅಷ್ಟು ವೇಗವಾಗಿರಬೇಕು ಎಂಬ ಸಂದೇಶವನ್ನು ಸಾರಿದೆ.
ಈ ಬಹು ಹಂತದ ಅಭಿಯಾನವು ನವಿ ಯುಪಿಐ ಭಾರತದ ಅತ್ಯಂತ ವೇಗವಾಗಿ ಬೆಳೆಯು ತ್ತಿರುವ ಪಾವತಿ ಆಪ್‌ಗಳಲ್ಲೊಂದು ಎಂಬುದನ್ನು ಆಚರಿಸುವ ಮೂಲಕ ಆರಂಭವಾ ಯಿತು. ಹಾಸ್ಯಭರಿತ ಹಾಗೂ ಸುಂದರವಾದ ಶೈಲಿಯ ಎರಡು ಚಿತ್ರಗಳು ನವಿ ಬೆಳವಣಿಗೆ ಯ ಈ ಕಥನವನ್ನು ಟಿವಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಜನರಿಗೆ ತಕ್ಷಣ ತಲುಪಿಸಿವೆ.
ಇದನ್ನೂ ಓದಿ: Bangalore Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಆ ಯಶಸ್ಸಿನ ಹಿನ್ನಲೆಯಲ್ಲಿ, ಬ್ರ್ಯಾಂಡ್ ಈಗ “ ಹರ್‍ರೀ-ಪುರ” (Hurrypur) ಎಂಬ ಕಲ್ಪಿತ ಭಾರತೀಯ ಪಟ್ಟಣದ ರೂಪದಲ್ಲಿ ದೊಡ್ಡ ಹಾಗೂ ಹೆಚ್ಚು ಆಕರ್ಷಕ ಲೋಕವನ್ನು ನಿರ್ಮಿಸಿದೆ - ಇಲ್ಲಿ ಎಲ್ಲವೂ ಮತ್ತು ಎಲ್ಲರೂ ವೇಗವಾಗಿ ಚಲಿಸುತ್ತಾರೆ. ನವಿ ಯುಪಿಐ ಹಾಸ್ಯಾಧಾರಿತ ಕಥಾ ಶೈಲಿ ಈಗ ಮೂರು ಹೊಸ ಚಿತ್ರಗಳ ಮೂಲಕ ಮುಂದುವರಿದಿದೆ - “ಟೈಲರ್”, “ಕೋರ್ಟ್‌ರೂಂ” ಮತ್ತು “ಗ್ಯಾಸ್ ಬಿಲ್” - ಟಿವಿ, ಡಿಜಿಟಲ್ ಮತ್ತು ಕನೆಕ್ಟೆಡ್ ಟಿವಿ ವೇದಿಕೆಗಳಲ್ಲಿ ದೇಶದಾದ್ಯಂತ ಪ್ರಸಾರವಾಗುತ್ತಿವೆ.
ಈ ಕುರಿತು ಮಾತನಾಡಿದ ರಾಜೀವ್ ನರೇಶ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನವಿ ಲಿಮಿಟೆಡ್ (ಹಳೆಯ ಹೆಸರು ನವಿ ಟೆಕ್ನಾಲಜೀಸ್ ಲಿಮಿಟೆಡ್) “ನಾವು ಕೇವಲ ಪೇಯ್ಮೆಂಟ್ ಸೌಲಭ್ಯ ಜಾಹೀರಾತು ಮಾಡುವುದಕ್ಕಲ್ಲ, ವೇಗವಾದ, ಅಡ್ಡಿಯಿಲ್ಲದ ಜೀವನ’ ಹೇಗಿರುತ್ತದೆ ಎಂಬುದನ್ನು ತೋರಿಸಲು ಬಯಸಿದೆವು. ಹರ್‍ರೀ-ಪುರ ಒಂದು ಅದ್ಭುತ ಲೋಕ - ಇಲ್ಲಿ ಎಲ್ಲವೂ ಟರ್ಬೋ ವೇಗದಲ್ಲಿ ನಡೆಯುತ್ತದೆ. ನವಿ ಯುಪಿಐ ಮೂಲಕ, ನಮ್ಮ ಗ್ರಾಹಕರು ಪ್ರತಿ ವಹಿವಾಟಿನಲ್ಲೂ ಆ ವೇಗದ ಅನುಭವ ವನ್ನು ಪಡೆಯಲಿ ಎಂದು ಬಯಸುತ್ತೇವೆ.” ಎಂದರು.
ಸೈಡ್‌ವೇಸ್ ಸಂಸ್ಥಾಪಕ ಅಭಿಜಿತ್ ಅವಸ್ಥಿ ಮಾತನಾಡಿ “ ಯಾವಾಗ ಉತ್ಪನ್ನ ಮತ್ತು ಕಲ್ಪನೆ ಪರಸ್ಪರ ಪೂರಕವಾಗಿದ್ದಾಗ ಅದು ಪರಿಪೂರ್ಣ ಸಂಯೋಜನೆ ಆಗುತ್ತದೆ. ಆರಂಭ ದಿಂದಲೇ ನವಿ ಯುಪಿಐ ನ ವಿಶೇಷತೆ ಅದರ ವೇಗ ಎಂಬುದು ನಮಗೆ ತಿಳಿದಿತ್ತು. ಅದೇ ಆಧಾರವಾಗಿ ನಾವು ಹರ್‍ರೀ-ಪುರ (Hurrypur) ಮತ್ತು ಅದರ ಸಂಪೂರ್ಣ ಲೋಕವನ್ನು ವಿವರವಾಗಿ ನಿರ್ಮಿಸಲು ಸಾಧ್ಯವಾಯಿತು.
ನವಿ ಯುಪಿಐ ತಂಡವು ನಮಗೆ ಸಾಕಷ್ಟು ಸಮಯ ನೀಡಿದ್ದು ನಾವು ಈ ಲೋಕವನ್ನು ನಮ್ಮ ಯೋಜನೆಯಂತೆ ನಿರ್ಮಿಸಿ ಜೀವಂತ ಗೊಳಿಸಲಾಯಿತು.” ಎಂದರು.